Sunday, 27th May 2018

Recent News

ಕಸಾಯಿಖಾನೆಗೆ ಜಾನುವಾರು ಸಾಗಿಸ್ತಿದ್ದವರನ್ನು ಪೊಲೀಸರಿಗೊಪ್ಪಿಸಿದ ಸಂಸದ ಪ್ರತಾಪ್ ಸಿಂಹ

ಚಿತ್ರದುರ್ಗ: ಬೆಂಗಳೂರಿಗೆ ಜಾನುವಾರು ಸಾಗಿಸುತ್ತಿದ್ದವರನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ತಡೆಗಟ್ಟಿ ಪೊಲೀಸರಿಗೆ ಒಪ್ಪಿಸಿದ ಘಟನೆ ಹಿರಿಯೂರು ತಾಲೂಕಿನ ಗಿಡ್ಡೋಬನಹಳ್ಳಿಯಲ್ಲಿ ನಡೆದಿದೆ.

ಕುಷ್ಟಗಿಯಿಂದ ಪ್ರತಾಪ್ ಸಿಂಹ ಬುಧವಾರ ರಾತ್ರಿ ರಸ್ತೆ ಮಾರ್ಗವಾಗಿ ಮೈಸೂರಿಗೆ ಬರುತ್ತಿದ್ದಾಗ ಜಾನುವಾರಗಳಿದ್ದ ವಾಹನವನ್ನು ಕಂಡು ತಡೆದಿದ್ದಾರೆ. ಬಳಿಕ ಕೆಳಗಡೆ ಇಳಿದು 12 ಎತ್ತು, 3 ಎಮ್ಮೆಗಳನ್ನು ಪ್ರತಾಪ್ ಸಿಂಹ ರಕ್ಷಿಸಿದ್ದಾರೆ.

ಈ ವೇಳೆ ಲಾರಿಯಲ್ಲಿದ್ದವರಿಗೆ ಜಾಸ್ತಿ ಮಾತನಾಡಿದರೆ ಪೆಟ್ಟು ತಿಂತೀಯ ಎಂದು ಅವಾಜ್ ಹಾಕಿದ್ದಾರೆ. ಜಾನುವಾರುಗಳನ್ನು ಸಾಗಿಸುತ್ತಿದ್ದ ನಾಗಮಂಗಲದ ಮಂಜುನಾಥ್, ಕೆಂಚಪ್ಪ, ಮಂಜೇಗೌಡರನ್ನು ಬಂಧಿಸಲಾಗಿದೆ. ಜಾನುವಾರುಗಳನ್ನು ಖಾನಾಹೊಸಹಳ್ಳಿಯಿಂದ ಬೆಂಗಳೂರಿನ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು.

ಘಟನಾವಳಿಯನ್ನು ಫೇಸ್‍ಬುಕ್ ಮೂಲಕ ಲೈವ್ ಮಾಡಿದ್ದು, ಐಮಂಗಲ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *