Tuesday, 23rd January 2018

ಸಂಸದರ ವಿರುದ್ಧ ಟ್ರೋಲ್ ಬಾಂಬ್: ರಮ್ಯಾ ಕಾಲೆಳೆದ ಪ್ರತಾಪ್‍ಸಿಂಹ

ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲು ಮೈಸೂರಿನ ಬಿಜೆಪಿ ಸಂಸದರು ಹಾಗೂ ಬೆಂಗಳೂರಿನ ಒಬ್ಬ ಬಿಜೆಪಿ ರಾಜ್ಯಸಭಾ ಸದಸ್ಯರು ಟ್ರೋಲ್ ಟೀಂ ನೇಮಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಮಾಜಿ ಸಂಸದೆ ರಮ್ಯಾ ಅವರನ್ನು ಸಂಸದ ಪ್ರತಾಪ್ ಸಿಂಹ ಕಾಲೆಳಿದ್ದಾರೆ.

ರಮ್ಯಾ ಅವರ ಆರೋಪಕ್ಕೆ ಪ್ರತಿಕಿಯಿಸಿರುವ ಸಂಸದ ಪ್ರತಾಪ್ ಸಿಂಹ, ಪೆದ್ದು ಪೆದ್ದು ಹೇಳಿಕೆ ನೀಡಿ, ಕರ್ನಾಟಕದ ರಾಹುಲ್ ಗಾಂಧಿ ಆಗಿರೋ ರಮ್ಯಾರಿಗೆ ತಾವು ಏನೂ ಹೇಳಿಕೆ ಕೊಡುತ್ತಿದ್ದೇನೆ ಅನ್ನೋದೆ ಗೊತ್ತಿರಲ್ಲ. ಚಿತ್ರರಂಗದಲ್ಲೂ, ರಾಜಕೀಯದಲ್ಲೂ ಎರಡಲ್ಲೂ ರಮ್ಯಾ ನಿರುದ್ಯೋಗಿಯಾಗಿದ್ದರು. ಹೀಗಾಗಿ ರಾಹುಲ್ ಗಾಂಧಿ ಅವರಿಗೆ ಟ್ರೋಲ್ ಮಾಡುವ ಕೆಲಸ ಕೊಟ್ಟಿದ್ದಾರೆ. ಅದನ್ನು ನೆಟ್ಟಗೆ ಮಾಡಲಿ ಎಂದು ರಮ್ಯಾರ ಕಾಲೆಳೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ರಮ್ಯಾರ ಪೆದ್ದತನ ಬಯಲು ಮಾಡೋಕೆ ದೊಡ್ಡ ಯುವ ಸಮೂಹವಿದೆ. ಇವರೆಲ್ಲಾ ನಮ್ಮ ಟೀಂ ಅಂತಾ ರಮ್ಯಾ ಅಂದುಕೊಂಡರೆ ನಾವೇನೂ ಮಾಡೋಕೆ ಆಗುತ್ತದೆ. ಪದೇ ಪದೇ ನನ್ನ ಬಗ್ಗೆ ರಮ್ಯಾ ಟೀಕೆ ಮಾಡುತ್ತಾರೆ. ಅದು ಯಾಕೆ ಅಷ್ಟು ನನ್ನ ಮೇಲೆ ಪ್ರೀತಿನೋ ಗೊತ್ತಿಲ್ಲ ಎಂದು ಪ್ರತಾಪ್ ಸಿಂಹ ಟಾಂಗ್ ನೀಡಿದರು.

Leave a Reply

Your email address will not be published. Required fields are marked *