ಕೊಳವೆ ಬಾವಿಗೆ ಬಿದ್ದ 5 ವರ್ಷದ ಬಾಲಕನ ರಕ್ಷಣೆ- ಆಸ್ಪತ್ರೆಯಲ್ಲಿ ಸಾವು

ಭೋಪಾಲ್: 100 ಅಡಿ ಆಳವಿರುವ ಕೊಳವೆ ಬಾವಿಗೆ ಬಿದ್ದ 5 ವರ್ಷದ ಬಾಲಕನನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ಕೊಳವೆಬಾವಿ ದುರಂತ ಸಂಭವಿಸಿದೆ. 5 ವರ್ಷದ ಬಾಲಕ ಸತ್ಯಂ ಗುರುವಾರ ಆಟ ಆಡುವಾಗ ಆಯತಪ್ಪಿ 100 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ. ಗುರುವಾರ ರಾತ್ರಿ ಗಂಭೀರವಾಗಿ ಗಾಯಗೊಂಡಿದ್ದ ಸತ್ಯಂನನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದರು. ರಕ್ಷಣೆ ಮಾಡಿದ ಬಳಿಕ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ: ಕೊಳವೆಬಾವಿ ದುರಂತ: ಮಣ್ಣಲ್ಲಿ ಮಣ್ಣಾದ 6 ವರ್ಷದ ಕಂದಮ್ಮ ಕಾವೇರಿ

ಚಿಕಿತ್ಸೆ ಫಲಕಾರಿಯಾಗದೇ ಸತ್ಯಂ ಆಸ್ಪತ್ರೆಯಲ್ಲಿ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾನೆ. ಕಳೆದ ಫೆಬ್ರವರಿ ತಿಂಗಳಿನಲ್ಲಿಯೂ 1 ವರ್ಷದ ಮಗುವೊಂದು ಮಧ್ಯಪ್ರದೇಶದ ಬೆಹ್ರಿ ಖುದ್ ಗ್ರಾಮದಲ್ಲಿರುವ 50 ಅಡಿ ಆಳವಿರುವ ಕೊಳವೆ ಬಾವಿಗೆ ಬಿದ್ದಿತ್ತು. 17 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಣೆ ಮಾಡಲಾಗಿತ್ತು.

ಏಪ್ರಿಲ್ 22ರಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ತಾಯಿಯೊಂದಿಗೆ ಕಟ್ಟಿಗೆ ಆರಿಸಲು ಹೋಗಿದ್ದಾಗ 6 ವರ್ಷದ ಬಾಲಕಿ ಕಾವೇರಿ ತೆರೆದ ಕೊಳವೆಬಾವಿಗೆ ಬಿದ್ದಿದ್ದಳು. ಸತತ 58 ಗಂಟೆಗಳ ಕಾರ್ಯಚರಣೆ ಬಳಿಕ ಕಾವೇರಿಯ ಮೃತದೇಹವನ್ನು ಹೊರ ತಗೆಯಲಾಗಿತ್ತು.

 

 

You might also like More from author

Leave A Reply

Your email address will not be published.

badge