ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಂಗನಿಗೆ ಪೂಜೆ ಸಲ್ಲಿಸಿ ಅಂತ್ಯಸಂಸ್ಕಾರ

ಬಾಗಲಕೋಟೆ: ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಮಂಗನಿಗೆ ಊರಿನ ಗ್ರಾಮಸ್ಥರು ಪೂಜೆ, ಪುನಸ್ಕಾರ ಮಾಡಿ ಅಂತ್ಯಸಂಸ್ಕಾರ ನಡೆಸಿದ್ದಾರೆ.

ಬಾಗಲಕೋಟೆ ತಾಲೂಕಿನಲ್ಲಿ ಛಬ್ಬಿ ಕ್ರಾಸ್ ಬಳಿ ಬುಧವಾರ ತಡರಾತ್ರಿ, ರಸ್ತೆ ಅಪಘಾತದಲ್ಲಿ ಮಂಗವೊಂದು ಗಂಭೀರ ಗಾಯಗೊಂಡಿತ್ತು. ಇದನ್ನು ನೋಡಿದ ಗ್ರಾಮಸ್ಥರು ಕೂಡಲೇ ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದರೂ ಮಂಗನನ್ನು ಬದುಕಿಸಲು ಸಾಧ್ಯವಾಗಲಿಲ್ಲ.

ಗುರುವಾರ ಕೋತಿಯ ಮೃತದೇಹವನ್ನು ಕುರ್ಚಿಯನ್ನು ಕುಳ್ಳಿರಿಸಿದ ಛಬ್ಬಿ ಗ್ರಾಮಸ್ಥರು ಪೂಜೆ ಮಾಡಿದರು. ನಂತರ ರಸ್ತೆ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಮಂಗನನ್ನು ಹೂಳಿ ಮಾನವೀಯತೆ ಮೆರೆದ್ರು.

LEAVE A REPLY