Thursday, 24th May 2018

ಶಟರ್ ಓಪನ್ ಮಾಡಿ ಟಾರ್ಚ್ ಹಿಡ್ಕೊಂಡು ಮೊಬೈಲ್ ಅಂಗಡಿ ಕಳ್ಳತನ: ವಿಡಿಯೋ

ಹಾಸನ: ಮೊಬೈಲ್ ಅಂಗಡಿ ಬಾಗಿಲು ಮುರಿದು ಒಳಗೆ ನುಗ್ಗಿದ ಖದೀಮನೊಬ್ಬ ಲಕ್ಷಾಂತರ ರೂಪಾಯಿ ಬೆಲೆಬಾಳುವ ಮೊಬೈಲ್ ದೋಚಿ ಪರಾರಿಯಾಗಿದ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಸಂಗೀತ ಮೊಬೈಲ್ ಅಂಗಡಿಯಲ್ಲಿ ಈ ಕಳ್ಳತನ ನಡೆದಿದೆ. ರೋಹಿತ್ ಎಂಬುವರಿಗೆ ಸೇರಿದ ಈ ಅಂಗಡಿ ಇದಾಗಿದ್ದು ಕಳೆದ ರಾತ್ರಿ 12:30ರ ಸಮಯದಲ್ಲಿ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿವೆ.

ಶಟರ್ ಲಾಕ್ ಓಪನ್ ಮಾಡಿ ಮೇಲಕ್ಕೆ ಎತ್ತಿ ಮೊದಲು ಹಣದ ಡ್ರಾಯರ್ ಹತ್ತಿರ ಹೋಗಿ ಸ್ವಲ್ಪ ದುಡ್ಡು ತಗೊಂಡಿದ್ದಾನೆ. ನಂತರ ಅದೇ ಸ್ಥಳದಲ್ಲಿ ಸುಮಾರು ಮೂರುನಾಲ್ಕು ಹೊಸ ಮೊಬೈಲ್ ಬಾಕ್ಸ್ ಗಳನ್ನು ಕದ್ದಿದ್ದಾನೆ. ಒಟ್ಟಿನಲ್ಲಿ ಎರಡು ಲಕ್ಷ ಮೌಲ್ಯದ ಮೊಬೈಲ್ ಗಳನ್ನು ದೋಚಿಕೊಂಡು ಪರಾರಿಯಾಗಿದ್ದಾನೆ ಎಂದು ಮಾಲೀಕರು ತಿಳಿಸಿದ್ದಾರೆ.

ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *