Wednesday, 23rd May 2018

Recent News

ಕೇಂದ್ರಕ್ಕೆ ಅವಕಾಶ ಕೊಟ್ರೇ ಬರೀ 24 ಗಂಟೆಯಲ್ಲಿ ಕರಾವಳಿ ಶಾಂತವಾಗಿರಿಸ್ತೀವಿ- ಸಿಎಂಗೆ ಡಿವಿಎಸ್ ಬಹಿರಂಗ ಸವಾಲು

ಬೆಂಗಳೂರು: ರಾಜ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಆಳುತ್ತಿದೆ. ಕೇಂದ್ರಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡಲು ಅವಕಾಶ ಕೊಟ್ಟರೆ 24 ಗಂಟೆಗಳಲ್ಲಿ ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಗೆ ತರುತ್ತೇವೆ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಬಹಿರಂಗ ಸವಾಲೆಸೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾಗಿದ್ದು, ಆ ಬಳಿಕ ಕರಾವಳಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿ ಸವಾಲು ಎಸೆದಿದ್ದಾರೆ.

ರಾಜ್ಯದ ಆಡಳಿತ ಕಾಂಗ್ರೆಸ್ ಕೈಯಲ್ಲಿದೆಯೇ ಹೊರತು ಬಿಜೆಪಿ ಕೈಯಲ್ಲಿ ಇಲ್ಲ. ಮಾನ್ಯ ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಇಂದೇ ರಾಜೀನಾಮೆ ಕೊಡಲಿ. ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರ್ಕಾರಕ್ಕೆ ಅವಕಾಶ ಕೊಡಲಿ. ಕೇವಲ 24 ಗಂಟೆಯಲ್ಲಿ ಕರಾವಳಿಯಲ್ಲಿ ಶಾಂತಿ ಕಾಪಾಡುತ್ತೇವೆ. ಯಾಕಂದ್ರೆ ಇವರೇ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಆದ್ರೆ ನಂದಿಸುವ ಕೆಲಸ ಮಾಡಲ್ಲ. ಆದ್ರೆ ಇದನ್ನ ನಂದಿಸೋರು ಯಾರು ಅಂತಾ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: RSS ಕಾರ್ಯಕರ್ತನ ಮೇಲೆ ಹಲ್ಲೆ: ಬಂಟ್ವಾಳ ಮತ್ತೆ ಉದ್ವಿಗ್ನ – ವಾಹನ ಸಂಚಾರ ಅಸ್ತವ್ಯಸ್ಥ

ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಮಂಗಳೂರಿಗೆ ಹೋಗಿದ್ದಾರೆ. ಕಾನೂನು ಸುವ್ಯವಸ್ಥೆ ಬಗ್ಗೆ ಇವರ ಯೋಗ್ಯತೆಗೆ ಒಂದ್ ಮೀಟಿಂಗ್ ಮಾಡಿಲ್ಲ. ಈ ಎಲ್ಲ ಘಟನೆಗಳಿಗೆ ಸಿಎಂ ಸಿದ್ದರಾಮಯ್ಯನವರೇ ಕಾರಣ. ಸಿಎಂ ಅವರೇ ಕರಾವಳಿಯ ಸಚಿವರು, ಶಾಸಕರನ್ನ ಪ್ರಚೋದನೆ ಮಾಡುತ್ತಿದ್ದಾರೆ ಎಂದು ಡಿವಿಎಸ್ ವಾಗ್ದಾಳಿ ನಡೆಸಿದರು.

ಕೇಂದ್ರ ಕಾನೂನು ಬಗ್ಗೆ ಸೂಚನೆ ಕೊಟ್ರೆ ಅಧಿಕಾರ ಹಸ್ತಕ್ಷೇಪ, ಮೂಗು ತೂರಿಸ್ತಾರೆ ಅಂತಾರೆ. ಯಾವುದೇ ರೀತಿ ಕಟ್ಟು ನಿಟ್ಟಿನ ಸೂಚನೆ ಕೊಡ್ತಿಲ್ಲ 4 ವರ್ಷ ಆಯ್ತು. ಇದು ಕೊನೆಯ ವರ್ಷ. ಬಹುಶಃ ಈ ಕೊನೆಯ ವರ್ಷವೇ ಸಿದ್ದರಾಮಯ್ಯ ಪೊಲಿಟಿಕಲ್ ಕೆರಿಯರ್ ಗೆ ಕಡೆಯ ವರ್ಷ ಆಗಬಹುದು ಎಂಬು ಡಿವಿಎಸ್ ಭವಿಷ್ಯ ನುಡಿದರು.

ಇದನ್ನೂ ಓದಿ:  ಚಿಕಿತ್ಸೆ ಫಲಕಾರಿಯಾಗದೆ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವು

ಇದನ್ನೂ ಓದಿ:  ಪೆಟ್ರೋಲ್ ಕೇಳೋ ನೆಪದಲ್ಲಿ ಮಂಗ್ಳೂರಿನಲ್ಲಿ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ

ಇದನ್ನೂ ಓದಿ:  ನನ್ನ ಮಗನನ್ನ ಯಾವ ರಾಜಕಾರಣಿಗಳು, ಸಂಘಟನೆಯವ್ರು ಉಳಿಸಲಿಲ್ಲ: ಶರತ್ ತಂದೆ ಕಣ್ಣೀರು

ಇದನ್ನೂ ಓದಿ: ಶರತ್ ಅಂತ್ಯಕ್ರಿಯೆಗೂ ಮುನ್ನ ಬಂಟ್ವಾಳದಲ್ಲಿ ಮತ್ತೊಂದು ಚಾಕು ಇರಿತ!

ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ನಿಲ್ಲದ ದುಷ್ಕರ್ಮಿಗಳ ಅಟ್ಟಹಾಸ- ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ

 

 

 

 

 

 

Leave a Reply

Your email address will not be published. Required fields are marked *