Tuesday, 19th June 2018

Recent News

ಅರೇ, ಯಾಕಿಂಗಾದ್ರೂ ಮೆಗಾ ಸ್ಟಾರ್ ಚಿರಂಜೀವಿ?

ಹೈದರಾಬಾದ್: ಟಾಲಿವುಡ್‍ನ ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗೆ ‘ಜುವ್ವಾ’ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಚಿರಂಜೀವಿ ಅವರ ಹೊಸ ಲುಕ್ ನೋಡಿ ಎಲ್ಲರೂ ಒಂದು ಕ್ಷಣ ಆಶ್ಚರ್ಯಚಕಿತರಾಗಿದ್ದಾರೆ.

ಚಿರಂಜೀವಿ ಸದ್ಯ ಟಾಲಿವುಡ್ ಬಿಗ್ ಬಜೆಟ್ ಸಿನಿಮಾ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಶೂಟಿಂಗ್‍ನಲ್ಲಿ ಬ್ಯೂಸಿಯಾಗಿದ್ದಾರೆ. ಯಾವಗಲೂ ಮುಖದ ಮೇಲೆ ಮೀಸೆ ಬಿಡುತ್ತಿದ್ದ ಚಿರಂಜೀವಿ ದಿಡೀರ್ ಅಂತಾ ಅದಕ್ಕೆ ಕತ್ತರಿ ಹಾಕಿದ್ದಾರೆ. ಜುವ್ವಾ ಟೀಸರ್ ಕಾರ್ಯಕ್ರಮದಲ್ಲಿ ಕ್ಲೀನ್ ಶೇವ್‍ನಲ್ಲಿ ಚಿರಂಜೀವಿಯರನ್ನು ನೋಡಿದ ಎಲ್ಲರೂ ಒಂದು ಕ್ಷಣ ಶಾಕ್ ಆಗಿದ್ದಾರೆ.

 

‘ಸೈರಾ’ ಐತಿಹಾಸಿಕ ಕಥಾನಕವುಳ್ಳ ಸಿನಿಮಾ. ಸಿನಿಮಾ ಹೆಚ್ಚಾಗಿ ಗ್ರಾಫಿಕ್ಸ್ ಒಳಗೊಂಡಿದ್ದು, ಈ ಹಿನ್ನೆಲೆಯಲ್ಲಿ ಚಿತ್ರದಲ್ಲಿ ಚಿರಂಜೀವಿ ಅವರ ಲುಕ್ ಬದಲಾಯಿಸಲು ಕ್ಲೀನ್ ಶೇವ್ ಮಾಡಿಸಲಾಗಿದೆ. ಚಿತ್ರದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಲಾಗಿದ್ದು, ಅಂದಿನ ರಾಜರ ಉಡುಪಿನಲ್ಲಿ ಚಿರಂಜೀವಿ ಮಿಂಚಲಿದ್ದಾರೆ. ಚಿರಂಜೀವಿ ನಟನೆಯ 151ನೇ ಸಿನಿಮಾ ಇದಾಗಿದ್ದು, ಟಾಲಿವುಡ್ ನಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಇದೇ ಸಿನಿಮಾದಲ್ಲಿ ಕನ್ನಡದ ಮಾಣಿಕ್ಯ ಸುದೀಪ್ ಕೂಡ ಬಣ್ಣ ಹಚ್ಚಿದ್ದಾರೆ.

ಟಾಲಿವುಡ್ ಮತ್ತು ಬಾಲಿವುಡ್‍ನ ಮೆಗಾ ಸ್ಟಾರ್ ಗಳಾದ ಚಿರಂಜೀವಿ ಮತ್ತು ಅಮಿತಾಬ್ ಬಚ್ಚನ್ ಜೊತೆಯಾಗಿ ನಟಿಸುತ್ತಿರುವುದು ಚಿತ್ರದ ಮತ್ತೊಂದು ವಿಶೇಷವಾಗಿದೆ. ಸ್ವಾತಂತ್ರ್ಯ ಹೋರಾಟಗಾರ ನರಸಿಂಹರೆಡ್ಡಿ ಅವರ ಐತಿಹಾಸಿಕ ಕಥೆಯನ್ನು ಹೊಂದಿರುವ ಸೈರಾ ದೊಡ್ಡ ತಾರಾಬಳಗವನ್ನೇ ಹೊಂದಿದೆ. ಸಿಲ್ವರ್ ಸ್ಕ್ರೀನ್ ಕ್ವೀನ್ ನಯನತಾರಾ, ತಮಿಳಿನ ಸ್ಟಾರ್ ವಿಜಯ್ ಸೇಥುಪತಿ, ಟಾಲಿವುಡ್ ನ ಡೇರಿಂಗ್ ಸ್ಟಾರ್ ಜಗಪತಿ ಬಾಬು ಒಳಗೊಂಡಂತೆ ಅನುಭವಿ ಕಲಾವಿದರನ್ನೇ ಸಿನಿಮಾಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಸಾರಥ್ಯದಲ್ಲಿ ಹಾಡುಗಳು ಮೂಡಿಬರಲಿವೆ. ಸೈರಾ ಗೆ ನಿರ್ದೇಶಕ ಸುರೇಂದ್ರ ರೆಡ್ಡಿ ಆ್ಯಕ್ಷನ್ ಕಟ್ ಹೇಳಲಿದ್ದು, ಚಿರಂಜೀವಿ ಪುತ್ರ, ನಟ ರಾಮ್ ಚರಣ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಸಿನಿಮಾ ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿ ಬರಲಿದೆ.

 

Leave a Reply

Your email address will not be published. Required fields are marked *