ರಾಯಚೂರಿನ ಅಂಬಾಮಠ ಜಾತ್ರೆಯಲ್ಲಿ ಎಗ್ಗಿಲ್ಲದೆ ನಡೆಯತ್ತಿದೆ ಗಾಂಜಾ ಸೇವನೆ

ರಾಯಚೂರು: ಇತಿಹಾಸ ಪ್ರಸಿದ್ಧ ಜಿಲ್ಲೆಯ ಸಿಂಧನೂರು ತಾಲೂಕಿನ ಅಂಬಾಮಠ ಗ್ರಾಮದ ಅಂಬಾದೇವಿಯ ಜಾತ್ರಾಮಹೋತ್ಸವ ಆರಂಭಗೊಂಡಿದೆ.

ಜಾತ್ರೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಗಾಂಜಾ ಮತ್ತು ಮದ್ಯ ಸೇವನೆಗೆ ನಿಷೇಧಿಸಿದೆ. ನಿಷೇಧದ ನಡುವೆಯೂ ಎಗ್ಗಿಲ್ಲದೆ ಗಾಂಜಾ ಸೇವನೆ ನಡೆದಿದೆ. ಸಾಧುಗಳ ಜೊತೆ ಸ್ಥಳೀಯರು ಸಹ ಗಾಂಜಾ ಸೇವನೆ ಮಾಡಿ ಅಂಬಾದೇವಿ ಭಜನೆ ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜಾತ್ರೆಗೆ ಆಗಮಿಸುವ ಭಕ್ತರಿಗೆ ಸ್ವಚ್ಛ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇಲ್ಲಿನ ಕೆರೆಯಲ್ಲಿನ ನೀರು ಮಲೀನಗೊಂಡಿದ್ದು ಭಕ್ತರು ಅದೇ ನೀರನ್ನು ಬಳಸುವಂತಾಗಿದೆ.

ಮೂರು ದಿನಗಳ ಕಾಲ ನಡೆಯುವ ಜಾತ್ರೆಗೆ ರಾಜ್ಯ ಸೇರಿದಂತೆ ಮಹಾರಾಷ್ಟ್ರ, ಆಂಧ್ರ, ತೆಲಂಗಾಣದಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಜನವರಿ 15 ರಂದು ಮಹಾರಥೋತ್ಸವ ನಡೆಯಲಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಮೂಲೆ ಮೂಲೆಗಳಿಂದ ಸಾಧುಗಳು ಮಠಕ್ಕೆ ಆಗಮಿಸಿದ್ದು ಗಾಂಜಾ ಸೇವನೆಯಲ್ಲಿ ತೊಡಗಿದ್ದಾರೆ.

LEAVE A REPLY