ಭೋಪಾಲ್: ವ್ಯಕ್ತಿಯೊಬ್ಬ ತಾನೇ ಬೆಂಕಿ ಹಚ್ಚಿಕೊಂಡು ನಂತರ ಯುವತಿಯನ್ನು ತಬ್ಬಿಕೊಂಡು ಆಕೆಯ ಕೊಲೆಗೆ ಯತ್ನಿಸಿದ ಘಟನೆ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ ನಡೆದಿದೆ.
ನವನೀತ್ ಜುನ್ಗರೆ ಬೆಂಕಿ ಹಚ್ಚಿಕೊಂಡ ವ್ಯಕ್ತಿ. ಲೈಂಗಿಕ ಕಿರುಕುಳ ನೀಡಿ ತನ್ನದೇ ಗ್ರಾಮದ ಯುವತಿಯರ ಅಸಭ್ಯ ಫೋಟೋಗಳನ್ನು ಹಂಚುತ್ತಿದ್ದ ಆರೋಪ ಅವನ ಮೇಲೆ ಇತ್ತು. ಈ ಪ್ರಕರಣಕ್ಕೆ ಸಾಕ್ಷಿಯಾಗಿದ್ದ ಯುವತಿಯ ಹತ್ಯೆಗೆ ತನ್ನನ್ನು ತಾನು ಬೆಂಕಿ ಹಚ್ಚಿಕೊಂಡು ಆಕೆಯನ್ನು ತಬ್ಬಿಕೊಂಡಿದ್ದಾನೆ.
ಯುವತಿ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸ್ನೇಹಿತರ ಜೊತೆ ಹೋಟೆಲಿಗೆ ಆಗಮಿಸಿದ್ದಳು. ಈ ವೇಳೆ ನವನೀತ್ ಯುವತಿಯನ್ನು ನೋಡಿದ ತಕ್ಷಣ ತನ್ನ ಮೇಲಿರುವ ಆರೋಪದ ಸಾಕ್ಷಿ ನಾಶಕ್ಕಾಗಿ ಬೆಂಕಿ ಹಂಚಿಕೊಂಡು ನಂತರ ಆಕೆಯನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಾನೆ.
ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೋಟೆಲ್ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಇಬ್ಬರನ್ನು ರಕ್ಷಿಸಿದ್ದಾರೆ. ಈ ಪ್ರಕರಣದ ಬಗ್ಗೆ ಹೆಚ್ಚು ತನಿಖೆ ನಡೆಯುತ್ತಿದ್ದು, ಸದ್ಯ ನವನೀತ್ ವಿರುದ್ಧ ಆತ್ಮಹತ್ಯೆ ಕೇಸ್ ದಾಖಲಾಗಿದೆ.
https://www.youtube.com/watch?time_continue=2&v=oTpq_XOgWzs