Tuesday, 22nd May 2018

Recent News

ಪತ್ನಿಯ ಲವ್ವರ್ ಅಂದ್ಕೊಂಡು 14ರ ಮಗನ ಮೇಲೆಯೇ ಕೊಡಲಿಯಿಂದ ಹಲ್ಲೆಗೈದ ಅಪ್ಪ!

ಹೈದರಾಬಾದ್: ಪತ್ನಿಯ ಪ್ರಿಯಕರ ಅಂದುಕೊಂಡು ಅಪ್ಪನೇ 14 ವರ್ಷದ ಮಗನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಕುರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

14ರ ಹರೆಯದ ಪರಶುರಾಮ ತಂದೆಯಿಂದಲೇ ಹಲ್ಲೆಗೊಳಗಾದ ಹುಡುಗ. ಈ ಘಟನೆ ಬೆಥಾಮೆರ್ಲಾ ಮಂಡಲ್ ಗುತುಪಲ್ಲೆ ಗ್ರಾಮದಲ್ಲಿ ಶುಕ್ರವಾರ ನಡೆದಿದ್ದು, ತಂದೆ ಸೋಮಣ್ಣ ಪತ್ನಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿ ಅಂದುಕೊಂಡು ಹಲ್ಲೆ ಮಾಡಿದ್ದಾನೆ.

ನಡೆದಿದ್ದೇನು?
ಸೋಮಣ್ಣ ಮತ್ತು ರಮಲಕ್ಷ್ಮೀ ಇಬ್ಬರು ಗ್ರಾಮದಲ್ಲಿ ಕೃಷಿ ಕಾರ್ಮಿಕರಾಗಿದ್ದರು. ಈ ದಂಪತಿಗೆ ನಾಲ್ಕು ಮಕ್ಕಳಿದ್ದು, ಸೋಮಣ್ಣನಿಗೆ ತನ್ನ ಪತ್ನಿ ಅದೇ ಗ್ರಾಮದ ಬೇರೊಬ್ಬ ವ್ಯಕ್ತಿಯ ಜೊತೆ ಅನೈತಿಕ ಸಂಬಂಧ ಇದೆ ಎಂಬ ಅನುಮಾನವಿತ್ತು. ಈ ವಿಚಾರವಾಗಿ ಆಗಾಗ ಇಬ್ಬರ ಮಧ್ಯೆ ಜಗಳ ಕೂಡ ನಡೆಯುತ್ತಿತ್ತು. ಶುಕ್ರವಾರ ಸೋಮಣ್ಣ ಕುಡಿದು ಮನೆಗೆ ರಾತ್ರಿ ಬಂದಿದ್ದಾನೆ. ಆಗ ಪತ್ನಿ ಲಕ್ಷ್ಮಿ ತನ್ನ ಮಗ ಪರುಶರಾಮನ ಜೊತೆ ಮಲಗಿದ್ದರು. ಆದರೆ ಸೋಮಣ್ಣ ತನ್ನ ಮಗನನ್ನು ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಬೇರೊಬ್ಬ ವ್ಯಕ್ತಿ ಎಂದು ತಿಳಿದು ಕೋಪಗೊಂಡು ಅಲ್ಲೇ ಪಕ್ಕದಲ್ಲಿದ್ದ ಕೊಡಲಿಯಿಂದ ಮಲಗಿದ್ದ ಮಗನ ಕೈ ಮತ್ತು ಭುಜಗಳಿಗೆ ಹೊಡೆದಿದ್ದಾನೆ.

ಪರಶುರಾಮ ಅಪ್ಪ ಹಲ್ಲೆ ಮಾಡಿದ ಬಳಿಕ ಕೂಗಿಕೊಂಡು ಹಾಸಿಗೆಯಿಂದ ಕೆಳಗೆ ಬಿದ್ದಿದ್ದಾನೆ. ನಂತರ ಹಲ್ಲೆ ಮಾಡಿದ್ದು ಮಗನಿಗೆ ಎಂದು ತಿಳಿದು ಕಣ್ಣೀರಿಟ್ಟು ನೆರೆಹೊರೆಯವರ ಸಹಾಯ ಪಡೆದು ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ಕೊಡಲಿಯಿಂದ ಹಲ್ಲೆ ಮಾಡಿದ್ದರಿಂದ ಗಂಭೀರವಾಗಿ ಪೆಟ್ಟಾಗಿದ್ದು, ವೈದ್ಯರು ತೀವ್ರ ಗಾಯಗಳಾಗಿದೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಬಳಿಕ ಕಾರ್ನೂಲ್‍ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಹುಡುಗನ ಸ್ಥಿತಿ ತೀರ ಗಂಭೀರವಾಗಿದೆ ಎಂದು ಹೇಳಿದ್ದಾರೆ.

ಈ ಘಟನೆ ಸಂಬಂಧ ಪೊಲೀಸರು ಆರೋಪಿ ಸೋಮಣ್ಣ ವಿರುದ್ಧ ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *