Wednesday, 23rd May 2018

Recent News

ಮಲ್ಲಿಕಾರ್ಜುನ ಖರ್ಗೆ ದೇಶದ ಅತಿದೊಡ್ಡ ಶ್ರೀಮಂತ ದಲಿತ- ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ

ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಟ್ವಿಟ್ಟರ್ ವಾರ್ ಜೋರಾಗಿಯೇ ನಡೆಯುತ್ತಿದ್ದು, ಇದೀಗ ಬಿಜೆಪಿಯವರು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತಿರುಗಿ ಬಿದ್ದಿದ್ದಾರೆ.

ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ಟೆಂಪಲ್ ರನ್ ಮುಗಿಸಿ ಹೋದ ನಂತರ ಟೀಕೆಗಳು ಆರಂಭವಾಗಿವೆ. ಬಿಜೆಪಿಯವರು ಇದೀಗ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದಾರೆ.

ವಿಡಿಯೋದಲ್ಲಿ ಮಲ್ಲಿಕಾರ್ಜುನ ಖರ್ಗೆ ದೇಶದ ಅತಿದೊಡ್ಡ ಶ್ರೀಮಂತ ದಲಿತ ವ್ಯಕ್ತಿಯಾಗಿದ್ದು, ಇವರಲ್ಲಿ 50 ಸಾವಿರ ಕೋಟಿ ಆಸ್ತಿಯಿದೆ. ಚಿಕ್ಕಮಗಳೂರಿನಲ್ಲಿ 1000 ಕೋಟಿ ಮೌಲ್ಯದ 300 ಎಕರೆ ಕಾಫಿ ಎಸ್ಟೇಟ್ ಇದೆ ಎಂದು ಆರೋಪ ಮಾಡಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ದೇಶದ 6ನೇ ಶ್ರೀಮಂತ ಸಿಎಂ: ದೇಶದ ಸಿಎಂಗಳ ಆಸ್ತಿ ಎಷ್ಟಿದೆ? ಇಲ್ಲಿದೆ ಮಾಹಿತಿ

1427 ಎಂಜಿನಿಯರ್ ಹುದ್ದೆಗಳ ಅಕ್ರಮ ನೇಮಕಾತಿಯ ಆರೋಪ ಮಾಡಲಾಗಿದ್ದು, ಬನ್ನೇರುಘಟ್ಟದಲ್ಲಿ 500 ಕೋಟಿ ಮೌಲ್ಯದ ಕಾಂಪ್ಲೆಕ್ಸ್, ರಾಮಯ್ಯ ಮೆಡಿಕಲ್ ಕಾಲೇಜು ಸಮೀಪ 25 ಕೋಟಿ ವೆಚ್ಚ ಕಟ್ಟಡ, ಕೆಂಗೇರಿ ಬಳಿ ಸರ್ಕಾರಿ ಜಾಗದಲ್ಲಿ 40 ಎಕರೆ ಫಾರ್ಮ್ ಹೌಸ್, ಮಗಳ ಹೆಸರಿನಲ್ಲಿ 50 ಕೋಟಿ ವೆಚ್ಚದ ಮನೆ, 13 ಎಕರೆ ಬಳ್ಳಾರಿ ರಸ್ತೆಯಲ್ಲಿ ಜಮೀನು, ಇಂದಿರಾನಗರದಲ್ಲಿ 3 ಬಿಲ್ಡಿಂಗ್, ಸದಾಶಿವನಗರದಲ್ಲಿ ಎರಡು ಮನೆ ಇದೆ. ಇವುಗಳ ಬಗ್ಗೆ ಯಾಕೆ ತನಿಖೆ ಆಗ್ತಿಲ್ಲ ಅಂತ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿಯವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಾನು ದೇಶದ 6ನೇ ಶ್ರೀಮಂತ ಸಿಎಂ ಆಗಿದ್ದು ಹೇಗೆ: ಸಿದ್ದರಾಮಯ್ಯ ಹೇಳ್ತಾರೆ ಓದಿ

ನಿಮಗೆ ಬೇರೆ ಯಾರು ವಿರೋಧ ಪಕ್ಷದ ನಾಯಕನ ನೇಮಕ ಮಾಡಲು ಆಗಲಿಲ್ಲವಾ? ಲೋಕಾಯುಕ್ತ ಅಧಿಕಾರವನ್ನು ಕಿತ್ತು ಹಾಕಿದ್ದು ಇದಕ್ಕೇನಾ ಸಿದ್ದರಾಮಯ್ಯ ಅವರೇ? ಚಾರ್ಜ್ ಮಾಡುವ ಕಾಲ ಬಂದಿದೆ. ಹೀಗಾಗಿ ಉತ್ತರ ಕೊಡಿ ಅಂತ ಬಿಜೆಪಿಯವರು ರಾಹುಲ್ ಹಾಗೂ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ.

Leave a Reply

Your email address will not be published. Required fields are marked *