ಲೆನೊವೊ 5100 ಎಂಎಎಚ್ ಬ್ಯಾಟರಿ , ಡ್ಯುಯಲ್ ಸಿಮ್ ಫೋನ್ ದೇಶೀಯ ಮಾರುಕಟ್ಟೆಗೆ ಬಿಡುಗಡೆ

ನವದೆಹಲಿ: ದೇಶೀಯ ಮಾರುಕಟ್ಟೆಗೆ ಚೀನಾದ ಲೆನೊವೊ ಕಂಪೆನಿಯ 5100 ಎಂಎಎಚ್, ಡ್ಯುಯಲ್ ಸಿಮ್ ಹಾಕಬಹುದಾದ ಪಿ2 ಫ್ಯಾಬ್ಲೆಟ್ ಬಿಡುಗಡೆಯಾಗಿದೆ.

3ಜಿಬಿ ರಾಮ್ ಹೊಂದಿರುವ ಫೋನಿಗೆ 16,999 ರೂ. ನಿಗದಿಯಾಗಿದ್ದರೆ, 4ಜಿಬಿ ರಾಮ್ ಹೊಂದಿರುವ ಫೋನಿಗೆ 17,999 ರೂ. ಬೆಲೆಯನ್ನು ನಿಗದಿಪಡಿಸಿದೆ. ಈ ಎರಡೂ ಫೋನ್ ಗಳು ಆನ್ ಲೈನ್ ಶಾಪಿಂಗ್ ತಾಣ ಫ್ಲಿಪ್ ಕಾರ್ಟ್ ನಲ್ಲಿ ಮಾತ್ರ ಲಭ್ಯವಿರಲಿದೆ.

ನಿರಂತರವಾಗಿ ವಿಡಿಯೋವನ್ನು ಪ್ಲೇ ಮಾಡಿದರೆ 18 ಗಂಟೆಗಳ ಕಾಲ ವೀಕ್ಷಣೆ ಮಾಡಬಹುದು ಎಂದು ಕಂಪೆನಿ ತಿಳಿಸಿದೆ. ಅಷ್ಟೇ ಅಲ್ಲದೇ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ನೀಡಿದ್ದು, ಕೇವಲ 15 ನಿಮಿಷ ಚಾರ್ಜ್ ಮಾಡಿದರೆ 10 ಗಂಟೆಗಳ ಕಾಲ ನಾರ್ಮಲ್ ಆಗಿ ಫೋನ್ ಬಳಸಬಹುದು ಎಂದು ಲೆನೊವೊ ಹೇಳಿದೆ.

ಹೋಮ್ ಬಟನ್‍ನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೊಂದಿರುವ ಈ ಫೋನ್ ಡ್ಯುಯಲ್ ಆಪ್ ಮೋಡನ್ನು ಹೊಂದಿದ್ದು, ಎರಡು ಪ್ರತ್ಯೇಕ ಖಾತೆಗಳನ್ನು ಒಂದೇ ಫೋನಿನಿಂದ ನಿರ್ವಹಿಸಲು ಸಾಧ್ಯವಿದೆ.

177 ಗ್ರಾಂ ತೂಕದ ಈ ಫೋನ್ 153*76*8.30 ಮಿ.ಮೀಟರ್ ಗಾತ್ರ, 5.5 ಇಂಚಿನ ಸೂಪರ್ ಅಮೋಲೆಡ್ ಕ್ಯಾಪಾಸಿಟೆಟಿವ್ ಸ್ಕ್ರೀನ್(1080*1920 ಪಿಕ್ಸೆಲ್, 401 ಪಿಪಿಐ) ಹೊಂದಿದೆ. ಆಂಡ್ರಾಯ್ಡ್ ಮಾರ್ಶ್‍ಮೆಲೋ ಆಪರೇಟಿಂಗ್ ಸಿಸ್ಟಂ ಇರುವ ಫೋನಿಗೆ ಕಂಪೆನಿ ಕ್ವಾಲಕಂ ಸ್ನಾಪ್ ಡ್ರಾಗನ್ ಅಕ್ಟಾಕೋರ್ ಪ್ರೊಸೆಸರ್ ನೀಡಿದೆ.

4ಜಿಬಿ ರಾಮ್ ಹೊಂದಿರುವ ಫೋನ್‍ಗೆ 64 ಜಿಬಿ ಆಂತರಿಕ ಮೆಮೊರಿ, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ನೀಡಿದ್ದರೆ, 3ಜಿಬಿ ರಾಮ್ ಹೊಂದಿರುವ ಫೋನಿಗೆ 32 ಜಿಬಿ ಆಂತರಿಕ ಮಮೊರಿ, 128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ನೀಡಿದೆ.

13 ಎಂಪಿ ಹಿಂದುಗಡೆ, 5 ಎಂಪಿ ಮುಂದುಗಡೆ ಕ್ಯಾಮೆರಾದ ಜೊತೆ ಪಿ2 5100 ಎಂಎಎಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿಯನ್ನು ಹೊಂದಿದೆ.

LEAVE A REPLY