Wednesday, 23rd May 2018

Recent News

ತನ್ನ ನೆಚ್ಚಿನ ನಟ ಯಾರೆಂದು ರಿವೀಲ್ ಮಾಡಿದ್ರು ನಯನತಾರಾ

ಚೆನ್ನೈ: ದಕ್ಷಿಣ ಭಾರತದ ಸುಂದರ ನಟಿ ನಯನ ತಾರಾಗೆ ದೇಶಾದ್ಯಂತ ಅಭಿಮಾನಿಗಳಿದ್ದು, ಅಸಂಖ್ಯಾತ ಅಭಿಮಾನಿಗಳಿಗೆ ನಯನತಾರಾ ನೆಚ್ಚಿನ ತಾರೆಯಾಗಿದ್ದಾರೆ. ಆದ್ರೆ ಈ ಸೌತ್ ಇಂಡಿಯಾ ಬೆಡಗಿಗೆ ಇಷ್ಟವಾದ ನಟ ಯಾರು ಅನ್ನೋ ರಹಸ್ಯವನ್ನು ಸ್ವತಃ ನಯನತಾರಾ ಹೊರಹಾಕಿದ್ದಾರೆ.

ತಮಿಳುನಾಡಿನಲ್ಲಿ ಇತ್ತೀಚಿಗೆ ನಡೆದ ವಿಕಾದನ್ ಅವಾರ್ಡ್ ಕಾರ್ಯಕ್ರಮದಲ್ಲಿ ನಯನತಾರಾ ಪಾಲ್ಗೊಂಡಿದ್ದರು. ತಮಿಳಿನ ಆರಮ್ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನಯನತಾರಾ ಮುಡಿಗೇರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಿಮ್ಮ ನೆಚ್ಚಿನ ನಟ ಯಾರು ಎಂದು ಪ್ರಶ್ನೆ ಕೇಳಿದಾಗ ಅವರು ತಾಲಾ ಅಜಿತ್ ನನ್ನ ನೆಚ್ಚಿನ ನಟ ಎಂದು ಹೇಳಿದ್ರು.

ನಯನತಾರಾ ಮಾತಿಗೆ ಇಳೆಯ ದಳಪತಿ ವಿಜಯ್, ವಿಜಯ್ ಸೇತುಪತಿ ಸೇರಿದಂತೆ ಹಲವು ಸ್ಟಾರ್ ನಟರು ಶಿಳ್ಳೆ ಚಪ್ಪಾಳೆ ಹೊಡೆದರು. ನಂತರ ಮರ್ಸಲ್ ವಿಜಯ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಉತ್ತರಿಸಿದ ನಯನತಾರಾ, ವಿಜಯ್ ಶಾಂತ ಸ್ವಭಾವದ ವ್ಯಕ್ತಿಯಾಗಿದ್ದಾರೆ. ಅವರು ಯಾವಾಗಲು ಕಾಮ್ ಆಗಿರ್ತಾರೆ ಎಂದು ಹೇಳಿದ್ರು. ನಯನತಾರಾ ಅಜಿತ್ ಜೊತೆ ಏಕಾನ್, ಬಿಲ್ಲಾ, ಆರಂಭಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ನಯನತಾರಾ ಮತ್ತು ಅಜಿತ್ ಇಬ್ಬರು ತೆರೆಯ ಮೇಲೆ ಉತ್ತಮ ಜೋಡಿ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಅರಮ್ ಸಿನಿಮಾದ ಮೊದಲು ನಯನತಾರಾ ವಿಕಾದನ್ ಅವಾರ್ಡ್ಸ್  ನಾನುಮ್ ರೌಡಿ ಥಾನ್ ಸಿನಿಮಾಗೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದರು.

Leave a Reply

Your email address will not be published. Required fields are marked *