Thursday, 18th January 2018

Recent News

ತನ್ನ ಮತ್ತು ಕರೀನಾ ನಡುವಿನ ರಿಲೇಶನ್ ಶಿಪ್ ನ ಸಾಕ್ಷಿಯನ್ನು ಟ್ವಿಟರ್ ನಲ್ಲಿ ಹರಿಬಿಟ್ಟ

ಮುಂಬೈ: ಬಾಲಿವುಡ್ ನ ಸ್ವಯಂಘೋಷಿತ ಸಿನಿಮಾ ವಿಮರ್ಶಕ ಕಮಲ್ ರಶೀದ್ ಖಾನ್ (ಕೆಆರ್‍ಕೆ) ತಾನು ನಟಿ ಕರೀನಾ ಕಪೂರ್ ಜೊತೆ ನಾಲ್ಕು ವರ್ಷಗಳವರೆಗೆ ರಿಲೇಶನ್ ಶಿಪ್ ನಲ್ಲಿ ಇದ್ದುದರ ಸಾಕ್ಷಿಯಾಗಿ ಫೋಟೋವೊಂದನ್ನು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

ಪ್ರತಿಬಾರಿಯೂ ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತಾ ಸುದ್ದಿಯಲ್ಲಿರುವ ಕೆಆರ್‍ಕೆ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ತಾನು ಬಾಲಿವುಡ್ ಬೇಬೋ ಕರೀನಾ ಮದುವೆಗೂ ಮುಂಚೆ ನನ್ನೊಂದಿಗೆ ನಾಲ್ಕು ವರ್ಷ ರಿಲೇಶನ್ ನಲ್ಲಿದ್ದರು. ಅದಕ್ಕೆ ಈ ಫೋಟೋ ಸಾಕ್ಷಿ ಎಂದು ಕರೀನಾ ಜೊತೆಗಿನ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ನಟಿ ಕಂಗನಾ ರಣಾವತ್ ಮತ್ತು ರಂಗೋಲಿ ಚಾಂದೇಲ್ ಅವರಿಂದ ಚೀಮಾರಿ ಹಾಕಿಸಿಕೊಂಡಿದ್ದ ಕೆಆರ್‍ಕೆ ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದ್ದಾರೆ. ಫೋಟೋದಲ್ಲಿ ಕರೀನಾ ಜೊತೆಯಲ್ಲಿ ಕೆಆರ್‍ಕೆ ನಿಂತಿರುವುದನ್ನು ಕಾಣಬಹುದು. ಆದರೆ ಈ ಫೋಟೋ ಇವರಿಬ್ಬರ ಸಂಬಂಧವಿತ್ತು ಎಂದು ಹೇಳಲು ಅಸಾಧ್ಯವಾಗುತ್ತದೆ. ಹೀಗೆ ನಟಿಯ ಪಕ್ಕ ನಿಂತುಕೊಂಡು ಯಾರು ಬೇಕಾದರೂ ಫೋಟೋ ತೆಗೆದುಕೊಳ್ಳುತ್ತಾರೆ ಎಂದು ಹೇಳಿ ಕರೀನಾ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಚೀಮಾರಿ ಹಾಕಿದ್ದಾರೆ.

ಈ ಟ್ವೀಟ್ ಗೆ ಹಲವರು ಕಮೆಂಟ್ ಮಾಡಿದ್ದು, ಇದೊಂದು ಗ್ರಾಫಿಕ್ ಫೋಟೋ ಅಂತಾ ಬರೆದಿದ್ದಾರೆ. ಇನ್ನೂ ಕೆಲವರು ಯಜಮಾನಿ (ಕರೀನಾ) ಮತ್ತು ನೌಕರ (ಕೆಆರ್‍ಕೆ) ಎಂದು ಕಮೆಂಟ್ ಮಾಡಿದ್ದಾರೆ.

ಕರೀನಾ ಕಪೂರ್ ಮದುವೆಯಾಗಿ ಐದು ವರ್ಷಗಳು ಕಳೆದಿದ್ದು, ಮುದ್ದಾದ ಮಗುವಿನ ತಾಯಿ ಆಗಿದ್ದಾರೆ ಸೈಫ್ ಆಲಿ ಖಾನ್ ಮತ್ತು ಮುದ್ದಾದ ಮಗ ತೈಮೂರ್ ನೊಂದಿಗೆ ಸುಂದರವಾದ ಕುಟುಂಬವನ್ನು ಹೊಂದಿದ್ದಾರೆ. ಆದರೆ ಇದೂವರೆಗೂ ಕರೀನಾ ಮಾತ್ರ ಕೆಆರ್‍ಕೆ ಆರೋಪಗಳಿಗೆ ಉತ್ತರಿಸಿಲ್ಲ.

Leave a Reply

Your email address will not be published. Required fields are marked *