ವಾಟ್ಸಪ್‍ನಲ್ಲೇ ವೇಶ್ಯಾವಾಟಿಕೆ -ಫೋಟೋ ಕಳಿಸಿ, ಅಲ್ಲೇ ಡೀಲ್ ಮಾಡ್ತಾರೆ!

ಕೊಪ್ಪಳ: ಈವರೆಗೆ ಮುಂಬೈ, ಹುಬ್ಬಳ್ಳಿ, ಬೆಂಗಳೂರಿನಂತಹ ಮೆಟ್ರೋ ಸಿಟಿಯಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಇದೀಗ ಸಣ್ಣ ಸಣ್ಣ ನಗರಗಳಿಗೂ ಕಾಲಿಟ್ಟಿದೆ. ವಾಟ್ಸಾಪ್ ಮೂಲಕ ಹುಡುಗಿಯರ ಫೋಟೋ ಕಳುಹಿಸಿ, ರೇಟ್ ಬಗೆಹರಿಸುವ ದಂದೆ ಸದ್ದಿಲ್ಲದೇ ಕೊಪ್ಪಳ ನಗರದಲ್ಲಿ ನಡೆದಿದೆ.

ವೇಶ್ಯಾವಾಟಿಕೆ ದಂಧೆ ಬಗ್ಗೆ ಅರಿತ ಕೆಲ ಸ್ಥಳೀಯರು ಯುವತಿಯರು ಮತ್ತು ಮಧ್ಯ ವರ್ತಿಗಳನ್ನು ಥಳಿಸಿ ಮನೆ ಬಿಡಿಸಿದ್ದಾರೆ. ಕೊಪ್ಪಳ ಸಮೀಪದ ಭಾಗ್ಯನಗರ ಎಂಬ ಗ್ರಾಮದಲ್ಲಿ ಕುಣಿಕೇರಿ ಗ್ರಾಮದ ಇಬ್ಬರು ಯುವಕರು ಮನೆ ಬಾಡಿಗೆಗೆ ಪಡೆದು ಹೊರ ರಾಜ್ಯದ ಮಹಿಳೆಯರನ್ನು ಕರೆಯಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಪ್ರತಿ ವಾರಕ್ಕೆ ಇಬ್ಬರು ಯುವತಿಯರು ಇಲ್ಲಿಗೆ ಬಂದು ಹೋಗುತ್ತಿದ್ದರ. ಬರುವ ಮೊದಲ ದಿನ ಅವರ ಫೋಟೋಗಳನ್ನು ಗಿರಾಕಿಗಳಿಗೆ ಕಳುಹಿಸಿ, ಮುಂಗಡ ಬುಕ್ ಮಾಡಲಾಗುತ್ತಿತ್ತು.

ಭಾಗ್ಯನಗರ ಗ್ರಾಮದಲ್ಲಿ ಕಳೆದ 15 ದಿನದಿಂದ ಕುಣಿಕೇರಿ ಯುವಕರು ಈ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇಲ್ಲಿಗೆ ಬಂದು ಹೋಗುವ ಯುವತಿಯರು ಮತ್ತು ಜನರ ಕುರಿತು ಸ್ಥಳೀಯರಿಗೆ ಅನುಮಾನ ಬಂದಿದ್ದು, ಇಲ್ಲಿ ನಡೆಯುತ್ತಿರುವ ದಂಧೆಯನ್ನು ಖಚಿತಪಡಿಸಿಕೊಂಡು ಮನೆ ಮೇಲೆ ದಾಳಿ ನಡೆಸಿದ್ದಾರೆ. ಮನೆಯಲ್ಲಿದ್ದ ಇಬ್ಬರು ಯುವಕರು ಹಾಗೂ ಇಬ್ಬರು ಯುವತಿಯರನ್ನು ಥಳಿಸಿ ಮನೆ ಬಿಡಿಸಿ ಓಡಿಸಿದ್ದಾರೆ.

 

You might also like More from author

Leave A Reply

Your email address will not be published.

badge