Monday, 28th May 2018

Recent News

ಶಾರೂಖ್-ಅನುಷ್ಕಾ ಶರ್ಮಾ ಅಭಿನಯದ ಚಿತ್ರದ ಹೆಸರು ಬದಲಿಸಿ ಅಂದ್ರಾ ಕತ್ರೀನಾ?

ಮುಂಬೈ: ಆನಂದ್ ಎಲ್ ರೈ ನಿರ್ದೇಶಿಸುತ್ತಿರುವ ಶಾರೂಖ್ ಖಾನ್‍ರ ಮುಂದಿನ ಹೆಸರಿಡದ ಸಿನಿಮಾ ಆರಂಭದಿಂದಲ್ಲೂ ಹೆಚ್ಚು ಸುದ್ದಿಯನ್ನು ಮಾಡುತ್ತಿದೆ. ಆದರೆ ಚಿತ್ರದ ಹೆಸರು ಏನಿರಲಿದೆ ಎಂಬ ವಿಷಯದ ಬಗ್ಗೆ ಚಿತ್ರತಂಡ ತುಟ್ಟಿ ಬಿಚುತ್ತಿಲ್ಲ.

ಇತ್ತೀಚ್ಚಿನ ವಿಷಯವೆನೆಂದರೆ ಕತ್ರೀನಾ ಕೈಫ್ ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಲಿದ್ದು, ಚಿತ್ರದ ಶೀರ್ಷಿಕೆಯನ್ನು ಬದಲಿಸಲು ರೈಗೆ ಹೇಳಿದ್ದಾರಂತೆ. ಪತ್ರಿಕೆಯೊಂದರ ವರದಿ ಪ್ರಕಾರ ‘ಕತ್ರೀನಾ ಮೇರಿ ಜಾನ್’ ಶೀರ್ಷಿಕೆ ಕತ್ರೀನಾಗೆ ಇಷ್ಟವಿಲ್ಲ. ಆದ್ದರಿಂದ ಚಿತ್ರದ ಹೆಸರು ಬದಲಿಸಲು ಹೇಳಿದ್ದಾರೆ ಎನ್ನಲಾಗಿದೆ.

“ಸ್ಕ್ರಿಪ್ಟ್ ನ ಪ್ರಕಾರ ಕತ್ರೀನಾ ಚಿತ್ರದಲ್ಲಿ ಕತ್ರೀನಾ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಬಾಲಿವುಡ್ ಬಾದ್‍ಶಾ ಶಾರೂಖ್ ಖಾನ್ ಕತ್ರೀನಾಳ ದೊಡ್ಡ ಅಭಿಮಾನಿಯಾಗಿ ಕಾಣಿಸಿಕೊಳುತ್ತಿದ್ದಾರೆ. ಆದರೆ ಕ್ಯಾಟ್ ಚಿತ್ರತಂಡಕ್ಕೆ ತನ್ನ ಪಾತ್ರದ ಹೆಸರನ್ನು ಬದಲಿಸಲು ಹೇಳಿದ್ದಾರೆ. ಅದು ಸಂಪೂರ್ಣವಾಗಿ ತನ್ನ ಜೀವನವನ್ನು ಆಧರಿಸಿದೆ ಎಂದು ಪ್ರೇಕ್ಷಕರು ತಿಳಿದುಕೊಳ್ಳಬಾರದು ಎಂದು ಈ ರೀತಿ ಹೇಳಿದ್ದಾರಂತೆ.

ಚಿತ್ರದಲ್ಲಿ ಕತ್ರೀನಾಗೆ ತನ್ನ ಬಾಯ್‍ಫ್ರಂಡ್ ನಟನೊಂದಿಗೆ ಬ್ರೇಕ್‍ಅಪ್ ಆಗುವ ಸನ್ನಿವೇಶಗಳಿವೆ. ರಣ್‍ಬೀರ್ ಮತ್ತು ಕತ್ರೀನಾ ಬ್ರೇಕ್‍ಅಪ್ ಬಗ್ಗೆ ಇನ್ನೂ ಬಾಲಿವುಡ್ ಅಂಗಳದಲ್ಲಿ ಗುಸುಗುಸು ಮುಂದುವರೆದಿದೆ. ಹೀಗಾಗಿ ರೀಲ್ ಮತ್ತು ರಿಯಲ್ ಜೀವನದ ನಡುವಿನ ಹೋಲಿಕೆ ಕತ್ರೀನಾಗೆ ಇಷ್ಟವಿಲ್ಲ. ಹೀಗಾಗಿ ಆ ಪಾತ್ರಕ್ಕೆ ಬೇರೆ ಹೆಸರಿಡಲು ಆನಂದ್ ಹತ್ತಿರ ಮನವಿ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಆದ್ರೆ ಈ ಸುದ್ದಿಯನ್ನು ಕತ್ರೀನಾ ನಿರಾಕರಿಸಿದ್ದಾರೆ. ನಾನು ಚಿತ್ರದಲ್ಲಿ ನಟಿಯಾಗಿ ಅಭಿನಯಿಸುತ್ತಿದ್ದೇನೆ, ಆದರೆ ನಾನು ನನ್ನ ಪಾತ್ರವನ್ನು ನಿರ್ವಹಿಸುವುದಿಲ್ಲ. ನಾನು ಕತ್ರೀನಾ ಕೈಫ್ ಅಲ್ಲ. ಚಿತ್ರದ ಪಾತ್ರದಲ್ಲಿ ನನಗೆ ಬೇರೆ ಹೆಸರು ಇದೆ. ಆದ್ದರಿಂದ ಚಿತ್ರದ ಹೆಸರು ಕತ್ರೀನಾ ಮೇರಿ ಜಾನ್ ಎಂದು ಇರುವುದಿಲ್ಲ ಎಂದು ಕತ್ರೀನಾ ತಿಳಿಸಿದ್ದಾರೆ.

ಯಶ್ ಚೋಪ್ರಾ ನಿರ್ದೇಶಿಸಿದ್ದ ‘ಜಬ್ ತಕ್ ಹೇ ಜಾನ್’ ನಂತರ ಈ ಚಿತ್ರದಲ್ಲಿ ಅನುಷ್ಕಾ ಶರ್ಮಾ, ಶಾರೂಖ್ ಖಾನ್, ಕತ್ರೀನಾ ಕೈಫ್ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *