Saturday, 23rd June 2018

Recent News

ತ್ರಿವಳಿ ತಲಾಖ್ ಪರ ವಾದಿಸಿದ್ದ ಸಿಬಲ್ ತೀರ್ಪಿಗೆ ಪ್ರತಿಕ್ರಿಯಿಸಿದ್ದು ಹೀಗೆ

ನವದೆಹಲಿ: ತ್ರಿವಳಿ ತಲಾಖ್ ತೀರ್ಪನ್ನು ನಾವು ಸ್ವಾಗತಿಸುತ್ತೇನೆ ಎಂದು ಕಾಂಗ್ರೆಸ್ ನಾಯಕ, ಅಖಿಲ ಭಾರತೀಯ ಮುಸ್ಲಿಮರ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್ ಬಿ) ಪರವಾಗಿ ವಾದಿಸಿದ್ದ ಕಪಿಲ್ ಸಿಬಲ್ ಹೇಳಿದ್ದಾರೆ.

ಎಐಸಿಸಿ ಟ್ವೀಟ್ ಮಾಡಿ, ಮಹಿಳೆಯರಿಗೆ ಸಮಾನ ಹಕ್ಕನ್ನು ಕಲ್ಪಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದೆ.

ಸಿಬಲ್ ವಾದ ಹೀಗಿತ್ತು:
ತ್ರಿವಳಿ ತಲಾಖ್ 1,400 ವರ್ಷಗಳ ನಂಬಿಕೆಯ ವಿಷಯವಾಗಿದೆ. ಪ್ರವಾದಿ ಮೊಹಮ್ಮದ್ ಅವರ ಕಾಲಾವಧಿಯಲ್ಲೂ ಸಹ ತ್ರಿವಳಿ ತಲಾಖ್ ನ ಉಲ್ಲೇಖವಿದೆ ಎಂದು ಹೇಳಿದ್ದರು.

ವಾದದ ನಡುವೆ ರಾಮನ ವಿಚಾರವನ್ನು ಪ್ರಸ್ತಾಪಿಸಿದ್ದ ಸಿಬಲ್, ತಲಾಖ್ ನಂಬಿಕೆಯ ಪ್ರಶ್ನೆಯಾಗಿದೆ. ಭಗವಾನ್ ರಾಮ ಅಯೋಧ್ಯೆಯಲ್ಲಿ ಹುಟ್ಟಿದ್ದ ಎಂಬುದು ನಂಬಿಕೆಯಾದರೆ.,ತ್ರಿವಳಿ ತಲಾಖ್ ಸಹ ಮುಸ್ಲಿಮರ ನಂಬಿಕೆ. ಇದರಲ್ಲಿ ಸಂವಿಧಾನ ನೈತಿಕತೆಯ ಪ್ರಶ್ನೆ ಉದ್ಭವಿಸುದಿಲ್ಲ ಎಂದು ಐವರು ನ್ಯಾಯಾಧೀಶರ ಮುಂದೆ ವಾದಿಸಿದ್ದರು.

1,400 ವರ್ಷಗಳ ನಂಬಿಕೆಯ ವಿಷಯವನ್ನು ಹೇಗೆ ಇಸ್ಲಾಮ್ ನ ಭಾಗವಲ್ಲ ಎಂದು ಹೇಳಲು ನಾವ್ಯಾರು ಎಂದು ಅವರು ಪ್ರಶ್ನಿಸಿದ್ದರು.

ಇದನ್ನೂ ಓದಿ: ಸ್ಪೀಡ್ ಪೋಸ್ಟ್ ನಲ್ಲಿ ತಲಾಖ್ ನೀಡಿದ್ದ ಪತಿ ವಿರುದ್ಧ ಗೆದ್ದು ಅನಿಷ್ಟ ಪದ್ದತಿಗೆ ಮುಕ್ತಿ ಹಾಡಿದ್ದು ಈ ಮಹಿಳೆ

Leave a Reply

Your email address will not be published. Required fields are marked *