Wednesday, 20th June 2018

Recent News

ರಂಗ್‍ಬಿರಂಗಿಯ ಕಲರ್ ಫುಲ್ ರಂಗೀನ್ ಹಾಡುಗಳಿಗೆ ಮನಸೋತ ಪ್ರೇಕ್ಷಕ-ನಾಳೆ ತೆರೆಗೆ

ಬೆಂಗಳೂರು: ನಿರ್ದೇಶಕ ಮಲ್ಲಿಕಾರ್ಜುನ್ ಮುತ್ತಲಗೇರಿ ನಿರ್ದೇಶನದ ‘ರಂಗ್‍ಬಿರಂಗಿ’ ಸಿನಿಮಾದ ಮೆಲೋಡಿಯಸ್ ಹಾಡುಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಂಪೂರ್ಣ ನವಕಲಾವಿದರನ್ನು ಒಳಗೊಂಡಿರುವ ರಂಗ್‍ಬಿರಂಗಿ ನಾಳೆ ರಾಜ್ಯಾದ್ಯಂತ ತೆರೆಕಾಣಲಿದೆ.

ಚಿತ್ರದ ಟ್ರೇಲರ್ ಮತ್ತು ಹಾಡುಗಳಿಂದ ‘ರಂಗ್‍ಬಿರಂಗಿ’ ಭರವಸೆಯನ್ನು ಮೂಡಿಸಿದೆ. ಚಿತ್ರ ಒಟ್ಟು ಐದು ಹಾಡುಗಳನ್ನು ಹೊಂದಿದ್ದು, ಹಾಡಿನ ಕ್ಲಿಪ್ ಗಳು ಯುವಕರ ವಾಟ್ಸಪ್, ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಚಿತ್ರಕ್ಕಾಗಿ ನವಕಲಾವಿದರನ್ನು ಆಡಿಷನ್ ಮೂಲಕವೇ ಆಯ್ಕೆ ಮಾಡಿಕೊಂಡು, ಒಂದು ವರ್ಷದವರೆಗೆ ಕಲಾವಿದರೆಲ್ಲರಿಗೂ ತರಬೇತಿ ನೀಡಲಾಗಿದೆ. ಸತತ ಎರಡೂವರೆ ವರ್ಷಗಳ ಪರಿಶ್ರಮದಿಂದ ಸಿನಿಮಾ ಈಗ ತಯಾರಾಗಿದ್ದು ಹಿಂದೆಂದೂ ಕಾಣದ ವಿಭಿನ್ನ ಪ್ರೇಮಕಥೆಯನ್ನು ರಂಗ್‍ಬಿರಂಗಿ ಒಳಗೊಂಡಿದೆ. ನಟಿ ತನ್ವಿ ರಾವ್ ನಟರಾದ ಶ್ರೀಜಿತ್, ಪಂಚು, ಚರಣ್ ಮತ್ತು ಶ್ರೇಯಸ್ ನಾಲ್ವರು ಲೀಡ್ ರೋಲ್‍ನಲ್ಲಿ ನಟಿಸಿದ್ದಾರೆ.

ಯುವ ಮನಸ್ಸುಗಳ ಹೃದಯ ಬಡಿತವನ್ನು ರಂಗ್‍ಬಿರಂಗಿ ಕಥೆಯ ತಿರುಳು. ಕಾಲೇಜ್ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ನಡುವಿನ ಸ್ನೇಹ, ಎಳೆ ಪ್ರೀತಿ ಎಲ್ಲವನ್ನು ಚಿತ್ರ ಒಳಗೊಂಡಿದೆ. ಇದೂವರೆಗೂ ಕಾಣದ ಸುಂದರ ಪ್ರೇಮ ಕಥೆಯನ್ನು ನೀವು ರಂಗ್‍ಬಿರಂಗಿಯಲ್ಲಿ ನೋಡಬಹುದಾಗಿದೆ. ಈ ಮುದ್ದಾದ ನವೀನ ಪ್ರೇಮಕಥೆಗಾಗಿ ಮಣಿಕಾಂತ್ ಕದ್ರಿ ಕ್ಯೂಟ್ ಮ್ಯೂಸಿಕ್ ನೀಡಿದ್ದಾರೆ. ಈಗಾಗಲೇ ಹಾಡುಗಳು ಎಲ್ಲರ ಕಡೆಯಿಂದ ಮೆಚ್ಚುಗೆಯನ್ನು ಪಡೆದುಕೊಂಡಿವೆ ಎಂದು ಚಿತ್ರದ ನಿರ್ದೇಶಕ ಮಲ್ಲಿಕಾರ್ಜುನ್ ಮುತ್ತಲಗೇರಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಕುರಿ ಪ್ರತಾಪ್, ಪ್ರಶಾಂತ್ ಸಿದ್ಧಿ, ಬಾಬು ಹಿರಣಯ್ಯ, ರಾಕಲೈನ್ ಸುಧಾಕರ್, ಸವಿತಾ ಕೃಷ್ಣಮೂರ್ತಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಬೆಂಗಳೂರು ಸುತ್ತಲಿನ ಪ್ರದೇಶ, ಮಂಗಳೂರು ಮತ್ತು ಗೋವಾ ಸೇರಿದಂತೆ ಹಲವು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಮದರಂಗಿ ಸಿನಿಮಾ ನಿರ್ದೇಶಿಸಿ ಸೈ ಅನ್ನಿಸಿಕೊಂಡಿದ್ದ ಮಲ್ಲಿಕಾರ್ಜುನ್ ಮುತ್ತಲಗೇರಿ ‘ರಂಗ್‍ಬಿರಂಗಿ’ಗಾಗಿ ಎರಡೂವರೆ ವರ್ಷವನ್ನು ಮೀಸಲಿಟ್ಟಿದ್ದಾರೆ. ಪ್ರತಿಯೊಂದು ಪಾತ್ರಗಳನ್ನು ಅಚ್ಚುಕಟ್ಟಾಗಿ ಆಯ್ಕೆ ಮಾಡಿಕೊಂಡಿರುವದನ್ನು ಟ್ರೇಲರ್ ನಲ್ಲಿ ಕಾಣಬಹುದಾಗಿದೆ. ಡಿ. ಶಾಂತ್‍ಕುಮಾರ್ ರಂಗ್‍ಬಿರಂಗಿ ಗೆ ಬಂಡವಾಳ ಹಾಕಿದ್ದಾರೆ. ನಾಳೆ ಅಂದ್ರೆ ಫೆಬ್ರವರಿ 23ಕ್ಕೆ ಸಿನಿಮಾ ತೆರೆಕಾಣುತ್ತಿದ್ದು, ನೋಡುವದನ್ನು ಮಾತ್ರ ಮರೆಯಬೇಡಿ.

Leave a Reply

Your email address will not be published. Required fields are marked *