ಸಿಹಿ ಸಿಹಿ ಸಬ್ಬಕ್ಕಿ ಪಾಯಸ ಮಾಡೋ ವಿಧಾನ

ಬ್ಬಕ್ಕಿಯಿಂದ ಅನೇಕ ವಿಧವಾದ ಅಡುಗೆಗಳನ್ನ ಮಾಡಬಹುದು. ಸಾಮಾನ್ಯವಾಗಿ ಸಬ್ಬಕ್ಕಿ ಬಳಸಿ ವಡೆ, ಬೋಂಡಾ, ಕಿಚಡಿ ಮಾಡ್ತಾರೆ. ಅಲ್ಲದೆ ಸಬ್ಬಕ್ಕಿ ಪಾಯಸ ಅಂತೂ ತುಂಬಾ ಫೇಮಸ್. ಸಬ್ಬಕ್ಕಿ ತಿನ್ನೋದು ಆರೋಗ್ಯಕ್ಕೂ ಒಳ್ಳೆಯದು. ಇದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ, ರಕ್ತದೊತ್ತಡವನ್ನ ನಿಯಂತ್ರಿಸುತ್ತದೆ ಹಾಗೂ ದೇಹದ ತೂಕ ಹೆಚ್ಚಿಸಲು ಸಹಕಾರಿ.

ಬೇಕಾಗುವ ಸಾಮಗ್ರಿಗಳು
1. ಸಬ್ಬಕ್ಕಿ – 1/2 ಕಪ್
2. ಸಕ್ಕರೆ – 1/2 ಕಪ್
3. ಹಾಲು – 4 ಕಪ್
4. ದ್ರಾಕ್ಷಿ – 10
5. ಗೋಡಂಬಿ – 10
6. ಏಲಕ್ಕಿ ಪುಡಿ – ಸ್ವಲ್ಪ

ಮಾಡುವ ವಿಧಾನ
* ಒಂದು ಪತ್ರೆಗೆ ಸಬ್ಬಕ್ಕಿ ಹಾಕಿ ಅದಕ್ಕೆ 1 ಕಪ್ ನೀರು ಹಾಕಿ 30 ನಿಮಿಷ ನೆನೆಯಲು ಬಿಡಿ.
* ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ, ಅದಕ್ಕೆ ದ್ರಾಕ್ಷಿ ಮತ್ತು ಗೋಡಂಬಿ ಹಾಕಿ ಕರಿದು ತೆಗೆಯಿರಿ.
* ಒಲೆ ಮೇಲೆ ಪಾತ್ರೆ ಇಟ್ಟು ಅದಕ್ಕೆ ಹಾಲು ಹಾಕಿ ನಂತರ ನೆನೆಸಿದ ಸಬ್ಬಕ್ಕಿ(ನೀರಿನ ಸಮೇತ) ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುದಿಯಲು ಬಿಡಿ. ಹಾಲು ತಳ ಹಿಡಿಯದಂತೆ ಆಗಾಗ ತಿರುವುತ್ತಾ ಇರಬೇಕು.
* ನಂತರ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
* ಸಬ್ಬಕ್ಕಿ ಚೆನ್ನಾಗಿ ಬೆಂದು ಹಾಲು ಗಟ್ಟಿಯಾದಾಗ ಅದಕ್ಕೆ ಕರಿದ ದ್ರಾಕ್ಷಿ, ಗೋಡಂಬಿ ಹಾಕಿ 5 ನಿಮಿಷ ಕುದಿಸಿ
* ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಒಲೆಯಿಂದ ಇಳಿಸಿದ್ರೆ ಸಬ್ಬಕ್ಕಿ ಪಾಯಸ ರೆಡಿ.

(ಇದಕ್ಕೆ ಸಕ್ಕರೆ ಬದಲಾಗಿ ಬೆಲ್ಲ ಕೂಡ ಹಾಕಬಹುದು- 4 ಕಪ್ ಹಾಲಿಗೆ 1 ಬೆಲ್ಲ ಅಥವಾ ನಿಮಗೆ ಎಷ್ಟು ಸಿಹಿ ಬೇಕೋ ಅದಕ್ಕನುಗುಣವಾಗಿ ಬಳಸಿ.)

You might also like More from author

Leave A Reply

Your email address will not be published.

badge