Monday, 21st May 2018

Recent News

ಅಕ್ಕ ಕಂಗನಾ ಗಾಸಿಪ್ ಪ್ರಶ್ನಿಸಿದ್ದಕ್ಕೆ ರೊಚ್ಚಿಗೆದ್ದ ತಂಗಿ ರಂಗೋಲಿ ಚಂದಲ್

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಬಗ್ಗೆ ಸಾಕಷ್ಟು ಗಾಸಿಪ್ ಸುದ್ದಿಗಳು ಹರಿದಾಡುತ್ತಿವೆ. ಆದರೆ ಕಂಗನಾ ಸಹೋದರಿ ರಂಗೋಲಿ ಚಂದಲ್ ಇದಕ್ಕೆಲ್ಲ ಟ್ವಿಟ್ಟರ್‍ನಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಹಲವು ವರ್ಷಗಳ ಹಿಂದೆ ನಡೆದಿದ್ದ ಘಟನೆಯನ್ನು ನೆನಪು ಮಾಡಿಕೊಂಡ ಕಂಗನಾ, ನಟ ಆದಿತ್ಯಾ ಪಾಂಚೋಲಿ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದರು. ಈ ಸಂಬಂಧ ನಾನು ಆದಿತ್ಯಾ ಪಾಂಚೋಲಿ ಹಲ್ಲೆ ಮಾಡಿದ್ದರ ಬಗ್ಗೆ ಅವರ ಪತ್ನಿ ಜರೀನಾ ವಹಾಬ್‍ರಿಗೆ ನಾನು ನಿಮ್ಮ ಮಗಳಿಗಿಂತ(ಸನಾ) ಚಿಕ್ಕವಳು. ಇದೆಲ್ಲಾ ನನಗೆ ಹೊಸದು. ದಯವಿಟ್ಟು ಕಾಪಾಡಿ, ನಾನು ನಿಮ್ಮ ಮಗಳ ಸಮಾನ ಎಂದು ಮನವಿ ಮಾಡಿಕೊಂಡಿದ್ದೇನು. ಈ ವೇಳೆ ಜರೀನಾ ನನಗೆ ಸಹಾಯ ಮಾಡಲು ಹಿಂದೇಟು ಹಾಕಿದರು ಎಂದು ತಿಳಿಸಿದ್ದರು.

ಸ್ವಯಂ ಘೋಷಿತ ಚಲನಚಿತ್ರ ವಿರ್ಮಶಕ ಕಮಲ್ ರಶೀದ್ ಖಾನ್ (ಕೆಆರ್‍ಕೆ) ಟ್ಟಿಟ್ಟರ್ ನಲ್ಲಿ ರಂಗೋಲಿ ಜೊತೆ ಅದಿತ್ಯ ಪಾಂಚೋಲಿ ವಿರುದ್ಧ ಕಂಗನಾ ಮಾಡಿದ ಎಲ್ಲಾ ಆರೋಪಗಳ ತಿರುಗೇಟು ನೀಡಿ ಟ್ವೀಟ್ ಮಾಡಿದ್ದಾರೆ.

ಕಂಗನಾ ಅದಿತ್ಯರನ್ನು 2005ರಲ್ಲಿಯೇ ಭೇಟಿಯಾಗಿದ್ದಳು ಹಾಗೂ 2006ರಲ್ಲಿ ಅವಳ ಚಿತ್ರ ಬಿಡುಗಡೆಯಾಗಿತ್ತು. ನಿಮ್ಮ ಅಕ್ಕ ಕಂಗನಾ 2003ರಲ್ಲೇ ಆದಿತ್ಯಾರನ್ನು ಭೇಟಿ ಮಾಡಿದಕ್ಕೆ ನನ್ನ ಬಳಿ 5 ಪುರಾವೆಗಳಿವೆ ಎಂದು ಕೆಆರ್‍ಕೆ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಕಂಗನಾ ನನ್ನ ಗಂಡನೊಂದಿಗೆ ನಾಲ್ಕೂವರೆ ವರ್ಷಗಳಿಂದ ಡೇಟ್ ನಲ್ಲಿದ್ದಾಳೆ: ಜರೀನಾ ವಹಾಬ್ 

ಟ್ವೀಟ್‍ಗೆ ಪ್ರತಿಕ್ರಿಯಿಸಿದ ರಂಗೋಲಿ ಬೇರೆಯವರಗೆ ತಪ್ಪು ಮಾಹಿತಿ ನೀಡಿ ನಿನ್ನ ಮನೆಯನ್ನು ನಡೆಸುತ್ತೀಯ. ನಿನಗೆ ನಾಚಿಕೆ ಆಗುವುದಿಲ್ಲ. ನಿನ್ನ ಯೋಗ್ಯತೆ ಎನು ಎಂದು ಪ್ರಶ್ನಿಸಿ ರಂಗೋಲಿ ತರಾಟಗೆ ತೆಗೆದುಕೊಂಡಿದ್ದಾರೆ.

ರಂಗೋಲಿ ತನ್ನ ಬಗ್ಗೆ ಆಪಾದನೆ ಮಾಡುತ್ತಿದ್ದನ್ನು ಗಮನಿಸಿದ ಕೆಆರ್‍ಕೆ ನನ್ನ ಬಳಿ ನಿಮ್ಮ ಅಕ್ಕ ಮೊದಲ ಬಾರಿಗೆ ಶಿಲ್ಪಾ ಶೆಟ್ಟಿ ಮನೆಯಲ್ಲಿ ಭೇಟಿಯಾಗಿರುವ ಫೋಟೋಗಳಿವೆ ಎಂದು ಉತ್ತರಿಸಿದ್ದಾರೆ. ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ರಂಗೋಲಿ ನಿನ್ನ ವಿಗ್ ನೋಡು ಎಷ್ಟು ಹಳೆಯದಾಗಿದೆ. ನಿನ್ನ ಮುಖವು ಸತ್ತ ಕಾಗೆ ಹಾಗಿದೆ. ನಿನ್ನ ಬಳಿಯಿರುವ ದಾಖಲೆಗಳನ್ನು ಬಿಡುಗಡೆಗೊಳಿಸಿ ಬಳಿಕ ಮಾತನಾಡು ಎಂದಿದ್ದಾರೆ.

ಕಂಗನಾ ಆರೋಪಕ್ಕೆ ಸಂಬಂಧಿಸಿದಂತೆ ರಂಗೋಲಿ ಮತ್ತು ಕೆಆರ್‍ಕೆ ನಡುವೆ ಟ್ವಿಟರ್ ಭಾರೀ ಜಟಾಪಟಿ ನಡೆದಿದೆ. ಒಬ್ಬರ ಟ್ವೀಟ್ ಗೆ ಒಬ್ಬರು ಉತ್ತರ ನೀಡುತ್ತಾ ಹೋಗಿದ್ದಾರೆ. ರಂಗೋಲಿ ಮತ್ತು ಕೆಆರ್‍ಕೆ ನಡುವಿನ ಟ್ವೀಟ್ ಗಳನ್ನು ಈ ಕೆಳಗೆ ನೀಡಲಾಗಿದೆ.

 

Leave a Reply

Your email address will not be published. Required fields are marked *