Thursday, 24th May 2018

Recent News

ಇನ್ನೂ 6 ತಿಂಗಳು ಮಾತ್ರ, ಆಮೇಲೆ ನೋಡ್ಕೊಳ್ತೀನಿ: ಪೊಲೀಸ್ರಿಗೆ ಶಾಸಕ ಸಂಜಯ್ ಪಾಟೀಲ್ ಅವಾಜ್

ಬೆಳಗಾವಿ: ಇಂದು ನಗರದಲ್ಲಿ ಬಿಜೆಪಿಯಿಂದ ಮಂಗಳೂರು ಚಲೋ ಬೈಕ್ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆ ತಡೆಯಲು ಮುಂದಾದ ಪೊಲೀಸರಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ್ ಪಾಟೀಲ್, ಇನ್ನೂ ಕೇವಲ ಆರು ತಿಂಗಳು ಮಾತ್ರ ಮುಂದಿನ ದಿನಗಳಲ್ಲಿ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಬಹಿರಂಗವಾಗಿ ಅವಾಜ್ ಹಾಕಿದ್ದಾರೆ.

ಪೊಲೀಸರು ಸಮಾಧಾನ ಮಾಡಲು ಪ್ರಯತ್ನಿಸಿದಾಗ ಸುಮ್ಮನಾಗದ ಶಾಸಕರು ನಮ್ಮನ್ನೇಕೆ ಬಂಧಿಸುತ್ತಿದ್ದೀರಿ, ನಾವೇನು ಪ್ರತಿಭಟನೆ ಮಾಡುತ್ತಿಲ್ಲ. ಬೈಕ್ ರ‍್ಯಾಲಿಗಾಗಿ ಒಂದೆಡೆ ಸೇರಿದ್ದೇವೆ. ನಾವು ಪ್ರತಿಭಟನೆ ಮಾಡಿದ್ದನ್ನು ನೀವು ನೋಡಿದ್ದೇವೆ. ನಮ್ಮ ಮೈ ಮುಟ್ಟುವಂತಿಲ್ಲ. ನಾವು ನಿಜ ಹೇಳುವವರು ಒಂದೇ ತಂದೆ-ತಾಯಿಗೆ ಹುಟ್ಟಿದವರು. ಸುಮ್ಮನೆ ನಮ್ಮಲೇ ಆರೋಪ ಮಾಡಬೇಡಿ ಎಂದು ಎಸಿಪಿ ಜಯಕುಮಾರ್ ಅವರ ವಿರುದ್ಧ ಕೋಪಗೊಂಡರು.

ಇದನ್ನೂ ಓದಿ: ಪಕ್ಷದವ್ರಿಗೆ ಕಿರುಕುಳ ಕೊಟ್ರೆ ಸುಮ್ಮನಿರಲ್ಲ, ಅಧಿಕಾರಕ್ಕೆ ಬಂದ್ಮೇಲೆ ಜಾಗ ತೋರಿಸ್ತೀವಿ- ಪೊಲೀಸರಿಗೆ ಬಿಎಸ್‍ವೈ ಧಮ್ಕಿ

ಬೆಳಗಾವಿಯಲ್ಲಿ ಇಂದು ರ‍್ಯಾಲಿಗೆ ನಿರ್ಬಂಧ ಹೇರಲಾಗಿತ್ತು. ಆದರೂ ಬಿಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ನಗರ ಪ್ರವೇಶಕ್ಕೆ ಪ್ರಯತ್ನಿಸಿದ್ರು. ಹೀಗಾಗಿ ಎಸಿಪಿ ಜಯಕುಮಾರ್ ಅವರು ಚನ್ನಮ್ಮ ವೃತ್ತದಲ್ಲಿಯೇ ಬಿಜೆಪಿ ಕಾರ್ಯಕರ್ತರನ್ನು ತೆಡೆದಿದ್ದರು. ಕೊನೆಗೆ ಪರಿಸ್ಥಿತಿ ವಿಕೋಪಕ್ಕೆ ಬದಲಾಗುತ್ತಿದ್ದಂತೆ ಪೊಲೀಸರು ಶಾಸಕರನ್ನು ವಶಕ್ಕೆ ಪಡೆದುಕೊಂಡರು.

Leave a Reply

Your email address will not be published. Required fields are marked *