ಮುಂಬೈ: ಸಮ್ಮರ್ ಸರ್ಪ್ರೈಸ್ ಆಫರನ್ನು ಹಿಂದಕ್ಕೆ ಪಡೆದಿದ್ದ ಜಿಯೋ ಈಗ ಧನ್ ಧನಾ ಧನ್ ಹೆಸರಿನಲ್ಲಿ ಎರಡು ರಿಚಾರ್ಜ್ ಪ್ಯಾಕ್ ಬಿಡುಗಡೆ ಮಾಡಿದೆ.
ಪ್ರೈಮ್ ಗ್ರಾಹಕರಿಗೆ 3 ತಿಂಗಳು ವ್ಯಾಲಿಟಿಡಿ ಹೊಂದಿರುವ 309 ರೂ. ಮತ್ತು 509 ರೂ. ಎರಡು ಹೊಸ ಆಫರ್ ರಿಲೀಸ್ ಮಾಡಿದೆ. ಈ ಆಫರ್ನಲ್ಲಿ ಎಲ್ಲ ಕರೆಗಳು, ಎಸ್ಎಂಎಸ್ ಮತ್ತು ಜಿಯೋ ಆಪ್ ಉಚಿತವಾಗಿರಲಿದೆ.
309 ರೂ. ರಿಚಾರ್ಜ್ ಮಾಡಿದ್ರೆ ಪ್ರತಿ ದಿನ 1 ಜಿಬಿ ಡೇಟಾವನ್ನು ಪಡೆಯಬಹುದಾಗಿದೆ. ಈ ಆಫರ್ ನಾನ್ ಪ್ರೈಮ್ ಸದಸ್ಯರು ಪಡೆಯಬೇಕಾದರೆ 408 ರೂ.(ಜಿಯೋ ಪ್ರೈಮ್ 99 ರೂ. + 309 ರೂ.) ರಿಚಾರ್ಜ್ ಮಾಡಬೇಕಾಗುತ್ತದೆ.
509 ರೂ. ರಿಚಾರ್ಜ್ ಮಾಡಿದ್ರೆ ಪ್ರೈಮ್ ಸದಸ್ಯರು ಪ್ರತಿ ದಿನ 2 ಜಿಬಿ ಡೇಟಾವನ್ನು ಪಡೆಯಬಹುದಾಗಿದೆ. ನಾನ್ ಪ್ರೈಮ್ ಸದಸ್ಯರು ಈ ಆಫರನ್ನು ಪಡೆಯಬೇಕಾದರೆ 608 ರೂ.( ಜಿಯೋ ಪ್ರೈಮ್ 99 ರೂ+ 509 ರೂ.) ರಿಚಾರ್ಜ್ ಮಾಡಬೇಕಾಗುತ್ತದೆ.
ಇದನ್ನೂ ಓದಿ:ಜಿಯೋ ಸರ್ಪ್ರೈಸ್ ಆಫರನ್ನು ಟ್ರಾಯ್ ಕ್ಯಾನ್ಸಲ್ ಮಾಡಿದ್ದು ಯಾಕೆ?
ಟ್ರಾಯ್ ನಿರ್ದೇಶನದ ಹಿನ್ನೆಲೆಯಲ್ಲಿ ಜಿಯೋ ಸಮ್ಮರ್ ಸರ್ಪ್ರೈಸ್ ಆಫರನ್ನು ಹಿಂದಕ್ಕೆ ಪಡೆದುಕೊಂಡಿತ್ತು. ಹಿಂದಕ್ಕೆ ಪಡೆದುಕೊಂಡ ಬಳಿಕ ಶೀಘ್ರವೇ ಹೊಸ ಆಫರ್ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಜಿಯೋ ಹೇಳಿತ್ತು.
Here's how to live the #JioDhanDhanaDhan life. pic.twitter.com/yVKePMtizD
— Reliance Jio (@reliancejio) April 11, 2017