Friday, 22nd June 2018

Recent News

ಪೋಲಿಯೋ ಕಾಡಿದರೂ ಕುಗ್ಗದ ಉತ್ಸಾಹ- ಚಿತ್ರದುರ್ಗದ ಜಯಪ್ರಕಾಶ್ ಗೆ ಕೈ ಹಿಡಿಯಿತು ಪತ್ರಿಕೆ, ಸಾಹಿತ್ಯ ಪ್ರೇಮ

ಚಿತ್ರದುರ್ಗ: ಕೈ ಕಾಲು ಚೆನ್ನಾಗಿದ್ರೂ ಡ್ರಾಮಾ ಮಾಡ್ಕೊಂಡು ಜೀವನ ಮಾಡೋವವರೇ ಜಾಸ್ತಿ. ಆದ್ರೆ, ಚಿತ್ರದುರ್ಗದ ಇಂದಿನ ಪಬ್ಲಿಕ್ ಹೀರೋ ಪೋಲಿಯೋಗೆ ತುತ್ತಾಗಿದ್ರೂ ಅಳುಕದೆ ಜೀವನ ಸಾಗಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಚಿತ್ರದುರ್ಗದ ಹನುಮಂತಶೆಟ್ಟಿ ಹಾಗೂ ನಂಜಲಕ್ಷ್ಮಮ್ಮ ದಂಪತಿಯ ಒಂಭತ್ತು ಮಕ್ಕಳಲ್ಲಿ ಎರಡನೆಯವರು ಜಯಪ್ರಕಾಶ್. ಹುಟ್ಟಿದಾಗ ಲವಲವಿಕೆಯಿಂದ ಇದ್ದ ಜಯಪ್ರಕಾಶ್‍ಗೆ ಎರಡನೇ ವಯಸ್ಸಲ್ಲೇ ಪೋಲಿಯೋ ಕಾಡಿತ್ತು. ಇದರಿಂದ ಕಾಲುಗಳು ಹಾಗು ಸೊಂಟ ಕಳೆದುಕೊಳ್ಳಬೇಕಾಯ್ತು.

ಆದರೂ ಎದೆಗುಂದದ ಜಯಪ್ರಕಾಶ್ ತಮ್ಮ ವಿಕಲತೆಯನ್ನೇ ಮೆಟ್ಟಿನಿಂತು ತೆವಳಿಕೊಂಡೇ ವಿದ್ಯಾಭ್ಯಾಸ, ಸಾಹಿತ್ಯ ಹಾಗು ವ್ಯಾಪಾರದತ್ತ ಚಿತ್ತ ಹರಿಸಿದ್ರು. ಮನೆಯವರಿಗೆ ಹೊರೆಯಾಗದೇ 1982ರಲ್ಲಿ ಲಾಟರಿ ಮಾರುವ ಕಾಯಕ ಆರಂಭಿಸಿದ್ರು. ಲಾಟರಿ ಬ್ಯಾನ್ ನಂತರ ಚಿತ್ರದುರ್ಗದ ಗಾಂಧಿ ಸರ್ಕಲ್‍ನಲ್ಲಿ ದಿನಪತ್ರಿಕೆ ಮಾರುವ ಅಂಗಡಿ ತೆರೆದ್ರು. ಜೊತೆಗೆ ಸಾಹಿತ್ಯದತ್ತ ಆಸಕ್ತಿ ಬೆಳೆಸಿಕೊಂಡು ಕವಿಗೋಷ್ಠಿಗಳಲ್ಲಿ ಭಾಗಿಯಾಗಿ ಕವನ ರಚಿಸಿ, ಅತಿರಥರ ಮುಂದೆ ಕವನವಾಚನ ಮಾಡಿ ಪ್ರಶಸ್ತಿ ಗಳಿಸಿದ್ದಾರೆ.

ವಿಕಲಾಂಗರಾದ್ರೂ ಈಗಾಗಲೇ ಐದಾರು ಬಾರಿ ರಕ್ತದಾನ ಮಾಡಿ ಹಲವರ ಜೀವ ಉಳಿಸಿದ್ದಾರೆ. ಒಟ್ಟಿನಲ್ಲಿ ತಾನು ಭಾರ ಎನಿಸಿಕೊಳ್ಳದೆ ಪೋಷಕರನ್ನೂ ಪೋಷಿಸ್ತಿರೋ ಜಯಪ್ರಕಾಶ್ ಆತ್ಮಸ್ಥೈರ್ಯ, ಜೀವನ ಪ್ರೀತಿ ಎಂಥವರೂ ಮೆಚ್ಚುವಂತದ್ದು.

Leave a Reply

Your email address will not be published. Required fields are marked *