Wednesday, 20th June 2018

ಮಹಿಳಾ ದಿನಾಚರಣೆಯಂದು ಮಡದಿಯನ್ನು ಹೂವಿನ ಪಲಕ್ಕಿಯಲ್ಲಿ ಮೆರವಣಿಗೆ ಮಾಡಿದ ಮಾಜಿ ಸಚಿವ ಜನಾರ್ದನರೆಡ್ಡಿ!

ಬಳ್ಳಾರಿ: ವಿಶ್ವ ಮಹಿಳಾ ದಿನಾಚರಣೆ ದೇಶದೆಲ್ಲೆಡೆ ವಿಭಿನ್ನವಾಗಿ ವಿಶಿಷ್ಟವಾಗಿ ಆಚರಣೆ ಮಾಡಿದರೆ, ಮಾಜಿ ಸಚಿವ ಜನಾರ್ದನರೆಡ್ಡಿ ತಮ್ಮ ಮೆಚ್ಚಿನ ಮಡದಿಯನ್ನು ಹೂವಿನಿಂದ ಅಲಂಕಾರ ಮಾಡಿದ ಸಾರೋಟದಲ್ಲಿ ಕೂರಿಸಿ ಸವಾರಿ ಮಾಡಿದ್ದಾರೆ.

ಮಹಿಳಾ ದಿನಾಚರಣೆಯಂದು ಸಾಧನೆ ಮಾಡಿದ ಮಹಿಳೆಯರಿಗೆ, ತಾಯಂದಿರಿಗೆ ಸನ್ಮಾನ ಮಾಡಿ ಪ್ರೀತಿಯ ಕಾಣಿಕೆಯನ್ನ ನೀಡ್ತಾರೆ. ಆದ್ರೆ ಸಚಿವರು ತಮ್ಮ ಸಾಧನೆಗೆ ಬೆಂಬಲವಾಗಿದ್ದ ಪತ್ನಿ ಲಕ್ಷ್ಮಿ ಅರುಣಾರನ್ನು ಹೂ ಅಲಂಕಾರ ಮಾಡಿದ ಸೈಕಲ್ ಸಾರೋಟದಲ್ಲಿ ಕೂರಿಸಿ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಮಹಿಳಾ ದಿನಾಚರಣೆಯನ್ನು ವಿಭಿನ್ನವಾಗಿ ಆಚರಣೆ ಮಾಡಿದರು.

ಪತ್ನಿಯನ್ನು ಹೂ ಅಲಂಕಾರದ ಸಾರೋಟದಲ್ಲಿ ಕೂರಿಸಿ ತಾವೂ ಸವಾರಿ ಮಾಡುತ್ತಿರುವ ಫೋಟೋಗಳನ್ನು ಜನಾರ್ದನ ರೆಡ್ಡಿ ತಮ್ಮ ಫೇಸ್‍ಬುಕ್ ಪೇಜ್ ನಲ್ಲಿ ಹಾಕಿ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದ್ದಾರೆ. ಮಡದಿಯೊಂದಿಗೆ ಮಹಿಳಾ ದಿನಾಚರಣೆ ಆಚರಿಸಿಕೊಂಡ ಸಚಿವರ ಫೇಸ್ ಬುಕ್ ಪೋಸ್ಟ್ ಹಲವರು ಶೇರ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *