ರೆಡ್ಡಿ ಮಗಳ ಮದುವೆಗೆ ಅರಮನೆ ಮೈದಾನದಲ್ಲಿ ಅದ್ಧೂರಿ ಸೆಟ್


ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಣಿ ಮದುವೆ ಸಮಾರಂಭಕ್ಕೆ ದಿನಗಣನೆ ಆರಂಭವಾಗಿದೆ. ನವೆಂಬರ್ 16ರಂದು ನಡೆಯಲಿರುವ ಮದುವೆಗೆ ಶ್ರೀನಿವಾಸ ಕಲ್ಯಾಣ ಮಾದರಿಯಲ್ಲಿ ಮದುವೆ ಮಾಡಲು ಬೆಂಗಳೂರು ಅರಮನೆ ಮೈದಾನದಲ್ಲಿ ಅದ್ದೂರಿ ಸಿದ್ಧತೆ ನಡೆದಿದೆ.

25ಕ್ಕೂ ಹೆಚ್ಚು ಎಂಜಿನಿಯರ್‍ಗಳಿಂದ ಒಳಾಂಗಣ ವಿನ್ಯಾಸ: ಅದ್ಧೂರಿ ಮದುವೆಗಾಗಿ ವಿಜಯನಗರ ಸಾಮ್ರಾಜ್ಯವನ್ನೇ ನೆನಪಿಸುವಂತೆ ಸೆಟ್ ನಿರ್ಮಾಣವಾಗ್ತಿದೆ. ಇದಕ್ಕಾಗಿ ಸುಮಾರು 150 ಕೋಟಿ ರೂ. ಖರ್ಚು ಮಾಡುತ್ತಿರಬಹುದೆಂದು ಅಂದಾಜಿಸಲಾಗಿದೆ. ಈ ಜವಾಬ್ದಾರಿಯನ್ನ ನಟ ಸಾಯಿಕುಮಾರ್ ಹಾಗೂ ಅವರ ಸಹೋದರ ವಹಿಸಿಕೊಂಡಿದ್ದು, ಇದರ ಒಳಾಂಗಣ ವಿನ್ಯಾಸಕ್ಕೆ 25ಕ್ಕೂ ಹೆಚ್ಚು ಎಂಜಿನಿಯರ್‍ಗಳ ತಂಡ ಆಗಮಿಸಿದೆ. ಮದುವೆಗೆ ಹಾಲವುಡ್, ಬಾಲಿವುಟ್ ಹಾಗೂ ಟಾಲಿವುಡ್‍ನ ಸ್ಟಾರ್ ನಟ, ನಟಿಯರು ಆಗಮಿಸಲಿದ್ದಾರೆ.

reddy4

35 ಎಕರೆಯಲ್ಲಿ ಸೆಟ್ ನಿರ್ಮಾಣ: ಸುಮಾರು 35 ಎಕರೆ ವಿಸ್ತೀರ್ಣದಲ್ಲಿ, 12 ಕ್ಕಿಂತಲೂ ಹೆಚ್ಚು ವಿವಿಧ ಸೆಟ್‍ಗಳ ನಿರ್ಮಾಣವಾಗ್ತಿದೆ. ಇನ್ನೊಂದು ಪ್ರಮುಖ ವಿಷಯವೆಂದರೆ ಬಾಲಿವುಡ್ ಕಲಾ ವಿನ್ಯಾಸಗಾರರು ಈ ಅದ್ಧೂರಿ ಸೆಟ್‍ನ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ನಿರ್ಮಾಣವಾಗುತ್ತಿರುವ ಸೆಟ್ ಬಳಿ ಯಾರಿಗೂ ಪ್ರವೇಶವಿಲ್ಲ. ಸೆಟ್ ಸುತ್ತ ಭದ್ರತೆಗಾಗಿ 30 ಸೆಕ್ಯೂರಿಟಿಗಳ ನೇಮಕ ಮಾಡಲಾಗಿದ್ದು, ಫೋಟೋ ತೆಗೆದುಕೊಳ್ಳಲು ಪರವಾನಿಗೆ ಇಲ್ಲ. 300 ಕ್ಕೂ ಹೆಚ್ಚು ಎಸಿಗಳ ಅಳವಡಿಕೆ, ಸ್ಥಳದಲ್ಲೇ ಹೊಸ ಸೋಫಾಸೆಟ್‍ಗಳ ತಯಾರಿಸಲಾಗಿದೆ. ವಧು-ವರರ ಪೂಜೆಗಾಗಿ ಹಂಪಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಸೈನಿಕರು, ಮಂತ್ರಿಗಳ ವೇಷದಲ್ಲಿರುವ ಕಲಾವಿದರು ಅತಿಥಿಗಳನ್ನ ಸ್ವಾಗತಿಸುತ್ತಾರೆ.

reddy-5

ಮದುವೆಗೆ ವಿಶೇಷ ರೈಲು: ಅದ್ದೂರಿಯಾಗಿ ನಡೆಯುತ್ತಿರುವ ರೆಡ್ಡಿ ಮಗಳ ಮದುವೆಗೆ ಹಾಜರಾಗಲು ವಿಶೇಷ ರೈಲಿನ ವ್ಯವಸ್ಥೆ ಕಲ್ಪಿಸಲಾಗಿದೆ. ನವಂಬರ್ 15ರ ಸಂಜೆ ಬಳ್ಳಾರಿಯಿಂದ ಬೆಂಗಳೂರಿಗೆ ಈ ವ್ಯವಸ್ಥೆ ಮಾಡಲಾಗಿದೆ. ಬೆಂಬಲಿಗರು ಕಾರ್ಯಕರ್ತರಿಗೆ ಈಗಾಗಲೇ ರೆಡ್ಡಿ ಕುಟುಂಬ 2 ರೈಲಿನ ಟಿಕೆಟ್ ಬುಕ್ ಮಾಡಿಸಿದೆ, ಮಾತ್ರವಲ್ಲದೇ ಬಸ್ ಗಳನ್ನು ಬುಕ್ ಮಾಡಲು ಕುಟುಂಬ ನಿರ್ಧರಿಸಿದೆ.

reddy-1

ಬಾಲಿವುಡ್ ಕಲಾವಿದರಿಂದ ಡ್ಯಾನ್ಸ್: ಮದುವೆ ಸಮಾರಂಭದಲ್ಲಿ ಶಾರೂಖ್ ಖಾನ್, ಕರೀನಾ, ಕತ್ರಿನಾ ಕೈಫ್ ಡ್ಯಾನ್ಸ್ ಪರ್ಫಾಮೆನ್ಸ್ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಮಧ್ಯಾಹ್ನ ಭಾರತದಲ್ಲಿ ಸಿಗುವ ಎಲ್ಲಾ ರೀತಿಯ ಭಕ್ಷ್ಯ ಭೋಜನ ವ್ಯವಸ್ಥೆ ಮಾಡಲಾಗುತ್ತಿದೆ. ವಿಐಪಿಗಳು ಬರಲು ಹೆಲಿಕಾಪ್ಟರ್ ವ್ಯವಸ್ಥೆಯನ್ನು ಮಾಡಲಾಗಿದೆ.

 

loading...

LEAVE A REPLY