ಚಂಡೀಗಢ: ಪತಿ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂದು ಆರೋಪಿಸಿ ಪತ್ನಿ ಆತನ ಮರ್ಮಾಂಗವನ್ನೇ ಕಟ್ ಮಾಡಿ ಶೌಚಾಲಯದಲ್ಲಿ ಎಸೆದಿರುವ ವಿಚಿತ್ರ ಘಟನೆಯೊಂದು ಪಂಜಾಬ್ನ ಜಲಂಧರ್ನ ಜೋಗಿಂಧರ್ ನಗರದಲ್ಲಿ ನಡೆದಿದೆ.
ಆಜಾದ್ ಸಿಂಗ್ ಪತ್ನಿಯಿಂದ ದಾಳಿಗೊಳಗಾದ ಪತಿ. ತೀವ್ರವಾಗಿ ಅಸ್ವಸ್ಥಗೊಂಡಿರುವ ಆಜಾದ್ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಜಾದ್ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸದಾ ಸೆಕ್ಸ್ ಗೆ ಪೀಡಿಸುತ್ತಿದ್ದ ಪತ್ನಿಯನ್ನ ಕೊಂದ ಪತಿ
ಸೋಮವಾರ ರಾತ್ರಿ ಅಜಾದ್ ಮಲಗಿದ್ದ ವೇಳೆ ಪತ್ನಿ ಸುಖವಂತ್ ಕೌರ್, ಕಬ್ಬಿಣದ ರಾಡ್ ನಿಂದ ಪತಿಯ ತಲೆಗೆ ಹೊಡೆದಿದ್ದಾಳೆ. ಹಲ್ಲೆಯ ಬಳಿಕ ಪ್ರಜ್ಞೆ ಕಳೆದುಕೊಂಡ ಆಜಾದ್ನ ಮರ್ಮಾಂಗವನ್ನ ಚಾಕುವಿನಿಂದ ಕಟ್ ಮಾಡಿ ಶೌಚಾಲಯದಲ್ಲಿ ಎಸೆದಿದ್ದಾಳೆ. ಆಜಾದ್ರನ್ನು ಆಸ್ಪತ್ರೆಗೆ ದಾಖಲಿಸಿದಾಗ ತೀವ್ರ ರಕ್ತಸ್ರಾವ ಆಗಿತ್ತು. ಆಜಾದ್ ಸ್ಥಿತಿ ಗಂಭೀರವಾಗಿದೆ ಎಂದು ಜಲಂಧರ್ ಎಸಿಪಿ ಸತೀಂಧರ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಸೆಕ್ಸ್ ನಿರಾಕರಿಸಿದ್ದಕ್ಕೆ ಶೂ ಲೇಸ್ನಿಂದ ಪ್ರಿಯತಮೆಯನ್ನೇ ಕೊಂದೇಬಿಟ್ಟ!
ಘಟನೆ ಸಂಬಂಧ ಆಜಾದ್ ತಂದೆಯ ದೂರಿನನ್ವಯ ಮಹಿಳೆ ವಿರುದ್ಧ ಜಲಂಧರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆಂದು ವರದಿಯಾಗಿದೆ.
ಇದನ್ನೂ ಓದಿ: ಸೆಕ್ಸ್ ತಿರಸ್ಕರಿಸಿದ್ದಕ್ಕೆ ಯುವಕನ ಮರ್ಮಾಂಗವನ್ನೇ ಕತ್ತರಿಸಿದ್ಳು ಯುವತಿ!
ಇದನ್ನೂ ಓದಿ: ಸೆಕ್ಸ್ ಗೇಮ್ ನಲ್ಲಿ ಲವ್ವರ್ ನ ಕೊಂದು ಪೀಸ್ ಪೀಸ್ ಮಾಡಿದ್ಳು- ದೇಹದ ಭಾಗವನ್ನ ಫ್ರೀಜರ್ ನಲ್ಲಿಟ್ಟು, ತಂತಿಯಲ್ಲೂ ನೇತು ಹಾಕಿದ್ಳು