Sunday, 24th June 2018

Recent News

ನಲಪಾಡ್‍ನಿಂದ ಹಲ್ಲೆಗೆ ಒಳಗಾಗಿದ್ದ ರಣಜಿ ಆಟಗಾರ ಯಾರು ಅನ್ನೋದನ್ನು ರಿವಿಲ್ ಮಾಡಿದ್ರು ಶೆಟ್ಟರ್

ಬೆಂಗಳೂರು: ರಣಜಿ ಕ್ರಿಕೆಟ್ ಆಟಗಾರ ಅಯ್ಯಪ್ಪ ಮೇಲೆ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ರೌಡಿ ನಲಪಾಡ್ ಹಲ್ಲೆ ಮಾಡಿದ್ದಾನೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

ವಿದ್ವತ್ ಅವರನ್ನು ನೋಡಲು ಮಲ್ಯ ಆಸ್ಪತ್ರೆಗೆ ತೆರೆಳಿದ್ದ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿ, ಸ್ಟಾರ್ ಹೋಟೆಲ್ ಒಂದರಲ್ಲಿ ಪಾರ್ಟಿ ನಡೆಯುತ್ತಿದ್ದಾಗ ಬಿಯರ್ ಬಾಟಲ್‍ನಲ್ಲಿ ರಣಜಿ ಪ್ಲೇಯರ್ ಅಯ್ಯಪ್ಪ ಅವರ ಮೇಲೆ ನಲಪಾಡ್ ಮಾರಣಾಂತಿಕ ಹಲ್ಲೆ ನಡೆಸಿದ್ದ ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರನ್ನು ನೀಡಿರಲಿಲ್ಲ ಎಂದು ತಿಳಿಸಿದರು.

ವಿದ್ವತ್ ಅವರ ಆರೋಗ್ಯ ಸ್ಥಿತಿ ಈಗ ಸುಧಾರಿಸಿದೆ ಎಂದು ವೈದ್ಯರು ಹೇಳಿದ್ದಾರೆ. ಕಾಂಗ್ರೆಸ್‍ನ ಗೂಂಡಾಗಿರಿ ನೋಡುತ್ತಿದ್ದರೆ ನಮಗೆ ಭಯವಾಗುತ್ತೆ. ಹಲವು ವರ್ಷಗಳಿಂದ ಕಾಂಗ್ರೆಸಿಗರಿಂದ ಹಲ್ಲೆ ನಡೆಯುತ್ತಿರುವ ಬಗ್ಗೆ ಹಲವಾರು ಬಾರಿ ವರದಿಗಳು ಬಂದಿದೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಹ್ಯಾರಿಸ್‍ಗೆ ಬೆಂಬಲ ಸೂಚಿಸಿದ ನಟಿ ಸಂಜನಾ

ನನಗೆ ಅನಿಸಿದ ಪ್ರಕಾರ ಶಾಂತಿನಗರದಲ್ಲಿ ಹಫ್ತಾ ವಸೂಲಿಗೆ ಹಲವಾರು ಹಲ್ಲೆಗಳನ್ನು ನಡೆಸಿರಬಹುದು. ನಲಪಾಡ್ ನಿಂದ ತೊಂದರೆಗೊಳಗಾದವರು ಎಲ್ಲರು ಹೊರ ಬಂದು ಧೈರ್ಯದಿಂದ ದೂರು ಕೊಡಬೇಕು. ಇದರಿಂದ ಹ್ಯಾರಿಸ್ ಮೇಲಿರುವ ಇನ್ನಷ್ಟು ಕ್ರಿಮಿನಲ್ ಪ್ರಕರಣಗಳು ಹೊರ ಬರುತ್ತದೆ. ಇದನ್ನೂ ಓದಿ: ಜೈಲಿಗೆ ಹೋದ ಎರಡೇ ದಿನಕ್ಕೆ ನಲಪಾಡ್ ಕೈಗೆ ಸಿಕ್ತು ಮೊಬೈಲ್ ಫೋನ್!

ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮೇಲೆ ಗೂಂಡಾಗಿರಿ ಸಂಪೂರ್ಣವಾಗಿ ನೆಲಕಚ್ಚಿದೆ. ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ನಿಲ್ಲಿಸಬಹುದು. ನಟ ಶಿವರಾಜ್ ಕುಮಾರ್ ಅವರಿಗೂ ಸಹ ಕಾಂಗ್ರೆಸ್‍ನ ಈ ವರ್ತನೆ ಭಯವನ್ನುಂಟು ಮಾಡಿದೆ. ತಂದೆ-ತಾಯಿಯಾದವರು ಯಾವಾಗಲು ಮಕ್ಕಳನ್ನ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ರಣಜಿ ಆಟಗಾರನ ಮೇಲೆ 6 ತಿಂಗಳ ಹಿಂದೆ ನಲಪಾಡ್ ಹಲ್ಲೆ ನಡೆಸಿದ್ದ ಎಂದು ಹೋಟೆಲ್ ಒಂದರ ಮ್ಯಾನೇಜರ್ ತಿಳಿಸಿದ್ದರು. ಆದರೆ ಹಲ್ಲೆಗೆ ಒಳಗಾಗಿದ್ದ ಆಟಗಾರ ಯಾರು ಎನ್ನುವುದನ್ನು ತಿಳಿಸಿರಲಿಲ್ಲ.

Leave a Reply

Your email address will not be published. Required fields are marked *