Sunday, 24th June 2018

Recent News

ಮದ್ವೆಯಾದ ಬಳಿಕ ಆ್ಯಕ್ಟ್ ಮಾಡ್ತೀರಾ? ಲವ್ ಆಗಿದ್ದು ಹೇಗೆ? ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ರು ರಶ್ಮಿಕಾ

ಭಾರತಿ
ಬೆಂಗಳೂರು: “ನಾವಿಬ್ಬರೂ ಉತ್ತಮ ಸ್ನೇಹಿತರು. ಅಷ್ಟೇ ಅಲ್ಲದೇ ಬಹಳ ಬೇಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ವಿ. ಆದರೆ ನಮ್ಮ ನಡುವೆ ಮಧ್ಯೆ ಲವ್ ಇರಲಿಲ್ಲ. ಮಾಧ್ಯಮಗಳು ಮತ್ತು ಗಾಸಿಪ್‍ಗಳಿಂದಾಗಿ ಮುಂದೆ ಇದು ಜಾಸ್ತಿ ಆಗುವುದು ಬೇಡ ಎಂದು ನಮ್ಮಿಬ್ಬರ ಸ್ನೇಹದ ಪ್ರೀತಿಯನ್ನು ಒಪ್ಪಿ ಪೋಷಕರು ನಿಶ್ಚಯ ನಿಗದಿ ಮಾಡಿದ್ದಾರೆ”. ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ ಅವರು ರಕ್ಷಿತ್ ಶೆಟ್ಟಿ ಜೊತೆ ಲವ್ ಹೇಗಾಯ್ತು ಎನ್ನುವುದನ್ನು ವಿವರಿಸಿದ್ದು ಹೀಗೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಮ್ಮಿಬ್ಬರನ್ನು ಒಂದು ಮಾಡಿದ್ದೇ ಮಾಧ್ಯಮಗಳು. ಮಾಧ್ಯಮಗಳಲ್ಲಿ ಸುದ್ದಿ ಬಂದ ಮೇಲೆ ನಮ್ಮ ಪೋಷಕರ ಜೊತೆ ಸಂಬಂಧಿಗಳು ಕೇಳಲು ಆರಂಭಿಸಿದರು. ಅಷ್ಟೇ ಅಲ್ಲದೇ ನಮ್ಮ ಸ್ನೇಹಿತರು ನಮ್ಮನ್ನು ಕೇಳಿದ್ರು. ಅಭಿಮಾನಿಗಳ ಟೀಸಿಂಗ್ ಜಾಸ್ತಿ ಆಗ್ತಿದ್ದಂತೆ ನಮ್ಮ ಪೋಷಕರೇ ಮಾತನಾಡಿಕೊಂಡರು. ಕೊನೆಗೆ ನನ್ನ ತಂದೆ ಖಡಗವನ್ನು ತೊಡಿಸುವ ಮೂಲಕ ರಕ್ಷಿತ್ ಅವರನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಿದರು.

ಒಂದೇ ಸಿನಿಮಾದಲ್ಲಿ ಅಭಿನಯಸಿದ್ದರೂ ಅವರನ್ನು ನಾನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಅವರು ನನ್ನನ್ನು ಅರ್ಥ ಮಾಡಿಕೊಂಡಿದ್ದಾರೆ. ಕೆಲವೊಂದು ವಿಚಾರ ಬಂದಾಗ ಅವರು ತಿಳಿಸದೇ ಇದ್ದರೂ ಅವರು ಏನು ಯೋಚನೆ ಮಾಡುತ್ತಾರೋ ಅದನ್ನು ನಾನು ಯೋಚಿಸಬಲ್ಲೆ. ಅಷ್ಟರಮಟ್ಟಿಗೆ ನಾನು ಅವರನ್ನು ಅರ್ಥ ಮಾಡಿಕೊಂಡಿದ್ದೇನೆ.

ಸರ್ ಬೇಡ, ರಕ್ಷಿತ್ ಸಾಕು: ಕಿರಿಕ್ ಪಾರ್ಟಿಗೆ ಚಿತ್ರದ ಶೂಟಿಂಗ್ ನಲ್ಲಿ ಹೇಗೆ ಅಭಿನಯಿಸಬೇಕು ಎನ್ನುವುದನ್ನು ಅವರು ಹೇಳಿಕೊಟ್ಟರು. ಸಾನ್ವಿ ಪಾತ್ರ ಹೀಗೆ ಇರುತ್ತದೆ ಎನ್ನುವುದನ್ನು ವಿವರಿಸಿಕೊಟ್ಟರು. ಶೂಟಿಂಗ್ ವೇಳೆ ನಾನು ಆರಂಭದಲ್ಲಿ ಅವರನ್ನು ‘ಸರ್’ ಎಂದೇ ಕರೆಯುತ್ತಿದ್ದೆ. ಕೆಲ ದಿನಗಳ ಬಳಿಕ ಅವರು ‘ಸರ್’ ಎಂದು ನನ್ನನ್ನು ಕರೆಯುವುದು ಬೇಡ. ಅದು ನನಗೆ ಇಷ್ಟ ಆಗುವುದಿಲ್ಲ ಎಂದು ಹೇಳಿದರು. ಅಲ್ಲಿಂದ ನಾನು ಅವರನ್ನು ರಕ್ಷಿತ್ ಎಂದು ಕರೆಯಲು ಆರಂಭಿಸಿದೆ.

ವಿದೇಶದಲ್ಲಿ ಲವ್ ಆಗಿಲ್ಲ: ವಿದೇಶಕ್ಕೆ ಹೋದಾಗ ನಿಮಗೆ ಲವ್ ಆಗಿತ್ತಾ ಎಂದು ಪ್ರಶ್ನಿಸಿದ್ದಕ್ಕೆ, ಚಿತ್ರದ ಪ್ರಚಾರಕ್ಕೆ ವಿದೇಶಕ್ಕೆ ಹೋದಾಗ ನಾವು ಒಂದು ಸ್ಥಳದಲ್ಲಿ ಇರಲೇ ಇಲ್ಲ. ಒಂದೇ ದಿನದಲ್ಲಿ ಹಲವು ಕಡೆ ಹೋಗ್ತಾ ಇದ್ವಿ. ಈ ವೇಳೆ ಉತ್ತಮ ಸ್ನೇಹಿತರಾಗಿ ನಾವಿಬ್ಬರು ಒಬ್ಬರನ್ನೊಬ್ಬರನ್ನು ಅರ್ಥ ಮಾಡಿಕೊಂಡೆವು.

ನನಗೆ ಆಶ್ಚರ್ಯ: ನನ್ನ ಫೇಸ್‍ಬುಕ್ ಪೇಜನ್ನು ತಾಯಿ ಹ್ಯಾಂಡಲ್ ಮಾಡುತ್ತಿದ್ದಾರೆ. ರಕ್ಷಿತ್ ಹುಟ್ಟುಹಬ್ಬದ ದಿನ ನನ್ನ ತಾಯಿಯೇ ಪೋಸ್ಟ್ ಹಾಕಿದ್ದು. ಆ ಪೋಸ್ಟ್ ನೋಡಿ ನನಗೆ ಆಶ್ಚರ್ಯ ಮತ್ತು ಸಂತೋಷ ಆಯ್ತು. ಕಿರಿಕ್ ಪಾರ್ಟಿ ಚಿತ್ರದ ಪ್ರಚಾರದ ವೇಳೆ ನಾನು ರಕ್ಷಿತ್ ಅವರ ಮನೆಗೆ ಎರಡು ಬಾರಿ ಹೋಗಿದ್ದೇನೆ. ಅವರ ತಾಯಿಗೆ ನಾನು ಅಂದ್ರೆ ಇಷ್ಟ. ನನಗೂ ಅವರು ಇಷ್ಟ.

ಶುದ್ಧವಾದ ಹೃದಯ: ಮುಂದೆ ಯಾರ ಜೊತೆ ಆದ್ರೂ ಮದುವೆ ಆಗಲೇಬೇಕು. ರಕ್ಷಿತ್ ಅವರಲ್ಲಿ ಬಹಳಷ್ಟು ಉತ್ತಮ ಗುಣ ಇದೆ. ಅವರದ್ದು ಶುದ್ಧವಾದ ಹೃದಯ. ಎಲ್ಲರನ್ನು ಸಮಾನವಾಗಿ ನೋಡುವ ಗುಣ ನನಗಿಷ್ಟ. ಹೇಗೆ ಅಂದ್ರೆ ಸೆಟ್ ನಲ್ಲಿ ಕಲಾವಿದರನ್ನು, ಲೈಟ್ ಬಾಯ್, ಕ್ಯಾಮೆರಾ ಮನ್‍ಗಳನ್ನು ಸೇರಿದಂತೆ ಎಲ್ಲರನ್ನು ಸಮಾನವಾಗಿ ನೋಡುತ್ತಾರೆ. ಈ ಗುಣ ನನಗೆ ತುಂಬಾ ಇಷ್ಟ ಆಯ್ತು.

ಲಕ್ಕಿ ಹುಡುಗಿ: ಅಂಬರೀಷ್-ಸುಮಲತಾ, ರಕ್ಷಿತಾ-ಪ್ರೇಮ್, ಯಶ್-ರಾಧಿಕಾರಂತೆ ತಾರಾ ಜೋಡಿಗಳ ಪಟ್ಟಿಗೆ ನೀವು ಸೇರ್ಪಡೆಯಾಗುತ್ತಿದ್ದೀರಿ ಅಲ್ಲವೇ ಎಂದು ಕೇಳಿದ್ದಕ್ಕೆ, ಕನ್ನಡ ಚಿತ್ರರಂಗದಲ್ಲಿ ಅವರೆಲ್ಲ ತುಂಬಾ ದೊಡ್ಡವರು, ಸಾಧನೆ ಮಾಡಿದವರು. ನಾವು ಈಗಷ್ಟೇ ಎಂಟ್ರಿ ಕೊಡುತ್ತಿದ್ದೇವೆ. ನಾವು ತುಂಬಾ ಸಣ್ಣವರು ಎಂದರು.

ಮದುವೆಯ ಬಳಿಕವೂ ಆ್ಯಕ್ಟ್ ಮಾಡ್ತೀನಿ: ಈಗ ಎಂಗೇಜ್‍ಮೆಂಟ್ ಆದ್ರೂ ಮದುವೆಯ ದಿನ ನಿಗದಿಯಾಗಿಲ್ಲ. ಮದುವೆಯಾದ ಬಳಿಕವೂ ನಾನು ನಟಿಸುತ್ತೇನೆ. ಶಾರ್ಟ್ಸ್ ಈಗ ಎಲ್ಲರೂ ಧರಿಸುತ್ತಿದ್ದಾರೆ. ಹೀಗಾಗಿ ಈ ರೀತಿ ಡ್ರೆಸ್ ಧರಿಸಿ ನಾನು ನಟಿಸುತ್ತೇನೆ. ಸ್ವಿಮ್ ಸೂಟ್ ಡ್ರೆಸ್ ಧರಿಸಿ ನಟಿಸಲ್ಲ. ಅದು ನನಗೆ ಇಷ್ಟವೂ ಆಗಲ್ಲ. ಅದಕ್ಕೆ ನನ್ನ ವಿರೋಧ ಇದೆ.

ಸಹಕಾರ ಕೊಡ್ತಾರೆ: ಕಿರಿಕ್ ಪಾರ್ಟಿಗೆ ಆಡಿಷನ್‍ಗೆ ಬಂದ ಮೂರು ಸಾವಿರಕ್ಕೂ ಅಧಿಕ ಮಂದಿಯಲ್ಲಿ ನಾನು ಸೆಲೆಕ್ಟ್ ಆಗಿದ್ದು ಲಕ್ಕಿ. ಕಿರಿಕ್ ಪಾರ್ಟಿ ಬಳಿಕ ಬಹಳಷ್ಟು ಚಿತ್ರಗಳು ಬಂದಿದೆ. ಈ ವೇಳೆ ನನಗೆ ಸ್ಕ್ರಿಪ್ಟ್ ನೋಡಿ ಆಯ್ಕೆ ಮಾಡು ಅಂತ ಹೇಳಿದ್ರು. ಕಷ್ಟಪಟ್ಟು ಮಾಡದೇ ಇಷ್ಟಪಟ್ಟು ಅಭಿನಯಿಸಬೇಕು ಎಂದು ಸಲಹೆ ಕೊಡುತ್ತಿದ್ದರು.

ಜಡ್ಜ್ ಮಾಡಲ್ಲ: ನಿರ್ದೇಶಕ ರಕ್ಷಿತ್ ಶೆಟ್ಟಿ ಇಷ್ಟ ಆಗ್ತಾರೋ ಅಥವಾ ನಟ ರಕ್ಷಿತ್ ಶೆಟ್ಟಿ ಇಷ್ಟ ಆಗ್ತಾರೋ ಎಂದು ಕೇಳಿದ್ದಕ್ಕೆ, ನಾನು ಈಗ ಹೀರೋ ಆಗಿ ಅವರನ್ನು ನೋಡಿದ್ದೇನೆ. ಅವರ ಎಲ್ಲ ಚಿತ್ರಗಳನ್ನು ನೋಡಿದ್ದೇನೆ. ಡೈರೆಕ್ಟರ್ ಆಗಿ ನಾನು ಅವರನ್ನು ನೋಡಿಲ್ಲ ಹೀಗಾಗಿ ನಾನು ಜಡ್ಜ್ ಮಾಡಲ್ಲ.

ಒಟ್ಟಿಗೆ ಆ್ಯಕ್ಟ್ ಮಾಡ್ತೀವಿ: ಕಿರಿಕ್ ಪಾರ್ಟಿಯಂತೆ ಮುಂದೆ ಉತ್ತಮ ಸ್ಕ್ರಿಪ್ಟ್ ಬಂದ್ರೆ ಖಂಡಿತಾ ನಟಿಸ್ತೀವಿ. ಏನಾಗುತ್ತೋ ಗೊತ್ತಿಲ್ಲ. ಸದ್ಯಕ್ಕೆ ಈಗ ಅವರು ಬ್ಯುಸಿಯಲ್ಲಿದ್ದಾರೆ ನಾನು ಶೂಟಿಂಗಲ್ಲಿ ಬ್ಯುಸಿಯಾಗಿದ್ದೇನೆ ಎನ್ನುತ್ತಾ ಮಾತು ಮುಗಿಸಿದರು ರಶ್ಮಿಕಾ

ರಷ್ಮಿಕಾ ಮಂದಣ್ಣ ಸಂದರ್ಶನದ ಫುಲ್ ವಿಡಿಯೋ ನೋಡಿ.

ಲವ್ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದು ಹೀಗೆ…

Leave a Reply

Your email address will not be published. Required fields are marked *