Thursday, 18th January 2018

Recent News

ಜಿಮ್ ನಲ್ಲಿ ಯುವತಿ ಮೇಲೆ ತರಬೇತುದಾರನಿಂದ ಹಲ್ಲೆ: ವಿಡಿಯೋ

ಭೋಪಾಲ್: ಜಿಮ್ ನಲ್ಲಿ ಯುವತಿಯೋರ್ವಳ ಮೇಲೆ ತರಬೇತುದಾರನೊಬ್ಬ ಹಲ್ಲೆ ಮಾಡಿರುವ ಘಟನೆ ಇಂದೋರ್ ಜಿಲ್ಲೆಯಲ್ಲಿ ನಡೆದಿದ್ದು, ಹಲ್ಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಜಿಮ್ ತರಬೇತುದಾರ ಪುನಿತ್ ಮಾಳ್ವಿಯಾ ಎಂಬಾತನೇ ಯುವತಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ. ಜಿಮ್ ತರಬೇತಿ ನೀಡುವ ಪುನಿತ್ ತನ್ನ ಮೇಲೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಯುವತಿ ಜಿಮ್ ಮಾಲೀಕರ ಬಳಿ ದೂರು ನೀಡಿದ್ದಾರೆ. ಇದರಿಂದ ಕುಪಿತನಾದ ಜಿಮ್ ತರಬೇತುದಾರ ಪುನಿತ್ ಅಲ್ಲೆಯಿದ್ದ ಯುವತಿಗೆ ಬಲವಾಗಿ ಪಂಚ್ ಮಾಡಿ, ಕಾಲಿನಿಂದ ಒದೆಯುವ ಮೂಲಕ ಕ್ರೌರ್ಯವನ್ನು ಮೆರೆದಿದ್ದಾನೆ.

ಯುವತಿ ನಗರದ ಪ್ಯಾಲೇಸ್ ಕಾಲೋನಿಯ ನಿವಾಸಿ ಎಂದು ತಿಳಿದು ಬಂದಿದೆ. ಜಿಮ್ ನಲ್ಲಿ ಯುವತಿ ವರ್ಕ್ ಔಟ್ ಮಾಡುವಾಗ ಪುನಿತ್ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಕುರಿರು ಯುವತಿ ಜಿಮ್ ಮುಖ್ಯಸ್ಥರಲ್ಲಿ ದೂರು ದಾಖಲಿಸಿದ್ದರು.

ವಿಡಿಯೋವನ್ನು ಆಧರಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತರಬೇತುದಾರ ಪುನಿತ್ ಮಾಳ್ವಿಯಾ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Leave a Reply

Your email address will not be published. Required fields are marked *