Friday, 25th May 2018

Recent News

ಲಕ್ಕಿ ಸ್ಟೇಡಿಯಂನಲ್ಲಿ ಭಾರತಕ್ಕೆ ವಿಶ್ವಕಪ್ ಮತ್ತೊಮ್ಮೆ ಒಲಿಯುತ್ತಾ?

ಲಾರ್ಡ್ಸ್ : ಟೀಂ ಇಂಡಿಯಾ ಮೂರನೇ ಬಾರಿ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಫೈನಲ್ ಪಂದ್ಯವನ್ನು ಆಡಲಿದ್ದು, ಭಾರತದಲ್ಲೆಡೆ ಅಭಿಮಾನಿಗಳ ಹಾರೈಕೆ ಮತ್ತು ಪ್ರಾರ್ಥನೆ ಜೋರಾಗಿದೆ.

ವಿಶ್ವಕಪ್ ಕ್ರಿಕೆಟ್
ಈ ಹಿಂದೆ 1983ರಲ್ಲಿ ಕಪಿಲ್ ದೇವ್ ಸಾರಥ್ಯದಲ್ಲಿ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 54.4 ಓವರ್ ಗಳಲ್ಲಿ 183 ರನ್ ಗಳಿಗೆ ಆಲೌಟ್ ಆಗಿತ್ತು. ಎದರಾಳಿ ವೆಸ್ಟ್ ಇಂಡಿಸ್ 52 ಓವರ್ ಗಳಲ್ಲಿ 140 ರನ್ ಗಳಿಗೆ ಆಲೌಟ್ ಆಗಿತ್ತು. ಈ  ಭಾರತ 43 ರನ್‍ಗಳಿಂದ ಪಂದ್ಯವನ್ನು ಗೆಲ್ಲುವ ಮೂಲಕ ವಿಶ್ವಕಪ್ ಜಯಿಸಿತ್ತು.

ನ್ಯಾಟ್‍ವೆಸ್ಟ್ ಟ್ರೋಫಿ
2012ರ ಜುಲೈ 13ಕ್ಕೆ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 325 ರನ್ ಗಳಿಸಿತ್ತು. ನಾಯಕ ನಾಸೀರ್ ಹುಸೇನ್ 115 ರನ್ ಚಚ್ಚಿದ್ದರು. ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ 146 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಯಾದ ಮಹಮ್ಮದ್ ಕೈಫ್ ಮತ್ತು ಯುವರಾಜ್ ಸಿಂಗ್ 7 ವಿಕೆಟ್ ಗೆ 121 ರನ್ ಜೊತೆಯಾಟವಾಡಿದ್ದರು. ಅಂತಿಮವಾಗಿ ಮಹಮ್ಮದ್ ಕೈಫ್ ಔಟಾಗದೇ 87 ರನ್ ಸಿಡಿಸುವ ಮೂಲಕ ಭಾರತ 49.3 ಓವರ್ ಗಳಲ್ಲಿ 326 ರನ್ ಗಳಿಸಿ 2 ವಿಕೆಟ್ ಗಳ ರೋಚಕ ಜಯವನ್ನುಗಳಿಸಿತ್ತು. ಈ ಪಂದ್ಯದಲ್ಲಿ ವಿಜಯಿಯಾದ ಬಳಿಕ ಟೀಂ ಇಂಡಿಯಾದ ನಾಯಕ ಸೌರವ್ ಗಂಗೂಲಿ ತಮ್ಮ ಶರ್ಟ್ ಬಿಚ್ಚಿ ಸಂಭ್ರಮಿಸಿದರು.

ಈ ಅಂಗಣದಲ್ಲಿ ಎರಡು ಬಾರಿ ಫೈನಲ್ ತಲುಪಿರುವ ಭಾರತ ಕಪ್ ಜಯಿಸಿದೆ. ಹೀಗಾಗಿ ಭಾರತ ಪಾಲಿಗೆ ಲಕ್ಕಿ ಸ್ಟೇಡಿಯಂ ಆಗಿರುವ ಲಾರ್ಡ್ಸ್ ನಲ್ಲಿ ಈ ಬಾರಿ ಫಲಿತಾಂಶ ಏನಾಗಲಿದೆ ಎನ್ನುವ ಪ್ರಶ್ನೆಗೆ ಇಂದು ಸಂಜೆ ಉತ್ತರ ಸಿಗಲಿದೆ.

 

 

Leave a Reply

Your email address will not be published. Required fields are marked *