Monday, 28th May 2018

ಟೀಂ ಇಂಡಿಯಾದ ಯುವ ಕ್ರಿಕೆಟಿಗ ಶ್ರೀಲಂಕಾದಲ್ಲಿ ದುರ್ಮರಣ!

ನವದೆಹಲಿ: 12 ವರ್ಷದ ಭಾರತೀಯ ಯುವ ಕ್ರಿಕೆಟಿಗನೊಬ್ಬ ಶ್ರೀಲಂಕಾದ ಈಜುಕೊಳದಲ್ಲಿ ಮುಳುಗಿ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೃತ ಆಟಗಾರನನ್ನು ಮೋನಾತ್ ಸೋನಾ ನರೇಂದ್ರ ಎಂಬುವುದಾಗಿ ಗುರುತಿಸಲಾಗಿದೆ. ಇವರು ಗುಜರಾತ್ ನ ಸೂರತ್ ಮೂಲದವರರು ಎಂಬುವುದಾಗಿ ವರದಿಯಾಗಿದೆ. 17 ವರ್ಷದ ಒಳಗಿನ ಟೂರ್ನಿಯಲ್ಲಿ ಭಾಗವಹಿಸಲೆಂದು ಇವರು ಬಂದಿದ್ದರು ಅಂತ ಶ್ರೀಲಂಕಾ ಮಾಧ್ಯಮ ವರದಿ ಮಾಡಿದೆ.

ನಾಲ್ವರು ಸದಸ್ಯರೊಂದಿಗೆ ಬಂದಿದ್ದ ಮೃತ ಆಟಗಾರ, ಮಂಗಳವಾರ ಸಂಜೆ ಪಮುನುಗಾಮಾ ಈಜುಕೊಳಕ್ಕೆ ಇಳಿದಿದ್ದ ವೇಳೆ ಈ ದುರಂತ ಸಂಭವಿಸಿದೆ. ನೀರಿನಲ್ಲಿ ಮುಳುಗಿದ ಕೂಡಲೇ ಸ್ನೇಹಿತರು ಅವರನ್ನು ಈಜುಕೊಳದಿಂದ ಹೊರತೆಗೆದು ಪಮುನುಗಾಮಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

ಸದ್ಯ ಅವರ ಮೃತದೇಹವನ್ನು ರಾಗಮ ಟೀಚಿಂಗ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ ಎಂಬುವುದಾಗಿ ವರದಿಯಾಗಿದೆ.

Leave a Reply

Your email address will not be published. Required fields are marked *