ಲಂಡನ್‍ನಲ್ಲಿ 1 ವರ್ಷದ ಮಗುವನ್ನು ಕೊಲೆ ಮಾಡಿದ ಭಾರತೀಯ ಅರೆಸ್ಟ್

ಲಂಡನ್: ಒಂದು ವರ್ಷದ ಪುಟ್ಟ ಮಗುವನ್ನು ಕೊಲೆ ಮಾಡಿದ ಆರೋಪದ ಮೇಲೆ ಲಂಡನ್‍ನಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಈತ ಇವನದ್ದೇ ಎನ್ನಲಾದ 1 ವರ್ಷದ ಮಗುವನ್ನ ಕೊಲೆ ಮಾಡಿದ್ದು, ಅವಳಿ ಹೆಣ್ಣುಮಕ್ಕಳ ಮೇಲೆ ಹಲ್ಲೆ ಮಾಡಿದ್ದಾನೆಂದು ಪತ್ರಿಕೆಗಳು ವರದಿ ಮಾಡಿವೆ.

ಬಂಧಿತನನ್ನು 33 ವರ್ಷದ ಬಿದ್ಯಾ ಸಾಗರ್ ಎಂದು ಗುರುತಿಸಲಾಗಿದೆ. ಈತ ಉತ್ತರ ಲಂಡನ್ನಿನ ಫಿನ್ಸ್‍ಬರಿ ಪಾರ್ಕ್ ಪ್ರದೇಶದಲ್ಲಿ ನೆಲೆಸಿದ್ದು, ಇದೇ ಸ್ಥಳದಲ್ಲಿ ಮಕ್ಕಳ ಮೇಲೆ ದಾಳಿ ನಡೆದಿದೆ. ಆರೋಪಿಯನ್ನ ಇಲ್ಲಿಂದ 6 ಕಿ.ಮೀ ದೂರದ ಲಂಡನ್ ಬರೋ ಆಫ್ ಹ್ಯಾಕ್ನೀನಲ್ಲಿ ಬಂಧಿಸಲಾಗಿದೆ. ಈತ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗಷ್ಟೆ ಕೆಲಸ ಬಿಟ್ಟಿದ್ದ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಇದೊಂದು ಕೌಟುಂಬಿಕ ಕಲಹ ಎಂದು ಇಲ್ಲಿನ ಪೊಲೀಸರು ಹೇಳಿದ್ದಾರೆ.

ನಡೆದಿದ್ದೇನು?: ಶನಿವಾರ ರಾತ್ರಿ ಸುಮಾರು 11 ಗಂಟೆ ವೇಳೆಯಲ್ಲಿ ಫ್ಲಾಟ್‍ನಿಂದ ಮಹಿಳೆಯೊಬ್ಬರು ಗಾಬರಿಯಿಂದ ಓಡಿಬಂದರು. ನನ್ನ ಮಕ್ಕಳು ನನ್ನ ಮಕ್ಕಳು ಎಂದು ಕಿರುಚಾಡುತ್ತಿದ್ದರು ಎಂದು ಅಕ್ಕಪಕ್ಕದ ಮನೆಯವರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನಾವು ಶಬ್ದ ಕೇಳಿ ರೂಮಿಗೆ ಹೋದೆವು. ಗಂಡು ಮಗು ಆಗಲೇ ಸಾವನ್ನಪ್ಪಿದ್ದ. ನಮಗೆ ಗಾಬರಿಯಾಯಿತು. ಈ ರೀತಿಯ ಘಟನೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಬಾಲಕನ ಮೇಲೆ ಸುತ್ತಿಗೆಯಿಂದ ಹಲ್ಲೆ ಮಾಡಲಾಗಿದೆ ಎಂದು ವರದಿಯಾಗಿದೆ.

 

You might also like More from author

Leave A Reply

Your email address will not be published.

badge
'); var MainContentW = 1000; var LeftBannerW = 160; var RightBannerW = 160; var LeftAdjust = 20; var RightAdjust = 20; var TopAdjust = 80; ShowAdDiv(); window.onresize=ShowAdDiv; }