Sunday, 24th June 2018

Recent News

ರಾಜಮೌಳಿ ದೇವರು ಕೊಟ್ಟ ಮಗು: ಬಾಹುಬಲಿಗೆ ಗಣ್ಯರ ವಿಮರ್ಶೆ ಹೀಗಿದೆ ನೋಡಿ

ಬೆಂಗಳೂರು: ಬಾಕ್ಸ್ ಆಫೀಸ್ ನಲ್ಲಿ ದಾಖಲೆಗಳನ್ನು ಧ್ವಂಸಗೊಳಿಸಿ ಮುನ್ನುಗ್ಗುತ್ತಿರುವ ಬಾಹುಬಲಿಗೆ ಸಿನಿ ತಾರೆಯರು ಮೆಚ್ಚುಗೆ ಸೂಚಿಸಿದ್ದಾರೆ.

ಕಿಚ್ಚ ಸುದೀಪ್, ರಜನೀಕಾಂತ್, ಪ್ರಿಯಾಂಕ ಚೋಪ್ರಾ, ಧನುಶ್, ಮಹೇಶ್ ಬಾಬು, ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ರಾಜಮೌಳಿ ಅವರನ್ನು ಅಭಿನಂದಿಸಿದ್ದಾರೆ.

ರಾಜಮೌಳಿ ದೇವರು ಕೊಟ್ಟ ಮಗುವಾಗಿದ್ದು, ಅವರ ತಂಡಕ್ಕೆ ಅಭಿನಂದನೆಗಳು ಎಂದು ರಜನೀಕಾಂತ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಜಮೌಳಿ, ತಲೈವಾ… ದೇವರೆಂದು ಪರಿಗಣಿಸುವವರೇ ನಮ್ಮನ್ನು ಆಶೀರ್ವಾದಿಸಿದ್ದಾರೆ. ಇದಕ್ಕಿಂತದ ದೊಡ್ದದು ಬೇರೆ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಮೊದಲ ಬಾರಿಗೆ 5 ವರ್ಷಗಳ ಕಾಲ ಜನ ಕಾದು ಕುಳಿತು ಅವರ ಆಸಕ್ತಿಯನ್ನು ಕಡಿಮೆ ಮಾಡದೇ ಉತ್ತಮ ಚಿತ್ರವನ್ನು ನೀಡಿದ್ದೀರಿ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಹೀಗಾಗಿ ಬಾಹುಬಲಿಯನ್ನು ಮೆಚ್ಚಿ ಗಣ್ಯರು ಮಾಡಿರುವ ಟ್ವೀಟ್ ಗಳನ್ನು ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ: ಬಾಕ್ಸ್ ಆಫೀಸ್ ನಲ್ಲಿ ಬಾಹುಬಲಿ ಸುಂಟರಗಾಳಿ: 4 ದಿನಗಳಲ್ಲಿ ಎಷ್ಟು ಕಲೆಕ್ಷನ್ ಆಗಿದೆ? ಹಿಂದಿಯಲ್ಲಿ ಮತ್ತೊಂದು ದಾಖಲೆ

ಇದನ್ನೂ ಓದಿ: ಬಾಹುಬಲಿಗಾಗಿ 5 ವರ್ಷ ಮುಡಿಪಿಟ್ಟ ನಿರ್ದೇಶಕ ರಾಜಮೌಳಿಗೆ ಎಷ್ಟು ಹಣ ಸಿಗುತ್ತೆ ಗೊತ್ತಾ?

Leave a Reply

Your email address will not be published. Required fields are marked *