Monday, 18th June 2018

Recent News

ಟಿ20ಯಲ್ಲಿ ಭಾರತದ ಪರ ಯಾರೂ ಮಾಡದ ಎಡವಟ್ಟು ಮಾಡ್ಕೊಂಡ ಕೆಎಲ್ ರಾಹುಲ್!- ವಿಡಿಯೋ

ಕೊಲಂಬೊ: ನಿದಾಸ್ ತ್ರಿಕೋನ ಸರಣಿಯ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ತಮ್ಮ ಎಡವಟ್ಟಿನಿಂದಾಗಿ ಕೆಎಲ್ ರಾಹುಲ್ ಭಾರತ ಪರ ಟಿ20 ಮಾದರಿಯಲ್ಲಿ ಹಿಟ್ ವಿಕೆಟ್ ಆದ ಮೊದಲ ಆಟಗಾರರ ಎಂಬ ಕೆಟ್ಟ ದಾಖಲೆಗೆ ಪಾತ್ರರಾಗಿದ್ದಾರೆ.

ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ರಾಹುಲ್ ತಮ್ಮ ಸ್ವಯಂಕೃತ ತಪ್ಪಿನಿಂದ ಔಟ್ ಆದರು. ಪಂದ್ಯದ 10 ನೇ ಓವರ್ ಬೌಲ್ ಮಾಡಿದ ಲಂಕಾ ಸ್ಪಿನ್ನರ್ ಜೀವನ್ ಮೆಂಡಿಸ್ ಎಸೆತವನ್ನು ಎದುರಿಸಲು ರಾಹುಲ್ ಡೀಪ್ ಕ್ರಿಸ್ ನತ್ತ ನಡೆದರು. ಆದರೆ ಈ ವೇಳೆ ಅವರ ಬಲಗಾಲು ವಿಕೆಟ್ ಗೆ ತಾಗಿ ಹಿಟ್ ವಿಕೆಟ್ ಆದರು. ಈ ವೇಳೆ ರಾಹುಲ್ 17 ಎಸೆತಗಳಲ್ಲಿ 18 ರನ್ ಗಳಿಸಿದ್ದರು.

ಈ ಹಿಂದೆ ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಟೀಂ ಇಂಡಿಯಾ ಪರ ನಾಲ್ವರು ಆಟಗಾರು ಹಿಟ್ ವಿಕೆಟ್ ಆಗಿದ್ದು, 1995 ರಲ್ಲಿ ಪಾಕ್ ವಿರುದ್ಧ ಕೀಪರ್ ನಯಾನ್ ಮೊಂಗಿಯಾ ಮೊದಲ ಬಾರಿ ಹಿಟ್ ವಿಕೆಟ್ ಆಗಿದ್ದರು. ಬಳಿಕ 2003 ನ್ಯೂಜಿಲೆಂಡ್ ವಿರುದ್ಧ ಅನಿಲ್ ಕುಂಬ್ಳೆ, 2008 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಚಿನ್ ತೆಂಡೂಲ್ಕರ್ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2001 ರಲ್ಲಿ ಇಂಗ್ಲೆಂಡ್ ವಿರುದ್ಧ ಔಟ್ ಆಗಿದ್ದರು.

ವಿಶೇಷವಾಗಿ ವಿರಾಟ್ ಕೊಹ್ಲಿ ಟೆಸ್ಟ್ ಹಾಗೂ ಏಕದಿನ ಎರಡು ಮಾದರಿಗಳಲ್ಲಿ ಹಿಟ್ ವಿಕೆಟ್ ಆಗಿದ್ದಾರೆ. ಅಲ್ಲದೇ ಟೀಂ ಇಂಡಿಯಾ ಮಾಜಿ ಆಟಗಾರ ಮೊಹಿಂದರ್ ಅಮರನಾಥ್ ತಮ್ಮ 69 ಪಂದ್ಯಗಳ ಟೆಸ್ಟ್ ವೃತ್ತಿ ಜೀವನದಲ್ಲಿ ಮೂರು ಬಾರಿ ಹಿಟ್ ವಿಕೆಟ್ ಆಗಿದ್ದಾರೆ.

Leave a Reply

Your email address will not be published. Required fields are marked *