Monday, 18th June 2018

Recent News

ಆಸೀಸ್ ವಿರುದ್ಧ ಸತತ 7ನೇ ಟಿ20 ಗೆದ್ದ ಟೀಂ ಇಂಡಿಯಾ!

ರಾಂಚಿ:  ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಟಿ20 ಕ್ರಿಕೆಟ್ ಪಂದ್ಯದಲ್ಲಿ ಸತತ 7ನೇ ಗೆಲುವು ಸಾಧಿಸಿದೆ. 2012ರಲ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯಾ ಭಾರತವನ್ನು ಸೋಲಿಸಿತ್ತು. ಇದಾದ ನಂತರ ಒಟ್ಟು 6 ಪಂದ್ಯಗಳು ಇತ್ತಂಡಗಳ ನಡುವೆ ನಡೆದಿತ್ತು. ಈ ಆರೂ ಪಂದ್ಯಗಳಲ್ಲಿ ಟೀಂ ಇಂಡಿಯಾವೇ ಗೆಲುವು ಸಾಧಿಸಿತ್ತು.  ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 9 ವಿಕೆಟ್ ಗಳ ಗೆಲುವು ಸಾಧಿಸಿದೆ. ಮಳೆ ಹಿನ್ನೆಲೆಯಲ್ಲಿ ಡಕ್ ವರ್ತ್ ಲೂಯಿಸ್ ನಿಯಮದಂತೆ ಗೆಲ್ಲಲು ಭಾರತಕ್ಕೆ 6 ಓವರ್ ಗಳಲ್ಲಿ 48 ರನ್ ಗಳ ಟಾರ್ಗೆಟ್ ಸಿಕ್ಕಿತ್ತು. 48 ರನ್ ಟಾರ್ಗೆಟ್ ಬೆನ್ನತ್ತಿದ ಭಾರತಕ್ಕೆ ರೋಹಿತ್ ಶರ್ಮಾ ಉತ್ತಮ ಆರಂಭ ನೀಡಿದರು. 7 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದ ರೋಹಿತ್ ಶರ್ಮಾ 11 ರನ್ ಗೆ ಔಟಾದರು.

ಶಿಖರ್ ಧವನ್ 12 ಎಸೆತದಿಂದ 3 ಬೌಂಡರಿಗಳ ನೆರವಿನಿಂದ 15 ಹಾಗೂ ನಾಯಕ ವಿರಾಟ್ ಕೊಹ್ಲಿ 14 ಎಸೆತದಿಂದ 3 ಬೌಂಡರಿಗಳ ಜೊತೆ 22 ರನ್ ಗಳಿಸಿದರು. 5.3ನೇ ಓವರ್ ನಲ್ಲಿ ಬೌಂಡರಿ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಟೀಂ ಇಂಡಿಯಾವನ್ನು ಗೆಲುವಿನ ದಡ ದಾಟಿಸಿದರು.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಆಸ್ಟ್ರೇಲಿಯಾಗೆ ಕೇವಲ 18.4 ಓವರ್ ಮಾತ್ರ ಆಡಲು ಸಾಧ್ಯವಾಯಿತು. ಪಂದ್ಯದ ನಿಗದಿತ ಓವರ್ ಮುಗಿಯಲು 8 ಎಸೆತ ಬಾಕಿ ಇರುವಂತೆಯೇ ಮಳೆ ಆರಂಭವಾಯಿತು. ಈ ಹಿನ್ನೆಲೆಯಲ್ಲಿ ಆಸೀಸ್ ಇನ್ನಿಂಗ್ಸನ್ನು ಅಲ್ಲಿಗೇ ಕೊನೆಗೊಳಿಸಲಾಯಿತು. ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಓವರ್ ನಲ್ಲೇ ಭುವನೇಶ್ವರ್ ಕುಮಾರ್ ಆಘಾತ ನೀಡಿದರು. 5 ಎಸೆತಗಳಲ್ಲಿ 2 ಬೌಂಡರಿಗಳ ನೆರವಿನಿಂದ 8 ರನ್ ಗಳಿಸಿದ ನಾಯಕ ಡೇವಿಡ್ ವಾರ್ನರ್ ಬೌಲ್ಡ್ ಆದ್ರು.

ಆದರೆ ಫಿಂಚ್ ಆಸ್ಟ್ರೇಲಿಯಾ ತಂಡಕ್ಕೆ ಉತ್ತಮ ಆಸರೆಯಾದರು. ಒಂದೆಡೆ ಫಿಂಚ್ ಉತ್ತಮವಾಗಿ ಆಡುತ್ತಿದ್ದರೆ ಆಸ್ಟ್ರೇಲಿಯಾ ಆಟಗಾರರೆಲ್ಲರೂ ಪೆವಿಲಿಯನ್ ಪರೇಡ್ ನಡೆಸುತ್ತಿದ್ದರು. ಮ್ಯಾಕ್ಸ್ ವೆಲ್ 17, ಪೇನ್ 17, ಹೆಡ್ 9, ಹೆನ್ರಿಕ್ಸ್ 8, ಕ್ರಿಶ್ಚಿಯನ್ 9, ಕಾಲ್ಟರ್ ನೈಲ್ 1, ಝಂಪಾ 4 ರನ್ ಗಳಿಸಿದರು.

ಟೀ ಇಂಡಿಯಾ ಪರವಾಗಿ ಜಸ್ಪ್ರೀತ್ ಬೂಮ್ರಾ ಹಾಗೂ ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರೆ ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯಾ ಹಾಗೂ ಚಾಹಲ್ ತಲಾ 1 ವಿಕೆಟ್ ಪಡೆದರು. ಸ್ಪಿನ್ನರ್ ಕುಲದೀಪ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

Leave a Reply

Your email address will not be published. Required fields are marked *