Wednesday, 20th June 2018

Recent News

ಟಿ20ಯಲ್ಲಿ ಮೊದಲ ಬಾರಿಗೆ ಸೊನ್ನೆ ಸುತ್ತಿದ ವಿರಾಟ್ ಕೊಹ್ಲಿ!

ಗುವಾಹಟಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊತ್ತ ಮೊದಲ ಬಾರಿಗೆ ಶೂನ್ಯಕ್ಕೆ ಔಟಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಗುವಾಟಿಯ ಬರ್ಸಪಾರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ಪಂದ್ಯದಲ್ಲಿ ಕೊಹ್ಲಿ ಸೊನ್ನೆ ರನ್ ಗಳಿಸಿ ಔಟಾಗಿದ್ದಾರೆ.

ಎರಡು ಎಸೆತ ಎದುರಿಸಿದ್ದ ಕೊಹ್ಲಿ ಜೇಸನ್ ಬೆಹಂಡ್ರೂಫ್ ಎಸೆತದಲ್ಲಿ ಅವರಿಗೆ ಕ್ಯಾಚ್ ನೀಡುವ ಮೂಲಕ ಪೆವಿಲಿಯನ್ ಸೇರಿಕೊಂಡರು.

ಇದುವರೆಗೆ ಒಟ್ಟು 52 ಪಂದ್ಯಗಳ 48 ಇನ್ನಿಂಗ್ಸ್ ನಲ್ಲಿ ಕೊಹ್ಲಿ ಆಡಿದ್ದಾರೆ. 52 ಪಂದ್ಯಗಳಲ್ಲಿ 1852 ರನ್ ಗಳಿಸಿದ್ದಾರೆ. 17 ಬಾರಿ ಅರ್ಧ ಶತಕ ಬಾರಿಸಿರುವ ಕೊಹ್ಲಿ ಟಿ20 ಪಂದ್ಯದ ಗರಿಷ್ಠ ಮೊತ್ತ 90. 10 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿರುವ ಕೊಹ್ಲಿ, 5 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಒಟ್ಟು 48 ಇನ್ನಿಂಗ್ಸ್ ಗಳಲ್ಲಿ 199 ಬೌಂಡರಿ ಹಾಗೂ 35 ಸಿಕ್ಸ್ ಬಾರಿಸಿದ್ದಾರೆ.

ಕಳೆದ ವರ್ಷ ಜನವರಿ 26ರಂದು ಆಸ್ಟ್ರೇಲಿಯಾದ ಆಡಿಲೇಡ್ ನಲ್ಲಿ 55 ಎಸೆತಗಳಲ್ಲಿ 90 ರನ್ ಗಳಿಸಿದ್ದೇ ಕೊಹ್ಲಿಯ ಗರಿಷ್ಠ ರನ್ ಸಾಧನೆಯಾಗಿದೆ.

 

 

Leave a Reply

Your email address will not be published. Required fields are marked *