ಒಂದೂವರೆ ದಿನದಲ್ಲಿ 22 ವಿಕೆಟ್ ಪತನ: ರೋಚಕ ಘಟ್ಟದಲ್ಲಿ ಟೆಸ್ಟ್

 

ಪುಣೆ: ಮೊದಲ ದಿನ ಭಾರತೀಯ ಬೌಲರ್‍ಗಳು ಮೇಲುಗೈ. ಎರಡನೇ ದಿನ ಆಸ್ಟ್ರೇಲಿಯಾ ಬೌಲರ್‍ಗಳ ಮೇಲುಗೈ. ಒಂದೂವರೆ ದಿನದಲ್ಲೇ 22 ವಿಕೆಟ್ ಪತನ. ಇದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ  ಹೈಲೈಟ್ಸ್.

ಮೊದಲ ದಿನ ಉಮೇಶ್ ಯಾದವ್ ಮತ್ತು ಜಯಂತ್ ಯಾದವ್ ಅಬ್ಬರಿಸಿದರೆ, ಎರಡನೇ ದಿನ ಸ್ವೀವ್ ಓ ಕೀಫ್ ಬೌಲಿಂಗ್‍ಗೆ ತತ್ತರಿಸಿದ ಭಾರತ 40.1 ಓವರ್‍ಗಳಲ್ಲಿ 105 ರನ್‍ಗಳಿಗೆ ಅಲೌಟ್ ಆಗಿದೆ.

ಆರಂಭಿಕ ಆಟಗಾರ ಕೆಎಲ್ ರಾಹುಲ್ 64 ರನ್ (97 ಎಸೆತ, 10 ಬೌಂಡರಿ, 1ಸಿಕ್ಸರ್), ಅಜಿಂಕ್ಯಾ ರೆಹಾನೆ 13 ರನ್, ಮುರಳಿ ವಿಜಯ್ 10 ರನ್ ಬಾರಿಸಿದ್ದು ಹೊರತು ಪಡಿಸಿ ಯಾವೊಬ್ಬ ಆಟಗಾರ ಎರಡಂಕಿಯ ಗಡಿಯನ್ನು ದಾಟಲಿಲ್ಲ. 94 ರನ್ 3 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಭಾರತ ಭಾರತ 11 ರನ್‍ಗಳ ಅಂತರಲ್ಲಿ 7 ವಿಕೆಟ್ ಕಳೆದುಕೊಂಡಿತು. ನಾಯಕ ವಿರಾಟ್ ಕೊಹ್ಲಿ 2 ಬಾಲ್ ಎದುರಿಸಿ ಶೂನ್ಯ ರನ್‍ಗೆ ಔಟ್ ಆದರು.

ಯಾರು ಎಷ್ಟು ರನ್?
ಮುರಳಿ ವಿಜಯ್ 10, ಕೆಎಲ್ ರಾಹುಲ್ 64, ಚೇತೇಶ್ವರ ಪೂಜಾರಾ 6, ಕೊಹ್ಲಿ 0, ರಹಾನೆ 13, ಆರ್ ಅಶ್ವಿನ್1, ವೃದ್ಧಿಮಾನ್ ಸಹಾ 0, ರವೀಂದ್ರ ಜಡೇಜಾ 2, ಜಯಂತ್ ಯಾದವ್ 2, ಉಮೇಶ್ ಯಾದವ್ 4, ಇಶಾಂತ್ ಶರ್ಮ ಔಟಾಗದೇ 2ರನ್.

ಯಾರಿಗೆ ಎಷ್ಟು ವಿಕೆಟ್?
ಸ್ವೀವ್ ಓ’ ಕೀಫ್ 6 ವಿಕೆಟ್ ಗಳಿಸಿ ಮಿಂಚಿದರೆ, ಮಿಚೆಲ್ ಸ್ಟಾರ್ಕ್ 2 ವಿಕೆಟ್ ಗಳಿಸಿದರು. ಜೋಶ್ ಹೇಜಲ್‍ವುಡ್ ಮತ್ತು ನೇಥನ್ ಲಯಾನ್ ತಲಾ ಒಂದು ವಿಕೆಟ್ ಪಡೆದರು.

ಇತರೇ 1 ರನ್: ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 6 ಲೆಗ್‍ಬೈ, 9 ನೋಬಾಲ್ ಎಸೆಯುವ ಮೂಲಕ 15 ಇತರೇ ರನ್ ನೀಡಿದರೆ, ಆಸ್ಟ್ರೇಲಿಯಾದ ಬೌಲರ್‍ಗಳು ಶಿಸ್ತುಬದ್ಧ ಬೌಲಿಂಗ್ ನಡೆಸಿ ನೋಬಾಲ್ ರೂಪದಲ್ಲಿ 1 ರನ್ ಮಾತ್ರ ನೀಡಿದ್ದಾರೆ.

ಅರಂಭಿಕ ಕುಸಿತ: 155 ರನ್‍ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರರಿಬ್ಬರು ಔಟಾಗಿದ್ದಾರೆ. ಡೇವಿಡ್ ವಾರ್ನರ್ ಮತ್ತು ಸ್ವೀವ್ ಸ್ಮಿತ್ ಅಶ್ವಿನ್ ಬೌಲಿಂಗ್‍ನಲ್ಲಿ ಎಲ್‍ಬಿಗೆ ಬಲಿಯಾಗಿದ್ದಾರೆ. ಇತ್ತೀಚಿನ ವರದಿ ಬಂದಾಗ ಆಸ್ಟ್ರೇಲಿಯಾ 16 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು 46 ರನ್ ಗಳಿಸಿದೆ.

ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 260 ರನ್ (94.5 ಓವರ್)
ಭಾರತ ಮೊದಲ ಇನ್ನಿಂಗ್ಸ್ 105 ರನ್(40.1 ರನ್)

You might also like More from author

Leave A Reply

Your email address will not be published.

badge