Saturday, 23rd June 2018

Recent News

ಮಾಜಿ ಸಿಎಂ ಮನಸ್ಸು ಮಾಡಿದ್ರೆ 2 ನಿಮಿಷದಲ್ಲೇ ಸರ್ಕಾರ ಇರಲ್ಲ- ಸಿದ್ದು ಆಪ್ತ ನಾರಾಯಣ ಕೆಂಡಾಮಂಡಲ

ಬೀದರ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯವರನ್ನು ಯಾವ ನನ್ನ ಮಗನೂ ಕಡೆಗಣಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಸಿದ್ದರಾಮಯ್ಯನೇ. ಅವರು ಮನಸ್ಸು ಮಾಡಿದ್ರೆ ಎರಡು ನಿಮಿಷದಲ್ಲೇ ಸರ್ಕಾರ ಇರಲ್ಲ ಅಂತ ಬಸವಕಲ್ಯಾಣ ಕಾಂಗ್ರೆಸ್ ಶಾಸಕ ಬಿ. ನಾರಾಯಣ ಕಿಡಿಕಾರಿದ್ದಾರೆ.

ನಗರದಲ್ಲಿ ಮಾಜಿ ಸಚಿವ ಈಶ್ವರ್ ಖಂಡ್ರೆ ಸುದ್ದಿಗೋಷ್ಠಿ ಆಯೋಜಿಸಿದ್ದರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ಸಿನಲ್ಲಿ ಕಡೆಗಣಿಸಲಾಗುತ್ತಿದೆಯೇ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದ್ದಾರೆ.

ಈ ವೇಳೆ ಕೆಂಡಾಮಂಡಲರಾದ ಬಿ. ನಾರಾಯಣ, ಯಾವ ನನ್ ಮಗ ಕಡೆಗಣಿಸಲು ಆಗಲ್ಲ. ಅವರು ಸಿದ್ದರಾಮಯ್ಯ ಮನಸ್ಸು ಮಾಡಿದ್ರೆ ಎರಡು ನಿಮಿಷ ಸರ್ಕಾರ ಇರಲ್ಲ. ಸಿದ್ದರಾಮಯ್ಯಗೆ ಯಾರು ಅಗೌರವ ತೋರುತ್ತಾರೆ? ಯಾರು ಕಡೆಗಣನೆ ಮಾಡುತ್ತಾರೆ? ಅವರು ಪಕ್ಷದಿಂದಲೇ ಹೋಗುತ್ತಾರೆ. ಸಿದ್ದರಾಮಯ್ಯ ಕೂದಲಿಗೂ ಧಕ್ಕೆ ತರಲು ನಾವು ಬಿಡಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಅವರನ್ನು ಯಾರೂ ಮೂಲೆಗುಂಪು ಮಾಡಿಲ್ಲ. ಮೈತ್ರಿ ಸರ್ಕಾರದ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಅತಂಹ ಕೆಲಸ ಯಾರೂ ಮಾಡಲು ಆಗಲ್ಲ. ನಾವು ಅಂತಹ ನೀಚ ಕೆಲಸ ಮಾಡಲ್ಲ ಎಂದು ಹೇಳಿ ಸಿದ್ದರಾಮಯ್ಯನವರ ಬಗ್ಗೆ ಅಭಿಮಾನ ಹೊರ ಹಾಕಿದ್ದಾರೆ.

Leave a Reply

Your email address will not be published. Required fields are marked *