Tuesday, 22nd May 2018

Recent News

ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಎಸಿಬಿ ಯಲ್ಲಿನ ಪ್ರಕರಣಗಳ ಮರು ತನಿಖೆ: ಬಿಎಸ್‍ವೈ

ಕಾರವಾರ: ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಎಸಿಬಿಯಲ್ಲಿ ಪೂರ್ಣ ತನಿಖೆಯಾಗದೇ ಉಳಿದಿರುವ ಎಲ್ಲಾ ಪ್ರಕರಣಗಳ ಮರು ತನಿಖೆ ಮಾಡಿ ತಕ್ಕ ಶಾಸ್ತಿ ಮಾಡುತ್ತೇವೆಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭಟ್ಕಳದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ರಾಜ್ಯ ಸರ್ಕಾರ ಜನರು ಕೊಟ್ಟ ತೆರಿಗೆ ಹಣವನ್ನ ಲೂಟಿ ಮಾಡಿ ಲೋಕಾಯುಕ್ತ ಸಂಸ್ಥೆಯ ಶಕ್ತಿಯನ್ನ ಹಾಳುಮಾಡಿ ಎಸಿಬಿ ಎಂಬ ಸಂಸ್ಥೆಯನ್ನು ಕಟ್ಟಿಕೊಂಡಿದೆ. ನಿಮ್ಮ ಕುಟುಂಬದವರು ಹಾಗೂ ಮಂತ್ರಿಮಂಡಲದ ಶಾಸಕರು ಮಾಡಿದ ಹಗಲು ದರೋಡೆಯನ್ನ ಕುಲಾಫೆ ಮಾಡಿಸಿಕೊಳ್ಳಲು ಎಸಿಬಿ ಎಂಬ ಸಂಸ್ಥೆ ಕಟ್ಟಿಕೊಳ್ಳಲಾಗಿದೆ. ಕರ್ನಾಟಕದ ಕಾಂಗ್ರೆಸ್ ನ ಉಸ್ತುವಾರಿ ಹೊತ್ತಿರುವ ವೇಣುಗೋಪಾಲ್ ಒಬ್ಬ ಅತ್ಯಾಚಾರಿ. ಸಿದ್ದರಾಮಯ್ಯ ಒಬ್ಬ ಭ್ರಷ್ಟ. ಭ್ರಷ್ಟಾಚಾರಿ-ಅತ್ಯಾಚಾರಿ ಸೇರಿ ಸರ್ಕಾರ ನಡೆಸುತ್ತಿದ್ದಾರೆ. ಐಎನ್‍ಎ ವರದಿ ನೀಡಿದರೂ ಪಿಎಫ್‍ಐ ತಲೆಎತ್ತಲು ಸಿದ್ದರಾಮಯ್ಯನವರೇ ಕಾರಣರಾಗಿದ್ದಾರೆ. ಸಿದ್ದರಾಮಯ್ಯನವರು ಸಮುದಾಯಗಳ ನಡುವೆ ಜಾತಿಯ ವಿಷಬೀಜ ಬಿತ್ತಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಭಟ್ಕಳ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಿರುವ ಈ ಊರಿನ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಶಾಂತವಾಗಿದ್ದ ಕರಾವಳಿ ಉಗ್ರರ ತಾಂಡವಾಗಿದೆ. ಶಾಂತಿ ಕದಡಲು ಹೊರಟಿರುವ ಈ ಭಟ್ಕಳವನ್ನ ರಕ್ಷಣೆ ಮಾಡಬೇಕಿದೆ. ಕೋಮುವಾದವನ್ನ ಹತ್ತಿಕ್ಕಬೇಕಾದ ಸರ್ಕಾರ ಒಂದು ಕೋಮಿಗೆ ಪ್ರಾಮುಖ್ಯತೆ ನೀಡುತ್ತಿದೆ ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.

ಭಟ್ಕಳದಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಶ್ರೀರಾಮುಲು, ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *