Monday, 28th May 2018

Recent News

ಐಸಿಸಿ ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಜಸ್‍ಪ್ರೀತ್ ಬುಮ್ರಾ ಸರ್ವಶ್ರೇಷ್ಠ ಸಾಧನೆ!

ದುಬೈ: ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ 15 ವಿಕೆಟ್ ಕಿತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಜಸ್‍ಪ್ರೀತ್ ಬುಮ್ರಾ ಐಸಿಸಿ ಪ್ರಕಟಿಸಿದ ನೂತನ ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದ್ದಾರೆ.

23 ವರ್ಷದ ಬುಮ್ರಾ ಜೂನ್ ತಿಂಗಳಿನಲ್ಲಿ 24 ಶ್ರೇಯಾಂಕ ಪಡೆಯುವ ಮೂಲಕ ಜೀವನ ಶ್ರೇಷ್ಠ ಸಾಧನೆ ಮಾಡಿದ್ದರು. ಆದರೆ ಈಗ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ 687 ರೇಟಿಂಗ್ ಪಡೆಯುವ ಮೂಲಕ 4 ಸ್ಥಾನಕ್ಕೆ ಹಾರಿ ಸರ್ವಶ್ರೇಷ್ಠ ಸಾಧನೆ ಮಾಡಿದ್ದಾರೆ.

ಕೊನೆಯದಾಗಿ ಸೆಪ್ಟೆಂಬರ್ 3ಕ್ಕೆ ಅಪ್‍ಡೇಟ್ ಆಗಿರುವ ಶ್ರೇಯಾಂಕ ಪಟ್ಟಿಯಲ್ಲಿ ಅಕ್ಷರ್ ಪಟೇಲ್ 645 ರೇಟಿಂಗ್ ಪಡೆಯುವ ಮೂಲಕ 10ನೇ ಸ್ಥಾನವನ್ನು ಪಡೆದರೆ, 613 ರೇಟಿಂಗ್ ಪಡೆಯುವ ಮೂಲಕ ಭುವನೇಶ್ವರ್ ಕುಮಾರ್ 14ನೇ ಸ್ಥಾನವನ್ನು ಗಳಿಸಿದ್ದಾರೆ. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 23ನೇ ಸ್ಥಾನ, ಅಮಿತ್ ಮಿಶ್ರಾ 25ನೇ ಶ್ರೇಯಾಂಕ ಪಡೆದಿದ್ದಾರೆ.

ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‍ವುಡ್ 732 ರೇಟಿಂಗ್ ಪಡೆಯುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರೆ, 718 ರೇಟಿಂಗ್ ಪಡೆದಿರುವ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹೀರ್ ಎರಡನೇ ಸ್ಥಾನ ಪಡೆದಿದ್ದಾರೆ. 701 ರೇಟಿಂಗ್ ಪಡೆದಿರುವ ಆಸ್ಟ್ರೇಲಿಯಾದ ಮೈಕಲ್ ಸ್ಟ್ರಾಕ್ ಮೂರನೇ ಸ್ಥಾನ ಪಡೆದಿದ್ದಾರೆ.

ಏಕದಿನ ಬ್ಯಾಟಿಂಗ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 887 ರೇಟಿಂಗ್ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ. 764 ರೇಟಿಂಗ್ ಪಡೆಯುವ ಮೂಲಕ ರೋಹಿತ್ ಶರ್ಮಾ 9ನೇ ಸ್ಥಾನ ಪಡೆದುಕೊಂಡಿದ್ದಾರೆ.

ಆಲ್‍ರೌಂಡರ್ ಟಾಪ್ 10 ಪಟ್ಟಿಯಲ್ಲಿ ಸ್ಥಾನಗಳಿಸಲು ಟೀಂ ಇಂಡಿಯಾ ಆಟಗಾರರು ವಿಫಲರಾಗಿದ್ದು, 228 ರೇಟಿಂಗ್ ಪಡೆಯುವ ಮೂಲಕ ರವೀಂದ್ರ ಜಡೇಜಾ 15ನೇ ಸ್ಥಾನಗಳಿಸಿದ್ದಾರೆ.

 

 

Leave a Reply

Your email address will not be published. Required fields are marked *