ಮಂಡ್ಯ: ಈ ಮಣ್ಣಿನ ಸೊಸೆಯಾಗಿ ನಾನು ಕೊನೆಯ ಉಸಿರು ಇರುವವರೆಗೆ ಇರುತ್ತೇನೆ. ಮಂಡ್ಯದ ಸೊಸೆಯ ಸ್ಥಾನ ಯಾರಿಂದಲೂ ಕಿತ್ತುಕೊಳ್ಳಲು ಆಗಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ನುಡಿದರು.
ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸುಮಲತಾ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕೆಪಿಸಿಸಿ ಮಾಜಿ ಸದಸ್ಯ ಸಚ್ಚಿದಾನಂದರನ್ನು ಅವರು ಇದ್ದ ಪಕ್ಷ ವಜಾ ಮಾಡಿತ್ತು. ವಜಾ ಮಾಡಿದ್ದರೂ ಸಚ್ಚಿ ನನ್ನ ಜೊತೆ ನಿಂತಿದ್ದ. ಆತ ನಮ್ಮ ಮನೆಯ ಮಗ, 20 ವರ್ಷಗಳಿಂದ ಆತನನ್ನು ನೋಡಿಕೊಂಡು ಬಂದಿದ್ದೇನೆ ಎಂದರು.
ಎಲೆಕ್ಷನ್ ಗೆದ್ದ ದಿನದಿಂದಲೂ ಮಂಡ್ಯದಲ್ಲಿ ರಾಜಕೀಯ ಮಾಡುತ್ತಾರೆ. ನಮಗೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ. ಮಂಡ್ಯ ಜಿಲ್ಲೆಗೂ ಸ್ವಾತಂತ್ರ್ಯ ಬರಬೇಕಿದೆ. ಮಂಡ್ಯದಲ್ಲಿ ಬದಲಾವಣೆಯಾಗಬೇಕಿದೆ. ಕೊರೊನಾ ಸಂದರ್ಭದಲ್ಲಿ ಜನ ಪ್ರಾಣ ಕಳೆದುಕೊಳ್ಳುತ್ತಿದ್ದರು. ಈ ವೇಳೆ ಸಭೆ ಕರೆದರೆ ಗಲಭೆಗಳನ್ನು ಮಾಡುತ್ತಾ ಇದ್ದರು. ಇದಕ್ಕೆಲ್ಲಾ ಫುಲ್ಸ್ಟಾಪ್ ಇಡಬೇಕು. ಸಚ್ಚಿ ಅಂತಹವರನ್ನು ಮುಂದೆ ಗೆಲ್ಲಿಸಬೇಕು ಎಂದರು. ಇದನ್ನೂ ಓದಿ: ಟಿಪ್ಪು ಫ್ಲೆಕ್ಸ್ ಹರಿದ ಪ್ರಕರಣ – ಪುನೀತ್ ಕೆರೆಹಳ್ಳಿ ಬಂಧನ
ನಮ್ಮ ಜಿಲ್ಲೆಯಲ್ಲಿ ಎಲ್ಲಿ ಹೋದರೂ ಜನರು ಅಂಬರೀಶ್ ಅವರನ್ನು ನೆನಪಿಸಿಕೊಳ್ಳುತ್ತಾರೆ. ಅವರು ಮಾಡಿರುವ ಸೇವೆಗಳೇ ಅಂತಹದ್ದು. ಚುನಾವಣೆ ಸಂದರ್ಭದಲ್ಲಿ ರೈತರು ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದರು. ಮೈಶುಗರ್ ಅನ್ನು ಪುನರಾರಂಭ ಮಾಡಬೇಕೆಂದು ಕೇಳಿಕೊಂಡಿದ್ದರು. 3 ವರ್ಷದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿರುವುದು ನಿಮ್ಮ ಮುಂದೆಯೇ ಇದೆ. ಕೆಆರ್ಎಸ್ಗೆ ಅಪಾಯವಾಗುವ ಜಾಗದಲ್ಲಿ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.
ಇದು ಎಷ್ಟೋ ವರ್ಷಗಳ ಹೋರಾಟ. ನಾನು 3 ವರ್ಷದಿಂದ ಸಿಎಂ ಹಾಗೂ ಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಈಗ ಕೊಟ್ಟ ಮಾತನ್ನು ನೆರವೇರಿಸಿರುವ ತೃಪ್ತಿ ನನಗಿದೆ. ಒಂದಷ್ಟು ಜನ ಹೇಳುತ್ತಾರೆ, ರಾಜಕೀಯದಲ್ಲಿ ಏನು ಮಾಡಬೇಕು ಎಂದು ಸಲಹೆ ನೀಡುತ್ತಾರೆ. ನನಗೆ ಬೆಂಬಲ ಕೊಟ್ಟಿರುವವರ ಕೈಯನ್ನು ನಾನು ಬಿಡುವುದಿಲ್ಲ. ಸಚ್ಚಿಯನ್ನು ಸಹ ಕೈ ಬಿಡುವುದಿಲ್ಲ. ಅಂಬರೀಶ್ ಅವರು ಸೀಟ್ ಕೊಡಿ, ಮಂತ್ರಿ ಸ್ಥಾನ ಕೊಡಿ ಎಂದು ಕೇಳಿಲ್ಲ. ಅವರ ದಾರಿಯಲ್ಲಿಯೇ ನಾನು ಕೂಡಾ ನಡೆದುಕೊಂಡು ಹೋಗುತ್ತೇನೆ ಎಂದರು. ಇದನ್ನೂ ಓದಿ: ಗುರುರಾಯರ 351ನೇ ಆರಾಧನೆ – ಅದ್ಧೂರಿಯಾಗಿ ನೆರವೇರಿದ ಮಂತ್ರಾಲಯದ ಮಹಾರಥೋತ್ಸವ
ಅಭಿಷೇಕ್ ಹಾಗೂ ಸಚ್ಚಿದಾನಂದ ಇವರಿಬ್ಬರಲ್ಲಿ ಯಾರಿಗೆ ಬೆಂಬಲ ಕೊಡುತ್ತೀರಿ ಎಂದು ಕೇಳಿದರೆ, ನಾನು ಸಚ್ಚಿಗೇ ಕೊಡುತ್ತೇನೆ. ಅಭಿಷೇಕ್ಗಾಗಿ ನಾನು ಏನನ್ನೂ ಕೇಳುವುದಿಲ್ಲ. ಅಂಬರೀಶ್ ಕುಟುಂಬದಲ್ಲಿ ಕುಟುಂಬ ರಾಜಕೀಯ ಮಾಡುವುದಿಲ್ಲ. ಕುಟುಂಬ ರಾಜಕೀಯ ಮಾಡುವವರು ಇದ್ದಾರೆ, ಅರ್ಯಾರು ಎಂಬುದು ಎಲ್ಲರಿಗೂ ಗೊತ್ತು. ಇನ್ನು 7-8 ತಿಂಗಳಿನಲ್ಲಿ ಬದಲಾವಣೆಗೆ ಅವಕಾಶವಿದೆ. ಆ ಬದಲಾವಣೆಗಳನ್ನು ಮಾಡಿ, ಈ ಮಣ್ಣಿನ ಸೊಸೆಯಾಗಿಯೇ ಇರುವೆ ಎಂದು ಹೇಳಿಕೆ ನೀಡಿದರು.
Live Tv
[brid partner=56869869 player=32851 video=960834 autoplay=true]