Saturday, 24th March 2018

Recent News

ಈ ಕಾರಣಕ್ಕೆ `ಐ ಲವ್ ಅನುಷ್ಕಾ’ ಅಂದ್ರು ವಿರಾಟ್ ಕೊಹ್ಲಿ

ಮುಂಬೈ: ಟೀಂ ಇಂಡಿಯಾ ನಾಯಕ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಅವರ ರಿಲೇಷನ್‍ಶಿಪ್ ಬಗ್ಗೆ ಈಗಾಗಲೇ ಸಾಮಾಜಿಕ ತಾಣಗಳಲ್ಲಿ ಸುದ್ದಿ ಹರಿದಾಡುತ್ತಿವೆ. ಈಗ ವಿರಾಟ್ ಕೊಹ್ಲಿ ತಮ್ಮ ಗೆಳತಿ ಅನುಷ್ಕಾರನ್ನು ನಾನು ಯಾವ ಕಾರಣಕ್ಕೆ ಇಷ್ಟಪಡುತ್ತೇನೆ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.

ದೀಪಾವಳಿ ಹಬ್ಬದ ಪ್ರಯುಕ್ತ ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಮತ್ತು ಅಮೀರ್ ಖಾನ್ ಭಾಗವಹಿಸಿದ್ದರು. ‘ಅಮೀರ್ ಔರ್ ವಿರಾಟ್ ಕೇ ಸಾಥ್’ ಕಾರ್ಯಕ್ರಮದಲ್ಲಿ ಕೊಹ್ಲಿ ಅನುಷ್ಕಾಳ ಬಗ್ಗೆ ತಮ್ಮ ಮನದಾಳದ ಮಾತನ್ನು ಆಡಿದ್ದು, ಅವಳ ಪ್ರಾಮಾಣಿಕತೆಗೆ `ಐ ಲವ್ ಅನುಷ್ಕಾ’ ಎಂದು ಹೇಳಿದ್ದಾರೆ.

ಅನುಷ್ಕಾರನ್ನು ನಾನು ದೀರ್ಘಕಾಲದಿಂದಲೂ ನೋಡಿದ್ದೇನೆ. ನಾವಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದೇವೆ. ಆದ್ದರಿಂದ ಆಕೆ ಏನು ಎಂದು ನನಗೆ ಚೆನ್ನಾಗಿ ಗೊತ್ತು. ಆಕೆ ಒಬ್ಬ ದೊಡ್ಡ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.

ಈ ವೇಳೆ ನೀವು ಅವರಲ್ಲಿ ಇಷ್ಟ ಪಡುವ ಒಂದು ಗುಣವನ್ನು ಹೇಳಿ ಎಂದು ಅಮೀರ್ ಖಾನ್ ಪ್ರಶ್ನೆ ಮಾಡಿದಾಗ, ಆಕೆಯಲ್ಲಿ ಬಹಳಷ್ಟು ಉತ್ತಮ ಗುಣ ಇದೆ. ಅದೇ ನನಗೆ ತುಂಬ ಇಷ್ಟ. ಆಕೆಯ ಪ್ರಾಮಾಣಿಕತೆ ನನಗೆ ತುಂಬಾ ಇಷ್ಟ. ಅವರಿಂದ ನಾನು ಕಲಿಯುವುದು ತುಂಬಾ ಇದೆ ಎಂದು ತಮ್ಮ ಪ್ರೀತಿಯನ್ನು ಕೊಹ್ಲಿ ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *