Saturday, 20th January 2018

ನನಗಿನ್ನೂ ಛಲವಿದೆ, ದೇವರು ಶಕ್ತಿ ಕೊಟ್ಟಿದ್ದಾನೆ, ಪಕ್ಷಕ್ಕಾಗಿ ಹೋರಾಡುತ್ತೇನೆ: ಹೆಚ್‍ಡಿ ದೇವೇಗೌಡ

ಬಾಗಲಕೋಟೆ: ನನಗಿನ್ನೂ ಛಲವಿದೆ. ದೇವರು ಶಕ್ತಿ ಕೊಟ್ಟಿದ್ದಾನೆ. ಚುನಾವಣೆ 2 ತಿಂಗಳಿಗೆ ಬರಲಿ ಅಥವಾ 7 ತಿಂಗಳಿಗೇ ಬರಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡ ಹೇಳಿದ್ದಾರೆ.

ಕೊನೆಯ ಶ್ರಾವಣ ಸೋಮವಾರದ ಅಂಗವಾಗಿ ಇಂದು ಜಿಲ್ಲೆಯ ತುಳಸಿಗೇರಿ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಮತ್ತು ಕಾಂಗೆಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಅಧಿಕಾರದ ಗದ್ದುಗೆ ಹಿಡಿಯಲಿದ್ದೇವೆ. ಹಿಂದೆ ಕುಮಾರಸ್ವಾಮಿ ಬಿಜೆಪಿಗೆ ಬೆಂಬಲಿಸಿದಾಗ ಕಾಂಗ್ರೆಸ್ ಏನು ಮಾಡಿದೆ ಅಂತಾ ನನಗೆ ಗೊತ್ತಿದೆ. ಹೀಗಾಗಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೆ ಏಕಾಂಗಿಯಾಗಿ ಹೋರಾಟ ನಡೆಸಿ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದರು.

ಕುಮಾರಸ್ವಾಮಿ ಬಿಜೆಪಿಗೆ ಬೆಂಬಲಿಸಿದಾಗ ಏನಾಗಿದೆ, ಕಾಂಗ್ರೆಸ್ ಏನೆಲ್ಲಾ ಮಾಡಿದೆ ಅನ್ನೋದು ನನಗೆ ಚೆನ್ನಾಗಿ ಗೊತ್ತಿದೆ. ಸಿ ಪೋರ್  ಚುನಾವಣೆ ಸಮೀಕ್ಷೆ ಕುರಿತು ನಾನು ಈ ಬಗ್ಗೆ ಏನು ಮಾತನಾಡೋದಿಲ್ಲ. ಅದರ ಬಗ್ಗೆ ಎಲ್ಲವನ್ನು ತಿಳಿದು ಆ. 26ರಂದು ಬೆಂಗಳೂರಿನಲ್ಲಿ ಹೇಳುತ್ತೇನೆ. ಪಕ್ಷ ಅಧಿಕಾರಕ್ಕೆ ಬರದೇ ಹೋದ್ರೆ ಕುಮಾರಸ್ವಾಮಿ ಅವರನ್ನ ವಿರೋಧಪಕ್ಷದ ಸ್ಥಾನದಲ್ಲಿ ಕುಳಿತು ಕೆಲಸ ಮಾಡಲು ಹೇಳುತ್ತೇನೆ ಎಂದು ದೇವೇಗೌಡ ತಿಳಿಸಿದರು.

Leave a Reply

Your email address will not be published. Required fields are marked *