Sunday, 27th May 2018

Recent News

ಸೆಕ್ಸ್ ರ‍್ಯಾಕೆಟ್: ಇಬ್ಬರು ನಟಿಯರು ಸೇರಿ ಐವರ ಬಂಧನ-ಕಾಂಡೋಮ್, ಹಣ ಪತ್ತೆ

ಹೈದರಾಬಾದ್: ಎರಡು ದಿನಗಳ ಹಿಂದೆ ನಗರದಲ್ಲಿ ಪೊಲೀಸರು ಹೈ ಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ್ದು, ಇಬ್ಬರೂ ನಟಿಯರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

ರಿಚಾ ಸೆಕ್ಸೆನಾ ಮತ್ತು ಶುಭ್ರಾ ಚಟರ್ಜಿ ಸೆಕ್ಸ್ ದಂಧೆಯಲ್ಲಿಯಲ್ಲಿ ಬಂಧಿತರಾದ ನಟಿಯರು. ಇಬ್ಬರೂ ತೆಲಗು ಮತ್ತು ಬಂಗಾಳಿ ಸಿನಿಮಾಗಳ ನಟಿಯರಾಗಿದ್ದು, ಹೈದರಾಬಾದ್ ನ ತಾಜ್ ಡೆಕ್ಕನ್ ಹೋಟೆಲ್ ನಲ್ಲಿ ರೂಮ್ ಬಾಡಿಗೆಗೆ ಪಡೆದುಕೊಂಡು ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ದರು. ಪಿಂಪ್ (ದಲ್ಲಾಳಿ) ಒಬ್ಬ ಆನ್‍ಲೈನ್ ಮೂಲಕ ಗಿರಾಕಿಗಳನ್ನು ಬುಕ್ ಮಾಡಿ ಇವರತ್ತ ಕಳುಹಿಸುತ್ತಿದ್ದನು. ಪೊಲೀಸರು ಐಪಿ ಅಡ್ರೆಸ್ ಮೂಲಕ ಪಿಂಪ್ ವಿಳಾಸವನ್ನು ಪತ್ತೆ ಹಚ್ಚಿ, ಸಿವಿಲ್ ಡ್ರೆಸ್ ನಲ್ಲಿ ಬಂದು ನಟಿಯರನ್ನು ಬಂಧಿಸಿದ್ದಾರೆ.

ದಾಳಿ ವೇಳೆ ಪೊಲೀಸರಿಗೆ ಹೋಟೆಲ್ ನಲ್ಲಿ 50 ಸಾವಿರ ನಗದು, ಮೊಬೈಲ್ ಫೋನ್ ಮತ್ತು ಕೆಲವು ಕಾಂಡೋಮ್ ಗಳು ಸಿಕ್ಕಿವೆ. ಬಂಧಿತರಲ್ಲಿ ಇಬ್ಬರು ನಟಿಯರಾದ್ರೆ, ದಂಧೆಯ ಸಂಘಟಕ, ಮತ್ತೊಬ್ಬ ಬಾಲಿವುಡ್ ಸಿನಿಮಾ ನಿರ್ದೇಶಕ ಮೊನಿಶಾ ಕಾಡಕೈ, ಇನ್ನೊಬ್ಬ ಆಂಧ್ರ ಪ್ರದೇಶದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ವೆಂಕಟ್ ರಾವ್ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೋಟೆಲ್ ನ ಇಬ್ಬರೂ ಮ್ಯಾನೇಜರ್ ಗಳನ್ನು ಸಹ ಬಂಧಿಸಿದ್ದಾರೆ. ನಟಿಯರ ರೂಮಿಗೆ ಪುರುಷರನ್ನು ಕಳುಹಿಸುತ್ತಿದ್ದ ಪಿಂಪ್ ನಾಪತ್ತೆಯಾಗಿದ್ದಾನೆ.

ಇಬ್ಬರೂ ನಟಿಯರು ಹೋಟೆಲ್ ನ ಎರಡು ಬೇರೆ ರೂಮಿನಲ್ಲಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಮೂಲದ ಇಬ್ಬರೂ ನಟಿಯರನ್ನು ಪೊಲೀಸರು ಬಂಧಿಸಿದ್ದು, ಮೊಬೈಲ್ ಫೋನ್, ಹಣ, ಅಶ್ಲೀಲ ಫೋಟೋಗಳು, ನಟಿಯರ ಫೋನ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಸೆಕ್ಸ್ ರ‍್ಯಾಕೆಟ್ ಪಿಂಪ್ ಗಳು ನಗರದ ಶ್ರೀಮಂತ ವ್ಯಕ್ತಿಗಳಿಗೆ ಬಲೆಯನ್ನು ಬೀಸುತ್ತಿದ್ದರು. ಒಂದು ರಾತ್ರಿಗೆ ಒಂದು ಲಕ್ಷ ರೂ. ರೇಟ್ ಫಿಕ್ಸ್ ಮಾಡಿದ್ದರು. ಆದರೆ ವೇಶ್ಯಾವಾಟಿಕೆಯ ಮುಖ್ಯಸ್ಥ ಮಾತ್ರ ಗಿರಾಕಿಗಳಿಂದ ಭಾರೀ ಮೊತ್ತದ ಹಣವನ್ನು ಪಡೆದುಕೊಂಡು, ನಟಿಯರಿಗೆ ಕಡಿಮೆ ಹಣವನ್ನು ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಪಿಂಪ್ ಗಳು ನಟಿಯರಿಗೆ ಸಿನಿಮಾದಲ್ಲಿ ಇದಕ್ಕೂ ಹೆಚ್ಚಿನ ಹಣವನ್ನು ಗಳಿಸಬಹುದು ಎಂದು ನಂಬಿಸಿದ್ದರು.

Leave a Reply

Your email address will not be published. Required fields are marked *