Saturday, 23rd June 2018

Recent News

ಹೆಂಡ್ತಿ ತಮ್ಮಂದಿರ ಮೇಲಿನ ಕೋಪಕ್ಕೆ ಹೊಸ ಬೈಕ್‍ನ್ನ ಸುಟ್ಟ ಗಂಡ

ಚಿಕ್ಕಬಳ್ಳಾಪುರ: ಹೆಂಡತಿ ತಮ್ಮಂದಿರ ಮೇಲಿನ ಕೋಪಕ್ಕೆ ಹೊಸ ಬೈಕ್ ಗೆ ಗಂಡನೊರ್ವ ಬೆಂಕಿ ಹಾಕಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಗಂಗನಮಿದ್ದೆ ಬಳಿ ನಡೆದಿದೆ.

ಗಂಗನಮಿದ್ದೆ ನಿವಾಸಿ ಸೋಮಶೇಖರ್ ಬೈಕ್‍ಗೆ ಬೆಂಕಿ ಹಚ್ಚಿರುವ ಪತಿ. ಸೋಮಶೇಖರ್ ದೊಡ್ಡಬಳ್ಳಾಪುರ ತಾಲೂಕಿನ ಮೋಪರಹಳ್ಳಿ ಗ್ರಾಮದ ಶೈಲಜಾ ಎಂಬವರನ್ನು ಮದುವೆಯಾಗಿ 12 ವರ್ಷಗಳು ಕಳೆದಿವೆ. ಆದ್ರೆ ಕಳೆದ ಒಂದು ವರ್ಷದಿಂದ ಶೈಲಜಾ ಗಂಡನ ಮನೆ ಬಿಟ್ಟು ತವರು ಮನೆ ಸೇರಿದ್ದಾರೆ. ಪತ್ನಿ ತವರು ಸೇರಿದ ಬಳಿಕ ಸೋಮಶೇಖರ್ ಕೂಡ ಅಲ್ಲಿಯೇ ಹೋಗಿ ವಾಸವಾಗಿದ್ದಾರೆ.

ಆರು ತಿಂಗಳ ಹಿಂದೆ ಸೋಮಶೇಖರ್ ಸಾಲ ಮಾಡಿ ಪ್ಯಾಷನ್ ಪ್ರೋ ಬೈಕ್ ಖರೀದಿಸಿದ್ರು. ಆದ್ರೆ ಬೈಕ್ ಖರೀದಿಸಿದ ನಂತರ ಸೋಮಶೇಖರ್‍ಗಿಂತ ಆತನ ಭಾಮೈದರು ಹೆಚ್ಚಾಗಿ ಚಲಾಯಿಸುತ್ತಿದ್ದರು. ಸೋಮಶೇಖರ್ ಬೈಕಿಗೆ ಪೆಟ್ರೋಲ್ ಹಾಕಿಸಿಕೊಂಡು ಬಂದರೆ ಭಾಮೈದರು ಬೈಕ್ ತೆಗೆದುಕೊಂಡು ಹೋಗಿ ಪೆಟ್ರೋಲ್ ಖಾಲಿಯಾದ ಬಳಿಕ ಮನೆಯ ಮುಂದೆ ತಂದು ನಿಲ್ಲಿಸುತ್ತಿದ್ರು ಎಂದು ಹೇಳಲಾಗುತ್ತಿದೆ.

ಬೈಕ್ ಸಂಬಂಧ ಈ ಹಿಂದೆ ಸೋಮಶೇಖರ್, ಪತ್ನಿ ಮತ್ತು ಆಕೆಯ ಸೋದರರೊಂದಿಗೆ ಗಲಾಟೆಗಳು ನಡೆದಿವೆ. ಈ ಘಟನೆಯಿಂದಾಗ ಪತ್ನಿಯ ಮೇಲೆ ಕೋಪಗೊಂಡ ಸೋಮಶೇಖರ್ ಇಂದು ಬೆಳಗ್ಗೆ ಕುಡಿದ ಅಮಲಿನಲ್ಲಿ ಬೈಕ್ ಇದ್ರೇ ತಾನೇ ಗಲಾಟೆ ಅಂತ ಬೈಕ್ ಗೆ ಬೆಂಕಿ ಹಾಕಿ ಸುಟ್ಟು ಹಾಕಿದ್ದಾರೆ. ಗ್ರಾಮಸ್ಥರು ಕೂಡಲೇ ಅಗ್ನಿಶಾಮಕದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬೆಂಕಿ ನಂದಿಸುವಷ್ಟರಲ್ಲಿ ಹೊಸ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ.

Leave a Reply

Your email address will not be published. Required fields are marked *