Tuesday, 24th April 2018

Recent News

ರಾಮನವಮಿಗೆ ಸ್ಪೆಷಲ್ ಹೆಸರುಬೇಳೆ ಕೋಸಂಬರಿ ಮಾಡೋದು ಹೇಗೆ?

ಕರ್ನಾಟಕ ಶೈಲಿಯ ಪ್ರಮುಖ ಪಾಕವಿಧಾನಗಳಲ್ಲಿ ಹೆಸರು ಬೇಳೆ ಕೋಸಂಬರಿಯೂ ಒಂದಾಗಿದೆ. ಇದನ್ನು ಉತ್ಸವ ಹಾಗೂ ಹಬ್ಬಗಳಲ್ಲಿ ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತಿದೆ. ಹೀಗಾಗಿ ಹೆಸರು ಬೇಳೆ ಕೋಸಂಬರಿ ಮಾಡೋ ಸುಲಭ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು
* ಹೆಸರು ಬೇಳೆ – 50 ಗ್ರಾಂ
* ಬಿಡಿಸಿದ ದಾಳಿಂಬೆ ಕಾಳು – 1/4 ಕಪ್
* ಸೌತೆಕಾಯಿ- 1
* ಕೊತ್ತಂಬರಿ – ಸ್ವಲ್ಪ
* ಕಾಯಿ ತುರಿ – ಸ್ವಲ್ಪ
* ಕ್ಯಾರೆಟ್ ತುರಿ – ಸ್ವಲ್ಪ
* ಈರುಳ್ಳಿ – ಚಿಕ್ಕದು, ಸಣ್ಣಗೆ ಹೆಚ್ಚಿದ್ದು
* ನಿಂಬೆಹಣ್ಣು – ಮೀಡಿಯಂ ಸೈಜ್

ಒಗ್ಗರಣೆಗೆ ಬೇಕಾಗುವ ಸಾಮಾಗ್ರಿಗಳು
* ಕಡ್ಲೆಬೇಳೆ – 1 ಟಿಎಸ್‍ಪಿ
* ಉದ್ದಿನ ಬೇಳೆ – 1 ಟಿಎಸ್‍ಪಿ
* ಎಣ್ಣೆ – 2 ಟಿಎಸ್‍ಪಿ
* ಕೆಂಪು ಮೆಣಸಿನಕಾಯಿ – 3-4
* ಸಾಸಿವೆ – ಚಿಟಿಕೆ
* ಇಂಗು – ಚಿಟಿಕೆ
* ಜೀರಿಗೆ – ಚಿಟಿಕೆ
* ಕರಿಬೇವು – ಸ್ವಲ್ಪ

ಮಾಡುವ ವಿಧಾನ
* ಮೊದಲು ಹೆಸರುಬೇಳೆಯನ್ನು ಅರ್ಧಗಂಟೆ ನೆನೆಸಿ, ಸೋಸಿಡಿ.
* ಒಂದು ಮಿಕ್ಸಿಂಗ್ ಬೌಲ್‍ಗೆ ಸಣ್ಣಗೆ ಹೆಚ್ಚಿ ನೀರು ಹಿಂಡಿದ ಸೌತೆಕಾಯಿ, ನೆನೆಸಿ ಸೋಸಿದ ಹೆಸರುಬೇಳೆ, ಬಿಡಿಸಿದ ದಾಳಿಂಬೆ, ಕ್ಯಾರೆಟ್ ತುರಿ, ಕಾಯಿ ತುರಿ, ಸಣ್ಣಗೆ ಕಟ್ ಮಾಡಿದ ಕೊತ್ತಂಬರಿಸೊಪ್ಪು, ಈರುಳ್ಳಿ, ನಿಂಬೆ ಹಣ್ಣಿನ ರಸ ಹಿಂಡಿ ಮಿಕ್ಸ್ ಮಾಡಿ.
* ಒಂದು ಪ್ಯಾನ್‍ಗೆ ಎಣ್ಣೆ ಹಾಕಿ, ಎಣ್ಣೆ ಕಾದ ಮೇಲೆ ಸಾಸಿವೆ, ಜೀರಿಗೆ, ಇಂಗು, ಹಾಕಿ ಸಿಡಿದ ಮೇಲೆ, ಕಡ್ಲೆಬೇಳೆ, ಉದ್ದಿನಬೇಳೆ ಹಾಕಿ ಫ್ರೈ ಮಾಡಿ. ಆಮೇಲೆ ಕರಿಬೇವು, ಕೆಂಪು ಮೆಣಸಿನಕಾಯಿ ಹಾಕಿ ಫ್ರೈ ಮಾಡಿಡಿ.
* ಬಳಿಕ ಫ್ರೈ ಮಾಡಿಟ್ಟ ಒಗ್ಗರಣೆಯನ್ನು ಮಿಕ್ಸಿಂಗ್ ಬೌಲ್‍ನಲ್ಲಿರುವ ಹೆಸರುಬೇಳೆ ಮಿಕ್ಸ್‍ಗೆ ಸೇರಿಸಿ ಕಲಸಿ ಸವಿಯಿರಿ.

Leave a Reply

Your email address will not be published. Required fields are marked *