Sunday, 18th February 2018

Recent News

ಸಿಂಪಲ್ ಬಾಳೆಹಣ್ಣಿನ ಹಲ್ವಾ ಮಾಡಲು ಇಲ್ಲಿದೆ ಟಿಪ್ಸ್

ಮನೆಯಲ್ಲಿ ಹಣ್ಣಾದ ಬಾಳೆಹಣ್ಣು ಇದೆ. ಇದರಲ್ಲಿ ಏನಾದ್ರೂ ರೆಸಿಪಿ ಮಾಡ್ಬೇಕು ಅಂತಾ ನೀವು ಯೋಚಿಸುತ್ತಿದ್ದೀರಾ. ಅದಕ್ಕಾಗಿ ಇಲ್ಲಿದೆ ನೋಡಿ ಒಂದು ಸೂಪರ್ ಸಿಂಪಲ್ ರೆಸಿಪಿ. ಸಖತ್ ಈಜೀಯಾಗಿ ಬಾಳೆಹಣ್ಣಿ ಹಲ್ವಾ ಮಾಡಿ ಟೇಸ್ಟ್ ನೋಡಿ.

ಬೇಕಾಗುವ ಸಾಮಾಗ್ರಿಗಳು:
1. ತುಪ್ಪ – 3-4 ಟೇಬಲ್ ಸ್ಪೂನ್
2. ಸಣ್ಣಗೆ ಹೆಚ್ಚಿದ ಬಾದಾಮಿ, ಗೋಡಂಬಿ ಸ್ವಲ್ಪ
3. ದ್ರಾಕ್ಷಿ ಸ್ವಲ್ಪ
4. ರವೆ – 1 ಕಪ್
5. ಹಣ್ಣಾದ ಬಾಳೆಹಣ್ಣು – 4-5
6. ಹಾಲು – 2.5 ಕಪ್
7. ಸಕ್ಕರೆ – 5-6 ಕಪ್
8. ಏಲಕ್ಕಿ ಪೌಡರ್

ಮಾಡುವ ವಿಧಾನ:
* ಮೊದಲಿಗೆ ಪ್ಯಾನ್‍ಗೆ ಸ್ವಲ್ಪ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿ, ಬಾದಾಮಿಯನ್ನು ಫ್ರೈ ಮಾಡಿಟ್ಟುಕೊಳ್ಳಿ.
* ಪ್ಯಾನ್‍ಗೆ ಸ್ವಲ್ಪ ತುಪ್ಪ ಹಾಕಿ 1 ಕಪ್ ರವೆ ಹಾಕಿ ಸುವಾಸನೆ ಬರುವವರೆಗೂ ಹುರಿಯಿರಿ.
* ಬಳಿಕ ಹಣ್ಣಾದ ಬಾಳೆಹಣ್ಣನ್ನು ಸಣ್ಣಗೆ ತುಂಡರಿಸಿ ಮಿಕ್ಸ್ ಮಾಡಿ.
* ನಂತರ 2.5 ಕಪ್ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುದಿಯಲು ಬಿಡಿ.
* ಅದಕ್ಕೆ ಸಕ್ಕರೆ ಸೇರಿಸಿ ಹಲ್ವಾ ಹದಕ್ಕೆ ಬರುವತನಕ ಕೈಯಾಡಿಸುತ್ತೀರಿ.
* ಕೊನೆಗೆ ಏಲಕಿ ಪೌಡರ್ ಹಾಕಿ, ಫ್ರೈ ಮಾಡಿಟ್ಟುಕೊಂಡ ದ್ರಾಕ್ಷಿ, ಗೋಡಂಬಿ, ಬಾದಾಮಿಯನ್ನು ಸೇರಿಸಿ ಕೆಳಗಿಳಿಸಿ.
ನಿಮ್ಮ ಸಿಂಪಲ್ ಬಾಳೆಹಣ್ಣಿನ ಹಲ್ವಾ ರೆಡಿ ಟು ಸರ್ವ್

Leave a Reply

Your email address will not be published. Required fields are marked *