Saturday, 21st April 2018

Recent News

ಶಾಕಿಂಗ್ ವಿಡಿಯೋ: ಬುಲೆಟ್ ಗುದ್ದಿದ ರಭಸಕ್ಕೆ ನೂರು ಅಡಿ ದೂರಕ್ಕೆ ಹೋದ ಬಾಲಕ

ಹೈದರಾಬಾದ್: ತೆಲಂಗಾಣ ರಾಜ್ಯದ ಕರೀಂನಗರ ಜಿಲ್ಲೆಯಲ್ಲಿ ಭಾನುವಾರ ಭಾರೀ ಅಪಘಾತವೊಂದು ನಡೆದಿದ್ದು ಬೈಕ್ ಗುದ್ದಿದ ರಭಸಕ್ಕೆ ಬಾಲಕನೊಬ್ಬ ಮೃತಪಟ್ಟಿದ್ದಾನೆ.

ತನ್ನ ಇಬ್ಬರು ಮಕ್ಕಳ ಜೊತೆ ಬಸ್ ನಿಲ್ದಾಣದಲ್ಲಿ ತಾಯಿಯೊಬ್ಬರು ನಿಂತಿದ್ದರು. ಈ ವೇಳೆ ಬಸ್ ಬಂದು ನಿಲ್ಲುತ್ತಿದ್ದಂತೆ 7 ವರ್ಷದ ಬಾಲಕ ಬಸ್‍ನತ್ತ ಓಡಿ ಹೋಗಿದ್ದಾನೆ. ಆದ್ರೆ ಅದೇ ರಸ್ತೆಯಲ್ಲಿ ತುಂಬಾ ವೇಗವಾಗಿ ಬಂದ ಬುಲೆಟ್ ಬೈಕ್ ಸವಾರ ಆ ಬಾಲಕನಿಗೆ ಗುದ್ದಿದ್ದಾನೆ.

ಬೈಕ್ ಗುದ್ದಿದ ರಭಸಕ್ಕೆ ಆ ಬಾಲಕ 100 ಅಡಿಗಳಷ್ಟು ದೂರಕ್ಕೆ ಹೋಗಿ ಬಿದ್ದಿದ್ದು, ಸ್ಥಳದಲ್ಲೇ ಪ್ರಾಣಪಕ್ಷಿ ಹಾರಿ ಹೋಗಿದೆ. ಮೊದಲಿಗೆ ಬೈಕ್ ನಿಲ್ಲಿಸಿದ ಆರೋಪಿ ಹೆಚ್ಚು ಜನರು ಸೇರುತ್ತಿರುವುದನ್ನು ಕಂಡು ಅಲ್ಲಿಂದ ಪರಾರಿಯಾಗಿದ್ದಾನೆ.

 

Leave a Reply

Your email address will not be published. Required fields are marked *