Monday, 18th December 2017

Recent News

ವಿಡಿಯೋ: ಟ್ರಕ್ ಡಿಕ್ಕಿಯಾಗಿ ಕೆಲವು ಅಡಿಗಳಷ್ಟು ದೂರ ಎಳೆದುಕೊಂಡು ಹೋದ್ರೂ ಜೀವಂತವಾಗಿ ಎದ್ದು ಬಂದ್ಳು!

ಬೀಜಿಂಗ್: ಮಹಿಳೆಯೊಬ್ಬಳಿಗೆ ಟ್ರಕ್ ಡಿಕ್ಕಿ ಹೊಡೆದು ಕೆಲವು ಅಡಿಗಳಷ್ಟು ದೂರ ಎಳೆದುಕೊಂಡರೂ ಹೋದರೂ ಆಕೆ ಟ್ರಕ್ ನಿಂತ ತಕ್ಷಣ ಎದ್ದು ನಿಲ್ಲೋ ಅಚ್ಚರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

ಬೈಕ್‍ನಲ್ಲಿ ಬರುತ್ತಿದ್ದ ಮಹಿಳೆ ಹಾಗೂ ಟ್ರಕ್ ಒಂದೇ ರಸ್ತೆಯಲ್ಲಿ ಟರ್ನ್ ಮಾಡಿವೆ. ಈ ವೇಳೆ ಪರಸ್ಪರ ಓವರ್‍ಟೇಕ್ ಮಾಡಲು ಹೋಗಿ ಬೈಕಿಗೆ ಟ್ರಕ್ ಡಿಕ್ಕಿಯಾಗಿದೆ. ವಿಡಿಯೋವನ್ನ ಸೂಕ್ಷ್ಮವಾಗಿ ಗಮನಿಸಿದಾಗ ಇದು ಕಾಣುತ್ತದೆ.

ಇದರ ಪರಿಣಾಮ ಬೈಕ್ ಸಮೇತ ಮಹಿಳೆ ಚಕ್ರದ ಕೆಳಗೆ ಸಿಲುಕಿದ್ದಾಳೆ. ಆದ್ರೆ ಟ್ರಕ್ ಚಾಲಕ ಇದನ್ನು ಗಮನಿಸಿಲ್ಲ. ಹೀಗಾಗಿ ಕೆಲವು ಅಡಿಗಳಷ್ಟು ದೂರ ಮಹಿಳೆಯನ್ನ ಎಳೆದುಕೊಂಡು ಹೋಗಿ ನಂತರ ಟ್ರಕ್ ನಿಂತಿದೆ. ಕೆಳಗಿಂದ ಮಹಿಳೆ ಹೊರಬಂದು ಏನೂ ಆಗೇ ಇಲ್ಲ ಎಂಬಂತೆ ಟ್ರಕ್ ಮುಂದೆ ನಿಂತಿದ್ದಾಳೆ.

ಈ ಎಲ್ಲಾ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.ಡಿಸೆಂಬರ್ 4ರಂದು ಇಲ್ಲಿನ ಮಾಧ್ಯಮವೊಂದು ಈ ವಿಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು. 3.75 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ.

ಇಷ್ಟೆಲ್ಲಾ ಆದರೂ ಟ್ರಕ್ ಚಾಲಕ ಕೆಳಗಿಳಿದು ಏನಾಯಿತು ಎಂದು ನೋಡಲಿಲ್ಲವಲ್ಲ ಅಂತ ಕೆಲವರು ಕಮೆಂಟ್ ಮಾಡಿದ್ದಾರೆ.

Her lucky day.

Her lucky day.

Shanghaiistさんの投稿 2017年12月3日(日)

 

One thought on “ವಿಡಿಯೋ: ಟ್ರಕ್ ಡಿಕ್ಕಿಯಾಗಿ ಕೆಲವು ಅಡಿಗಳಷ್ಟು ದೂರ ಎಳೆದುಕೊಂಡು ಹೋದ್ರೂ ಜೀವಂತವಾಗಿ ಎದ್ದು ಬಂದ್ಳು!

Leave a Reply

Your email address will not be published. Required fields are marked *