Friday, 15th December 2017

Recent News

ವಿಡಿಯೋ: ನಡುರೋಡಲ್ಲೇ ಪುಂಡರ ಎಣ್ಣೆ ಮಸ್ತಿ- ಬೆಂಗ್ಳೂರಲ್ಲಿ ಪೊಲೀಸ್ ಮೇಲೆಯೇ ದಾದಾಗಿರಿ

ಬೆಂಗಳೂರು: ರಾತ್ರಿ ವೇಳೆ ರೋಡಲ್ಲೇ ಗಾಂಜಾ, ಎಣ್ಣೆ ಹೊಡೆಯುತ್ತಿದ್ದುದನ್ನ ಪ್ರಶ್ನಿಸಿದ್ದಕ್ಕೆ ಪೊಲೀಸ್ ಮೇಲೆಯೇ ಹಲ್ಲೆ ಮಾಡಿ ಗೂಂಡಾಗಿರಿ ತೋರಿಸಿದವರು ಅಂದರ್ ಆಗಿದ್ದಾರೆ.

ಬೆಂಗಳೂರಿನ ವಿವೇಕನಗರ ಠಾಣಾ ವ್ಯಾಪ್ತಿಯಲ್ಲಿ ಶಿವ, ಕುಮಾರ್, ಜಗನ್, ಮುನಿ ಎಂಬ ಪುಡಿರೌಡಿಗಳು ರಸ್ತೆಯಲ್ಲೇ ಎಣ್ಣೆ ಹೊಡೀತಾ ಇದ್ರು. ಈ ವೇಳೆ ನೈಟ್‍ಬೀಟ್‍ನಲ್ಲಿದ್ದ ಪೇದೆ ಸಂತೋಷ್ ಕುಮಾರ್ ಪ್ರಶ್ನಿಸಿದಾಗ ಕಪಾಳಕ್ಕೆ ಹೊಡೆದು ಶರ್ಟ್ ಹರಿದು ಹಲ್ಲೆ ನಡೆಸಿದ್ದಾರೆ.

ಪೇದೆ ಸಂತೋಷ್ ಕುಮಾರ್ ಮೈ ಮುಟ್ಟಿದ್ದು ವಾಕಿಟಾಕಿಯಲ್ಲಿ ತಿಳಿತಾ ಇದ್ದಂತೆ ಸ್ಪಾಟ್‍ಗೆ ಬಂದ ವಿವೇಕ್‍ನಗರ ಇನ್ಸ್‍ಪೆಕ್ಟರ್ ಹೊಯ್ಸಳದಲ್ಲಿ ಲಾಕ್ ಮಾಡಿ ಎತ್ತಾಕ್ಕೊಂಡು ಹೋದ್ರು. ಇದು ಗೊತ್ತಾಗ್ತಿದ್ದಂತೆ ಪುಂಡರ ಪರ ವಹಿಸ್ಕೊಂಡು ಸ್ಟೇಷನ್ ಮುಂದೆ ಜಮಾಯಿಸಿ ಪ್ರೊಟೆಸ್ಟ್ ಮಾಡೋಕು ಮುಂದಾದ್ರು. ಆದ್ರೆ ಇವ್ರೆಲ್ಲಾ ಕುಡಿಯುತ್ತಿದ್ದ ಹಲ್ಲೆ ನಡೆಸಿದ್ದ ದೃಶ್ಯ ತೋರಿಸ್ತಿದ್ದಂತೆ ತೆಪ್ಪಗಾದ್ರು.

 

Leave a Reply

Your email address will not be published. Required fields are marked *